Psalms - Chapter 142
Holy Bible

1 : ಮೊರೆಯಿಡುವೆನು ನಾನು ಪ್ರಭುವಿಗೆ ಸ್ವರವೆತ್ತಿ ಬೇಡುವೆನು ಆತನಿಗೆ
2 : ಬಿಚ್ಚುವೆನು ಆತನ ಮುಂದೆ ಚಿಂತೆಯ ಕಟ್ಟನು / ಅರಿಕೆ ಮಾಡುವೆನು ನನ್ನ ಕಷ್ಟ ಸಂಕಟವನು
3 : ಉರುಲೊಡ್ಡಿಹರು ನಾ ನಡೆಯುವ ಮಾರ್ಗದಲೆ / ನಾ ಮನಗುಂದಿರೆ, ಪರಿಹಾರವನು ನೀ ಬಲ್ಲೆ
4 : ಅಕ್ಕಪಕ್ಕದಲಿ ಸಹಾಯಕರಾರೂ ಇಲ್ಲ / ಆಶ್ರಯರಹಿತ, ಹಿತಚಿಂತಕರಾರೂ ನನಗಿಲ್ಲ
5 : ಪ್ರಭುವೇ, ನನಗಾಶ್ರಯ ನೀನೇ / ನನ್ನ ಬಾಳಿನ ಸೊತ್ತು ನೀನೇ / ಕೂಗಿ ನಿನಗೆ ಮೊರೆಯಿಡುತ್ತೇನೆ
6 : ಕುಗ್ಗಿ ಹೋಗಿರುವೆ, ನನ್ನ ಕೂಗಿಗೆ ಪ್ರಭು ಕಿವಿಗೊಡು / ಬಲಿಷ್ಠ ಹಿಂಸಾತ್ಮಕರಿಂದ ನನ್ನನು ಪಾರುಮಾಡು
7 : ಬಿಡಿಸು ಸೆರೆಯಿಂದೆನ್ನನು, ಭಜಿಸುವೆನು ನಿನ್ನ ನಾಮವನು / ಸಜ್ಜನರ ಸಭೆಯಲಿ ಕೊಂಡಾಡುವೆನು ನಿನ್ನ ಉಪಕಾರವನು //

Holydivine