Psalms - Chapter 70
Holy Bible

1 : ಕರುಣೆಯಿಂದೆನ್ನನು ದೇವಾ, ರಕ್ಷಿಸು / ತ್ವರೆಯಾಗಿ ಬಂದು ಪ್ರಭು, ಉದ್ಧರಿಸು //
2 : ಪಡಲಿ ಮಾನಭಂಗ ನನ್ನ ಹತ್ಯವನು ಕೋರುವವರು / ನಾಚಿ ಓಡಲಿ ಹಿಂದಕೆ ನನಗಾಪತ್ತನು ಬಯಸುವವರು //
3 : “ಆಹಾಹಾ” ಎಂದೆನ್ನ ಜರೆಯುವವರು / ಬೆಂಗೊಟ್ಟು ಓಡಲಿ ಆ ಲಜ್ಜೆಗೆಟ್ಟವರು //
4 : ನಿನ್ನ ದರ್ಶನಾರ್ಥಿಗಳು ಹರ್ಷಿಸಲಿ, ನಿನ್ನಲಿ ನಲಿದು ಆನಂದಿಸಲಿ / ನಿನ್ನ ಉದ್ಧಾರಕ ಶಕ್ತಿ ಪ್ರಿಯರು ಸತತ “ದೇವನಿಗೆ ಉಘೇ” ಎನ್ನಲಿ //
5 : ದೇವಾ, ನಾ ದಿಕ್ಕಿಲ್ಲದವನು, ಕುಗ್ಗಿದವನು, ನನ್ನ ಬಳಿಗೆ ಬಾ / ನೀನೆನಗೆ ಸಹಾಯಕನು, ರಕ್ಷಕನು ಪ್ರಭು, ತಡಮಾಡದೆ ಬಾ //

Holydivine