Psalms - Chapter 112
Holy Bible

1 : ಅಲ್ಲೆಲೂಯ / ಪ್ರಭುವಿನಲಿ ಭಯಭಕ್ತಿ ಉಳ್ಳವನು ಧನ್ಯನು / ಆತನಾಜ್ಞೆಗಳಲಿ ಹಿಗ್ಗುವವನು ಭಾಗ್ಯನು //
2 : ಬಲಿಷ್ಠವಾಗುವುದು ಜಗದೊಳು ಅವನ ಸಂತಾನ / ಸಜ್ಜನರ ಸಂತತಿ ಪಡೆವುದು ಆಶೀರ್ವಚನ //
3 : ಸಿರಿಸಂಪತ್ತಿರುವುದವನ ಮನೆಯಲಿ ಸಮೃದ್ಧಿಯಾಗಿ / ನೀತಿ ಫಲಿಸುವುದು ಆತನ ಮನದಲಿ ಶಾಶ್ವತವಾಗಿ //
4 : ಸಜ್ಜನನಿಗೆ ಮೂಡುವುದು ಜ್ಯೋತಿ ಕತ್ತಲೊಳು / ನ್ಯಾಯಪ್ರಿಯನು ಆತ, ದಯಾವಂತ, ಕೃಪಾಳು //
5 : ದಯೆತೋರಿ ಧನಸಹಾಯ ಮಾಡುವವನು ಭಾಗ್ಯವಂತ / ನ್ಯಾಯದಿಂದ ವ್ಯವಹರಿಸುವಂಥಾ ಮನುಜನು ಭಾಗ್ಯವಂತ //
6 : ಅಚಲನಾಗಿರುವನು ನೀತಿವಂತನು / ಮರೆಯಲಾರರು ಎಂದಿಗೂ ಆತನನು //
7 : ಅಶುಭವಾರ್ತೆಯ ಭಯಭೀತಿ ಯಾವುದೂ ಅವನಿಗಿಲ್ಲ / ಪ್ರಭುವಿನಲಿ ಭರವಸೆಯಿಟ್ಟ ಆ ಮನವು ಅಸ್ಥಿರವಲ್ಲ //
8 : ದೃಢವಿದೆ ಅವನ ಮನ, ಎದೆಗುಂದನವನು / ಕಾಣುವನು ದುರುಳರಿಗಾಗುವ ದಂಡನೆಯನು //
9 : ಉದಾರತೆಯಿಂದ ಕೊಡುವನು ಬಡವರಿಗೆ / ಫಲಿಸುವುದು ಅವನಾ ನೀತಿ ಸದಾಕಾಲಕೆ / ಮಹಿಮೆತರುವ ಕೋಡುಮೂಡುವುದು ಅವನಿಗೆ //
10 : ಇದನು ಕಂಡು ಕೆರಳುವನಾ ದುರುಳನು / ಹೊಂದುವನು ಈಪರಿ ಆಶಾಭಂಗವನು / ಹಲ್ಲು ಕಡಿಯುತ ಅವನು ಹಾಳಾಗುವನು //

Holydivine