Psalms - Chapter 54
Holy Bible

1 : ರಕ್ಷಿಸೆನ್ನನು ದೇವ, ನಿನ್ನ ನಾಮ ಶಕ್ತಿಯಿಂದ / ನ್ಯಾಯದೊರಕಿಸೆನಗೆ ನಿನ್ನ ಪರಾಕ್ರಮದಿಂದ //
2 : ನನ್ನ ಪ್ರಾರ್ಥನೆಯನು ಆಲಿಸಯ್ಯಾ / ನನ್ನ ಮಾತುಗಳಿಗೆ ಕಿವಿಗೊಡು ದೇವಾ //
3 : ಗರ್ವಿಗಳು ನಿಂತಿಹರು ನನಗೆದುರಾಗಿ / ಕ್ರೂರಿಗಳು ಕಾದಿಹರೆನ್ನ ಕೊಲೆಗಾಗಿ / ಅವರಲಿಲ್ಲ ಮಾನ್ಯತೆ ದೇವರಿಗಾಗಿ //
4 : ನನಗಿದೋ ದೇವನೆ ಸಹಾಯಕನು / ಆತನೆನಗೆ ಜೀವಪೋಷಕನು //
5 : ತಿರುಗುಬಾಣವಾಗಲಿ ಶತ್ರುಗಳೆನಗೆ ಬಯಸುವ ಕೇಡು / ಸತ್ಯಸ್ವರೂಪಿಯಾದ ನೀನು ಅವರನು ನಾಶಮಾಡು //
6 : ಸರ್ವಾಪತ್ತುಗಳಿಂದ ತಪ್ಪಿಸಿದೆ ಪ್ರಭು, ನನ್ನನು / ಕಂಡಿವೆ ನನ್ನ ಕಣ್ಗಳೇ ಶತ್ರುಗೊದಗಿದ ಸೋಲನು //
7 : ಎಂತಲೆ ಸ್ವಂತ ಇಚ್ಛೆಯಿಂದ ಬಲಿಯನರ್ಪಿಸುವೆ ನಿನಗೆ / ಧನ್ಯವಾದ ಪ್ರಭು, ನಿನ್ನ ಸರ್ವೋತ್ತಮ ನಾಮಕೆ //

Holydivine