Psalms - Chapter 58
Holy Bible

1 : ಜನನಾಯಕರೇ, ನ್ಯಾಯಬದ್ಧವೊ ನಿಮ್ಮ ತೀರ್ಪುಗಳು?/ ವ್ಯಾಜ್ಯಗಳನು ಬಗೆಹರಿಸುತ್ತವೆಯೆ ನಿಮ್ಮ ನಿರ್ಣಯಗಳು?//
2 : ಬದಲಿಗೆ ಕಲ್ಪಿಸುತ್ತೀರಿ ಅಕ್ರಮವನು ಮನದಲಿ / ಧರೆಗೀಯುತ್ತೀರಿ ಹಿಂಸಾಚಾರವನು ತೂಕದಲಿ //
3 : ದುರುಳರು ದಾರಿತಪ್ಪಿದವರು ಉದರದಿಂದಲೆ / ಸಟೆಯಾಡುವ ಅಕ್ರಮಿಗಳವರು ಹುಟ್ಟಿನಿಂದಲೆ //
4 : ಸರ್ಪಗಳಂತಾ ಜನ ವಿಷಭರಿತ / ನಾಗರದಂತೆ ಅವರ ಕಿವಿ ಮಂದ //
5 : ಒಲಿಯದವರ ಕಿವಿ ಪುಂಗಿಯ ನಾದಕೆ / ಮಣಿಯವು ಹಾವಾಡಿಗನ ಮಾಟಕೆ //
6 : ಮುರಿದುಬಿಡು ಹೇ ದೇವಾ, ಆ ದುರುಳರ ಹಲ್ಲುಗಳನು / ಕಿತ್ತುಬಿಡು ಪ್ರಭು, ಆ ಪ್ರಾಯಸಿಂಹಗಳ ಕೋರೆಗಳನು //
7 : ಅವರಾಗಲಿ ಬೇಗನೆ ಕಾಣದೆ ಹೋಗುವ ತೊರೆಯಂತೆ / ನಸುಕಿ ನಾಶವಾಗಲಿ ಪಾದದಡಿ ಸಿಲುಕಿದ ಗರಿಕೆಕಣದಂತೆ //
8 : ನುಸುಳಿ ನುಸುಳಿ ನಶಿಸಿಹೋಗಲಿ ಬಸವನ ಹುಳದಂತೆ / ರವಿಯ ಬೆಳಕನು ಕಾಣದಿರಲಿ ಗರ್ಭವಿಳಿದ ಪಿಂಡದಂತೆ //
9 : ಹಸುರಿರಲಿ ಒಣಗಿರಲಿ, ಒಲೆ ಪಾಲಾಗಲಿ ಮುಳ್ಳಿನಂತೆ / ನಿಶ್ಯೇಷವಾಗಲಿ ದೇವಕೋಪಾಗ್ನಿಗೆ ಸಿಲುಕಿದಂತೆ //
10 : ನಲಿವರು ಸಜ್ಜನರು ಈ ಪ್ರತೀಕಾರ ನೋಟದಲಿ / ಕಾಲುತೊಳೆಯುವರವರು ಆ ದುರ್ಜನರ ನೆತ್ತರಲಿ //
11 : “ನ್ಯಾಯ ನಿರ್ಣಯಿಸುವಂಥ ದೇವನಿಹನು ಜಗದಲಿ | ಸಜ್ಜನರಿಗೆ ಸತ್ಫಲ ಕಟ್ಟಿಟ್ಟ ಬುತ್ತಿ” ಇದು ನಾಣ್ನುಡಿ||

Holydivine