Psalms - Chapter 120
Holy Bible

1 : ಸಂಕಟದಲಿ ಮೊರೆಯಿಟ್ಟೆನು ಪ್ರಭುವಿಗೆ / ಕೊಟ್ಟನು ಸದುತ್ತರವನು ಆತನೆನಗೆ
2 : ಬಿಡಿಸೆನ್ನನು ಪ್ರಭು ಸುಳ್ಳುಬಾಯಿಂದ / ವಂಚಿಸುವ ನಾಲಿಗೆ ಉಳ್ಳವರಿಂದ
3 : ವಂಚಕ ನಾಲಿಗೆಯೆ, ನಿನಗೆ ಸಿಕ್ಕುವುದೇನು?/ ನಿನಗೆ ಬಂದೊದಗುವ ಶಿಕ್ಷೆಯಾದರೂ ಏನು?
4 : ತಟ್ಟುವುವು ಶೂರನ ಹರಿತ ಬಾಣಗಳು / ಗಿಟ್ಟುವುವು ಉರಿಯುವ ಬೆಂಕಿ ಕೆಂಡಗಳು
5 : ಅಯ್ಯೋ ತಂಗಬೇಕಲ್ಲಾ ಮೇಷೆಕಿನವರ ಮಧ್ಯದಲಿ // ಅಕಟಾ ಇರಬೇಕಲ್ಲಾ ಕೇದಾರಿನ ಪಾಳೆಯಗಳಲಿ
6 : ಶಾಂತಿಗೆ ಶತ್ರುಗಳಾದವರ ಒಡನಾಟ / ಸಾಕು ಆ ದೀರ್ಘ ಬಾಳಿನ ಸಂಕಟ
7 : ಶಾಂತಿಪರ ಮಾತು ನನ್ನದು / ಸಮರದ ಕಾತರ ಅವರದು // ಕಾಯೆಲೊ ದೇವನೆ

Holydivine