Psalms - Chapter 148
Holy Bible

1 : ಹೊಗಳಿರಿ ಸ್ವರ್ಗದಿಂದ ಪ್ರಭುವನು / ವಂದಿಸಿ ಮಹೋನ್ನತದಲಿ ಆತನನು
2 : ಆತನ ಸಮಸ್ತ ದೂತರೇ, ಸ್ತುತಿಸಿ ಆತನನು / ಆತನ ಎಲ್ಲಾ ಗಣಗಳೇ, ಹೊಗಳಿ ಆತನನು
3 : ಸೂರ್ಯಚಂದ್ರರೇ, ಹೊಗಳಿ ಆತನನು / ಮಿನುಗುವ ತಾರೆಗಳೇ, ಹೊಗಳಿ ಆತನನು
4 : ಉನ್ನತೋನ್ನತ ಆಕಾಶವೇ, ಹೊಗಳು ಆತನನು / ಅದರ ಮೇಲಿನ ಜಲರಾಶಿಗಳೇ, ಹೊಗಳಿ ಆತನನು
5 : ಹೊಗಳಲಿ ಪ್ರಭುವಿನ ನಾಮವನು ಇವೆಲ್ಲ / ಆತನ ಅಪ್ಪಣೆಗೆ ಉಂಟಾದವುಗಳೆಲ್ಲ
6 : ಸ್ಥಾಪಿಸಿದನು ಎಂದೆಂದಿಗೂ ಅವನ್ನು / ವಿಧಿಸಿಹನು ವಿೂರಲಾಗದ ನಿಯಮವನು
7 : ತಿಮಿಂಗಲಗಳೂ ಆದಿಸಾಗರಗಳೂ / ಹೊಗಳಲಿ ಭೂಮಂಡಲದಿಂದ ಪ್ರಭುವನು
8 : ಕಿಚ್ಚು, ಕಲ್ಮಳೆ, ಹಿಮ, ಹಬೆ ಇವುಗಳೆಲ್ಲವೂ / ಆತ ಹೇಳಿದಂತೆ ಕೇಳುವ ಬಿರುಗಾಳಿಯೂ,
9 : ಎಲ್ಲಾ ಬೆಟ್ಟಗಳೂ ಗುಡ್ಡಗಳೂ / ಫಲವೃಕ್ಷಗಳೂ ದೇವದಾರುಗಳೂ
10 : ಕಾಡುಮೃಗಗಳು, ಸಾಕುಪ್ರಾಣಿಗಳು / ಕ್ರಿಮಿಕೀಟಗಳು, ಪ್ರಾಣಿಪಕ್ಷಿಗಳು
11 : ಭೂರಾಜರು, ಎಲ್ಲ ಜನಾಂಗಗಳು / ಅಧಿಕಾರಿಗಳು, ದೇಶಾಧಿಪತಿಗಳು
12 : ಯುವಕರೂ ಯುವತಿಯರೂ / ಮುದುಕರೂ ಮಕ್ಕಳೂ
13 : ಹೊಗಳಲಿ ಇವರೆಲ್ಲರು ಪ್ರಭುವಿನ ನಾಮವನು / ಭೂಮ್ಯಾಕಾಶ ವಿೂರಿದ ಆತನ ಮಹಿಮೆಯನು / ಆತನ ಮಹತ್ತಾದ ಏಕೈಕ ನಾಮವನು
14 : ಕೋಡು ಮೂಡಿಸಿಹನು ಪ್ರಭು ತನ್ನ ಪ್ರಜೆಗೆ / ಖ್ಯಾತಿ ತಂದಿಹನು ತನ್ನ ಭಕ್ತಾದಿಗಳಿಗೆ / ತನ್ನ ಆಪ್ತಜನರಾದ ಇಸ್ರಯೇಲರಿಗೆ / ಅಲ್ಲೆಲೂಯ!

Holydivine