Psalms - Chapter 53
Holy Bible

1 : ಮನದಲಿ “ದೇವನಿಲ್ಲ” ಎನ್ನುವವರು ದುರ್ಮತಿಗಳು / ಹೇಯಕೃತ್ಯವೆಸಗುವವರು ಆ ಭ್ರಷ್ಟಾಚಾರಿಗಳು / ಒಳಿತನ್ನು ಮಾಡುವವರಾರು ಇಲ್ಲ ಅವರೊಳು //
2 : ಮಾನವರನು ದೇವ ಸ್ವರ್ಗದಿಂದ ಸಮೀಕ್ಷಿಸುತಿಹನು / ತನ್ನನು ಅರಸುವ ಸನ್ಮತಿಗಳಾರೆಂದು ವೀಕ್ಷಿಸುತಿಹನು //
3 : ಒಳಿತನೆಸಗುವವರು ಒಬ್ಬರೂ ಇಲ್ಲ / ದ್ರೋಹಿಗಳು, ದುಷ್ಕರ್ಮಿಗಳು ಅವರೆಲ್ಲ //
4 : ದುರ್ಜನರು ನನ್ನ ಜನರನು ಕೂಳಿನಂತೆ ನುಂಗುವುದೇಕೆ?/ ದೇವರನು ನೆನೆಯದಾ ದುಷ್ಕರ್ಮಿಗಳಿಗೆ ಅರಿವಿಲ್ಲವೇಕೆ?//
5 : ದಿಗ್ಭ್ರಾಂತರಾಗುವರಿದೋ ಹಿಂದೆಂದು ಇಲ್ಲದಂತೆ ದುರುಳರು / ದೇವರಿಂದ ತಿರಸ್ಕøತವಾದ ಅವರು ಪರಾಜಿತರಾಗುವರು / ದಿಕ್ಕುಪಾಲಾಗುವುವು ನಿಮ್ಮ ಮೇಲೆ ಬಿದ್ದವರ ಮೂಳೆಗಳು //
6 : ಬರಲಿ ಇಸ್ರಯೇಲಿಗೆ ಜೀವೋದ್ಧಾರ ಸಿಯೋನಿನಿಂದ / ತರಲಿ ದೇವರು ತನ್ನ ಪ್ರಜೆಗೆ ಮರಳಿ ಸಿರಿಸಂಪದ / ನೀಡಲಿ ಯಕೋಬ ಮೇಣ್ ಇಸ್ರಯೇಲ ಜನತೆಗೆ ಹರ್ಷಾನಂದ //

Holydivine