Psalms - Chapter 110
Holy Bible

1 : ನುಡಿದಿಹನು ಇಂತೆಂದು ಪ್ರಭು ನನ್ನೊಡೆಯನಿಗೆ / “ಆಸೀನನಾಗಿರು ನೀನು ನನ್ನ ಬಲಗಡೆಗೆ / ಹಗೆಗಳನು ನಿನಗೆ ಕಾಲ್ಮಣೆಯಾಗಿಸುವವರೆಗೆ” //
2 : ಸಿಯೋನಿನ ಹೊರಗು ವಿಸ್ತರಿಸುವನು ಪ್ರಭು ನಿನ್ನ ರಾಜ್ಯದಾಳಿಕೆಯನು / ನಿನ್ನ ವೈರಿ ವಿರೋಧಿಗಳ ನಟ್ಟನಡುವೆಯೆ ದೊರೆತನ ಮಾಡುವೆ ನೀನು //
3 : ಸೇನೆಯನು ನೀ ಅಣಿಗೊಳಿಸುವ ದಿನದೊಳು / ಸೇರಿಕೊಳ್ವರು ತಾವಾಗಿಯೇ ಪ್ರಜೆಗಳು / ಶುಭ್ರ ವಸ್ತ್ರಧರಿಸಿ ನಿನ್ನ ಯುವಕ ಯೋಧರು / ಉದಯಕಾಲದಿಬ್ಬನಿಯಂತೆ ಇಳಿದು ಬರುವರು //
4 : “ಮೆಲ್ಕಿಸೆದೆಕ್ ಪರಂಪರೆಯ ಯಾಜಕ ನೀ ನಿರುತ” / ಬದಲಿಸನು ಪ್ರಭು ತಾನಿತ್ತ ಪ್ರಮಾಣದೀ ಮಾತ //
5 : ಬೆಂಬಲವಾಗಿ ನಿಂತಿಹನು ಪ್ರಭು ನಿನ್ನ ಹತ್ತಿರದಲೆ / ಸದೆಬಡಿವನು ಅರಸರನು ತನ್ನ ಪ್ರಕೋಪ ದಿನದಲೆ //
6 : ನ್ಯಾಯತೀರಿಸುವನು ಪ್ರಭು ಸಕಲ ಜನಾಂಗಗಳಲಿ / ಛೇಧಿಸುವನು ಶತ್ರುಗಳ ಶಿರಸನು ರಣರಂಗದಲಿ / ತುಂಬಿಸುವನು ಹೆಣಗಳನು ಎಲ್ಲೆಡೆಗಳಲಿ //
7 : ತೊರೆಯ ನೀರನು ಕುಡಿವನಾ ಒಡೆಯ / ತಲೆಯೆತ್ತಿ ನಡೆವನು ಗಳಿಸಿ ವಿಜಯ /

Holydivine