Psalms - Chapter 2
Holy Bible

1 : ದೊಂಬಿಯೇಳುವುದೇತಕೆ ಅನ್ಯ ದೇಶವಿದೇಶಗಳು? / ಕುತಂತ್ರ ಹೂಡುವುದೇಕೆ ಅನ್ಯ ಜಾತಿಜನಾಂಗಗಳು? //
2 : ದೇವನಿಗು, ಅವನಭಿಷಿಕ್ತನಿಗು ವಿರುದ್ಧವಾಗಿ // ನಿಂತಿಹರು ನೃಪರು ಸಮರ ಸನ್ನದ್ಧರಾಗಿ / ಸಮಾಲೋಚಿಸಿಹರು ಸಚಿವರು ರಹಸ್ಯವಾಗಿ //
3 : “ಅವರೆಮಗೆ ತೊಡಿಸಿಹ ಬೇಡಿಗಳನು ಮರಿಯೋಣ” ಎನ್ನುತಿಹರು / “ಅವರೆಮಗೆ ಹಾಕಿದ ಬಂಧನಗಳನು ಹರಿಯೋಣ” ಎನ್ನುತಿಹರು //
4 : ಪರದಲಿ ಆಸೀನನಾಗಿಹ ಪ್ರಭು ನಗುವನಿದಕೆ / ಗುರಿಮಾಡದಿರನು ಇವರೆಲ್ಲರನು ಪರಿಹಾಸ್ಯಕೆ //
5 : ಅನಂತರ ಸಿಡಿದೆದ್ದು ಹೀಗೆಂದು ನುಡಿವನು: “ನಾ ನೇಮಿಸಿದ ಅರಸನನೇ ಸ್ಥಾಪಿಸಿಹೆನು /
6 : ಸಿಯೋನ್ ಶ್ರೀಶಿಖರದಲೇ ಅವನನು ಇರಿಸಿಹೆನು” / ಈ ಪರಿ ಕೆರಳಿ ಕಳವಳಗೊಳಿಸುವನು ಅವರನು //
7 ಕೇಳಿರೀ ದೈವಾಜ್ಞೆಯನು: ಆತನು ಎನಗಿಂತೆದನು: I “ಈ ದಿನ ನಾನಿನ್ನ ಹಡೆದಿಹೆನು: ನೀನೆನಗೆ ಮಗನು II
8 : ಕೇಳಿದೆಯಾದರೆ ನಿನಗಧೀನಮಾಡುವೆನು ರಾಷ್ಟ್ರಗಳನು / ಕೊಡುವೆನು ನಿನಗೆ ಸ್ವಾಸ್ತ್ಯವಾಗಿ ಜಗದ ಆದ್ಯಂತವನು //
9 : ನೀ ಬಡಿದು ಹಾಕುವೆ ಕಬ್ಬಿಣದ ಗದೆಯಿಂದವರನು / ನೀ ಒಡೆದು ಹಾಕುವೆ ಮಣ್ಣಿನ ಮಡಕೆಯಂತವರನು” //
10 : ಎಂತಲೇ ವಿವೇಕಿಗಳಾಗಿರಿ, ರಾಜರುಗಳೇ, ಬುದ್ಧಿವಾದಕೆ ಕಿವಿಗೊಡಿ, ದೇಶಾಧಿಪತಿಗಳೇ //
11 : “ಭಯಭಕುತಿಯಿಂದ ಪ್ರಭುವಿಗೆ ಸೇವೆ ಮಾಡಿರಿ / ನಡುನಡುಗುತ ಆತನ ಪಾದಪೂಜೆ ಮಾಡಿರಿ” //
12 : ಇಲ್ಲದಿರೆ ಭುಗಿಲೆದ್ದೀತು ಆತನ ಕೋಪಾವೇಶ / ಮಾರ್ಗ ಮಧ್ಯದಲೇ ಕಾದಿರಬಹುದು ನಿಮಗೆ ವಿನಾಶ / ಆತನನು ಆಶ್ರಯಿಸುವವರಿಗಿದೆ ಸೌಭಾಗ್ಯ ಸಂತೋಷ//

Holydivine