Psalms - Chapter 22
Holy Bible

1 : ದೇವಾ, ಓ ಎನ್ನ ದೇವಾ, ಏಕೆನ್ನ ಕೈಬಿಟ್ಟೆ? / ಕಿವಿಗೊಡದೆ ಏಕೆ ದೂರವಾಗಿಬಿಟ್ಟೆ? //
2 : ಹಗಲೆಲ್ಲ ಕೂಗಿಕೊಂಡರೂ ನೀ ಬರಲಿಲ್ಲವಲ್ಲಾ / ಇರುಳೆಲ್ಲಾ ಮೊರೆಯಿಟ್ಟರೂ ನೆಮ್ಮದಿಯಿಲ್ಲವಲ್ಲಾ //
3 : ಇದಲ್ಲದೆ, ಬಾಗಿಲುಗಳ ಕದಗಳಿಗೆ ಬೇಕಾದ ಮೊಳೆಗಳನ್ನು ಹಾಗು ಪಟ್ಟಿಗಳನ್ನು ಮಾಡುವುದಕ್ಕೆ ಬಹಳ ಕಬ್ಬಿಣವನ್ನೂ ತೂಕಮಾಡಲಾಗದಷ್ಟು ತಾಮ್ರವನ್ನೂ
4 : ಎಣಿಸಲಾಗದಷ್ಟು ದೇವದಾರು ಮರಗಳನ್ನೂ ಸಿದ್ಧಪಡಿಸಿದನು; ಸಿದೋನ್ ಹಾಗು ಟೈರಿನ ಜನರು ಅವನಿಗೆ ದೇವದಾರು ಮರಗಳನ್ನು ಒದಗಿಸಿದರು.
5 : ನಿನಗೆ ಮೊರೆಯಿಟ್ಟವರು ವಿಮುಕ್ತ ರಾದರಯ್ಯಾ / ವಿಶ್ವಾಸವಿಟ್ಟು ಹತಾಶರಾಗಲಿಲ್ಲವಯ್ಯಾ //
6 : ಮನುಜ ನಾನು, ಕ್ರಿಮಿಕೀಟಕೆ ಸಮಾನನು / ಅಲಕ್ಷಿತನು, ಪರರಿಂದ ತಿರಸ್ಕøತನು //
7 : ನಾನು ನನ್ನ ದೇವರಾದ ಸರ್ವೇಶ್ವರನ ಹೆಸರಿನಲ್ಲಿ ದೇವಾಲಯವನ್ನು ಕಟ್ಟಬೇಕೆಂದು ಮನಸ್ಸುಮಾಡಿದೆ.
8 : “ಇತ್ತನಿವನು ಭರವಸೆ, ಪ್ರಭುವೆ ತನ್ನುದ್ಧಾರಕ ನೆಂದು / ಆತನಿಗಿವನು ಮೆಚ್ಚುಗೆಯಾದರೆ ರಕ್ಷಿಸಲಿ”- ಇಂತೆಂದು //
9 : ನಿನಗೆ ಒಬ್ಬ ಮಗ ಹುಟ್ಟುವನು; ಅವನು ಸಮಾಧಾನ ಪುರುಷನಾಗಿರುವನು. ನಾನು ಅವನ ಸುತ್ತಣ ಎಲ್ಲ ವಿರೋಧಿಗಳನ್ನು ಅಡಗಿಸಿ ಅವನಿಗೆ ಶಾಂತಿ ಸಮಾಧಾನವನ್ನು ಅನುಗ್ರಹಿಸುವೆನು. ಅವನಿಗೆ ಸೊಲೊಮೋನ ಎಂಬ ಹೆಸರಿರುವುದು. ಅವನ ಕಾಲದಲ್ಲಿ ಇಸ್ರಯೇಲರಿಗೆ ಶಾಂತಿ ಸಮಾಧಾನವನ್ನೂ ಸೌಭಾಗ್ಯವನ್ನೂ ದಯಪಾಲಿಸುವೆನು.
10 : ಆಗರ್ಭದಿಂದಲೆ ನೀನೆನಗಾಧಾರ / ತಾಯಿ ಹೆತ್ತಂದಿನಿಂದಲೇ ಕರ್ತಾರ //
11 : ದುರುಳರು ಅರುಗಲೇ ಇರೆ, ನೆರವಿಗಾರೂ ಇಲ್ಲ / ನನ್ನಿಂದ ನೀ ದೂರಸರಿವುದು ಸರಿಯಲ್ಲ //
12 : ಸುತ್ತಿಕೊಂಡಿವೆಯೆನ್ನನು ಬಲವಂತ ಹೋರಿಗಳು / ಮುತ್ತಿಕೊಂಡಿವೆ ಬಾಷಾನಿನ ಹಲವು ಗೂಳಿಗಳು //
13 : ಗರ್ಜಿಸುವ ಉಗ್ರ ಸಿಂಹಗಳಂತೆ ವೈರಿಗಳು / ಕಾದಿಹರು ಬಾಯಿತೆರೆದು ನನ್ನ ಕಬಳಿಸಲು //
14 : ಕ್ಷಯಿಸುತ್ತಿರುವೆ ನಾ ಚೆಲ್ಲಿದ ನೀರಿನಂತೆ / ಎಲುಬುಗಳು ಅಲುಗಿವೆ, ಎದೆ ಕರಗಿದೆ ಮೇಣದಂತೆ //
15 : ಎನ್ನ ಗೋಣು ಒಣಗಿ ಹೋಗಿದೆ ಒಡೆದ ಮಡಕೆಯಂತೆ / ಅಂಗುಳಕೆ ಜಹ್ವೆ ಅಂಟಿದೆ; ಮಣ್ಣಿಗೆನ್ನ ಸೇರಿಸಿದೆ //
16 : ಮುತ್ತಿದೆ ದುರುಳರ ಹಿಂಡು; ಸುತ್ತಿವೆ ಕುನ್ನಿಗಳು / ಕುತ್ತಿವೆ ನನ್ನ ಕೈಗಳು ಮೇಣ್ ಕಾಲುಗಳು //
17 : ಎಣಿಸಬಹುದಿದೆ ನನ್ನೆಲುಬುಗಳೆಲ್ಲವನು / ಹಿಗ್ಗುತಿಹರು ದುರುಗುಟ್ಟಿ ನೋಡೆನ್ನನು //
18 : ನನ್ನ ಉಡುಗೆಗಳನ್ನು ಹಂಚಿಕೊಂಡರು / ನನ್ನ ಅಂಗಿಗೋಸ್ಕರ ಚೀಟು ಹಾಕಿದರು //
19 : ನನ್ನಿಂದ ದೂರ ಸರಿಯಲು ಬೇಡ, ಪ್ರಭು / ನೀನೆನ್ನ ಶಕ್ತಿ, ನೆರವಾಗಲು ತ್ವರೆ ಮಾಡು //
20 : ಕತ್ತಿಗೆ ತುತ್ತಾಗದಂತೆ ತಪ್ಪಿಸು / ಕುಕ್ಕುರಗಳಿಂದ ಪ್ರಾಣವನುಳಿಸು //
21 : ರಕ್ಷಿಸೆನ್ನನು ಸಿಂಹದ ಬಾಯಿಂದ / ಬಿಡಿಸು ಕಾಡುಕೋಣದ ಕೊಂಬಿನಿಂದ //
22 : ಸೋದರರಿಗೆ, ಸಾರುವೆ ನಿನ್ನ ನಾಮ ಮಹಿಮೆಯನ್ನು / ತುಂಬಿದ ಸಭೆಯಲಿ ಮಾಡುವೆ, ನಿನ್ನ ಸ್ತುತಿಯನ್ನು //
23 : ಮಣಿಯಿರಿ, ಪ್ರಭುವಿನಲಿ ಭಯಭಕುತಿಯುಳ್ಳವರೇ / ಭಜಿಸಿರಿ ಇಸ್ರಯೇಲರೇ, ಯಾಕೋಬ ಕುಲಜರೇ //
24 : ತೃಣೀಕರಿಸನು, ತಿರಸ್ಕರಿಸನು ದಲಿತನನು / ವಿಮುಖನಾಗನು, ಪ್ರಾರ್ಥನೆಗೆ ಕಿವಿಗೊಡುವನು //
25 : ಪ್ರಭು, ನೀನೆ ಸ್ಫೂರ್ತಿ, ತುಂಬು ಸಭೆಯಲಿ ನಾ ಮಾಳ್ಪ ಸ್ತುತಿಗೆ / ಭಕ್ತಜನರ ಮುಂದೆ ನಾ ಸಲ್ಲಿಸುವೆ, ನಿನಗೆ ಹೊತ್ತ ಹರಕೆ //
26 : ಹರಿವುದು ಸ್ತುತಿ ಭಕ್ತರ ಬಾಯಿಂದ; ತುಂಬುವುದು ದಲಿತರುದರ / ಇರಲಿ ಚೈತನ್ಯಭರಿತ ನಿಮ್ಮಂತರಂಗವು ನಿರಂತರ //
27 : ಎಚ್ಚೆತ್ತು ಅಭಿಮುಖವಾಗುವುದು ಜಗದಾದ್ಯಂತ ಪ್ರಭುಗೆ / ಸಾಷ್ಟಾಂಗವೆರಗುವುವು ಧರೆಯ ಸರ್ವ ಜನಾಂಗಗಳು ಆತನಿಗೆ //
28 : ಪ್ರಭುವಿಗೆ ಸೇರಿದುದು ರಾಜ್ಯಭಾರವೆಲ್ಲವು / ಆತನದೆ ರಾಷ್ಟ್ರಗಳ ಒಡೆತನವೆಲ್ಲವು //
29 : ತಲೆಬಾಗುವರಾತನಿಗೆ ಧರೆಯ ಗರ್ವಿಗಳೆಲ್ಲರು / ಅಡ್ಡ ಬೀಳುವರವನಿಗೆ ಮತ್ರ್ಯ ಮಾನವರೆಲ್ಲರು //
30 : ವಂದಿಪುದು ಪ್ರಭುವನು ಮುಂದಿನ ಪೀಳಿಗೆ / ಸಾರುವುದಾತನ ವದಂತಿಯನು ಜನರಿಗೆ //
31 : ಸಾರುವರು ಮುಂದಿನ ಜನತೆಗುದ್ಧಾರವನು / ಅರುಹುವರು ಆತನೆಸಗಿದ ಮಹತ್ಕಾರ್ಯವನು //

Holydivine