Psalms - Chapter 60
Holy Bible

1 : ಕೈಬಿಟ್ಟೆ ದೇವಾ, ನಮ್ಮನು ಕೈಬಿಟ್ಟೆ / ಕೋಪದಿಂದೆಮ್ಮನು ತಳ್ಳಿ ಕೆಡವಿಬಿಟ್ಟೆ / ಉದ್ಧಾರವಾಗ್ವೆವು ನೀ ಮರಳಿ ಬೆಂಗೊಡೆ //
2 : ನಾಡನು ನಡುಗಿಸಿ ಬಿಡಿಬಿಡಿಯಾಗಿಸಿದೆ / ಅದರೊಡಕನು ಸರಿಮಾಡು ತಡವರಿಸದೆ //
3 : ನಿನ್ನ ಜನರನು ಗುರಿಪಡಿಸಿದೆ ಸಂಕಟಕೆ / ಭ್ರಮಣಗೊಳಿಪ ಮದ್ಯವ ಕುಡಿಸಿದೆ ನಮಗೆ //
4 : ಪರಾಜಯ ಪತಾಕೆಯ ಹಾರಿಸಿದೆ ನಿನಗಂಜಿ ನಡೆದವರಿಗೆ / ಅವರು ಹೆದರಿ ಓಡುವಂತೆ ಮಾಡಿದೆ ಬಿಲ್ಲು ಬಾಣಗಳಿಗೆ //
5 : ಪರಾಜಯ ಪತಾಕೆಯ ಹಾರಿಸಿದೆ ನಿನಗಂಜಿ ನಡೆದವರಿಗೆ / ಅವರು ಹೆದರಿ ಓಡುವಂತೆ ಮಾಡಿದೆ ಬಿಲ್ಲು ಬಾಣಗಳಿಗೆ //
6 : ಗರ್ಭಗುಡಿಯಿಂದಲೇ ದೇವನಿಂತೆಂದನು : “ಜಯಶೀಲ ನಾನು, ಹಂಚುವೆನು ಶೆಖೆಮನು / ಅಳೆದು ಕೊಡುವೆನು ಸುಖೋತೆಂಬ ಬಯಲನು //
7 : ಗಿಲ್ಯಾದ ಸೀಮೆ, ಮನಸ್ಸೆ ನಾಡು ನನ್ನವೆ / ಎಫ್ರಯಿಮ್ ಗೋತ್ರವು ಶಿರಸ್ತ್ರಾಣವು ನನಗೆ / ಜೂದ ಕುಲವು ರಾಜದಂಡವು ನನ್ನ ಕೈಗೆ //
8 : ಮೋವಾಬ್ ಪ್ರಾಂತ್ಯವು ನನ್ನ ಸ್ನಾನ ಪಾತ್ರೆಯು / ಎದೋಮ್ ಪ್ರಾಂತ್ಯವು ನನ್ನ ಕೆರಗಳಿಗೆ ಎಡೆಯು / ನನ್ನ ಗೆಲ್ವೆನೆಂದಿತೆ ಫಿಲಿಷ್ಟಿಯ ಪ್ರಾಂತ್ಯವು!”//
9 : ಕೋಟೆಯ ನಗರಕೆ ನನ್ನನು ಕರೆದೊಯ್ಯುವರಾರು?/ ಎದೋಮ್ ಪ್ರಾಂತ್ಯಕೆ ನನ್ನ ಕೊಂಡೊಯ್ಯುವವರಾರು?//
10 : ದೇವಾ ನೀ, ನಮ್ಮನು ಕೈ ಬಿಟ್ಟಿರುವುದು ಸರಿಯೋ?/ ನಮ್ಮ ಸೈನ್ಯ ಸಮೇತ ನೀ ಬರದೆಹೋದೆಯೋ?//
11 : ಶತ್ರುವಿರುದ್ಧ ಸಹಾಯಮಾಡಯ್ಯಾ/ ಮಾನವ ನೆರವು ನಮಗೆ ವ್ಯರ್ಥವಯ್ಯಾ //
12 : ನಮ್ಮ ಪರ ದೇವನಿರಲು ಹೆಣಗುವೆವು ಶೂರರಾಗಿ / ವೈರಿಗಳನು ತುಳಿದುಬಿಡುವನಾತ ಖರೆಯಾಗಿ //

Holydivine