Psalms - Chapter 114
Holy Bible

1 : ಇಸ್ರಯೇಲ್ ಜನರು ಈಜಿಪ್ಟನು ಬಿಟ್ಟು ಹೊರಟಾಗ / ಯಕೋಬ್ಯರು ಪರ ನುಡಿಯಾಡುವರನು ಬಿಟ್ಟಗಲಿದಾಗ, /
2 : ಜುದೇಯ ಆಯಿತಾತನಿಗೆ ದೇವಾಲಯ / ಇಸ್ರಯೇಲ್ ಆಯಿತಾತನಿಗೆ ಸ್ವರಾಜ್ಯ //
3 : ಇದ ಕಂಡು ಓಡಿಹೋಯಿತು ಕಡಲು / ಮರಳಿ ಬಂದಿತು ಜೋರ್ಡಾನ್ ಹೊನಲು //
4 : ಕುಪ್ಪಳಿಸಿದವು ಪರ್ವತಗಳು ಟಗರುಗಳಂತೆ / ಕುಣಿದವು ಬೆಟ್ಟಗುಡ್ಡಗಳು ಕುರಿಮರಿಗಳಂತೆ //
5 : ಕಡಲೇ, ಓಡುತ್ತಿರುವೆ ಏಕೆ? / ಜೋರ್ಡನ್, ಮರಳುತಿರುವೆ ಏಕೆ? //
6 : ಪರ್ವತಗಳೇ, ಕುಪ್ಪಳಿಸಿದಿರೇಕೆ ಟಗರು ಗಳಂತೆ?/ ಬೆಟ್ಟಗುಡ್ಡಗಳೇ, ಕುಣಿದಿರೇಕೆ ಕುರಿಮರಿಗಳಂತೆ? //
7 : ನಡುಗು ಭೂಲೋಕವೇ, ಪ್ರಭುವಿನ ಮುಂದೆ / ನಡುನಡುಗು ಯಕೋಬ ದೇವರ ಮುಂದೆ //
8 : ಮಾರ್ಪಡಿಸಿಹನು ಗೋರ್ಕಲ್ಲನು ಕೊಳವಾಗಿ / ಕಲ್ಲು ಬಂಡೆಯನು ನೀರಿನ ಬುಗ್ಗೆಯಾಗಿ //

Holydivine