Psalms - Chapter 143
Holy Bible

1 : ಆಲಿಸು ಪ್ರಭು ನನ್ನ ಪ್ರಾರ್ಥನೆ ಸೇರಲಿ ನಿನಗೀ ಬಿನ್ನಹ / ನಿನ್ನ ನೀತಿಸತ್ಯತೆಗಳನುಸಾರ ಪಾಲಿಸೆನಗೆ ಸದುತ್ತರ
2 : ಗುರಿಮಾಡಬೇಡ ನಿನ್ನ ದಾಸನನು ನ್ಯಾಯ ವಿಚಾರಣೆಗೆ / ಯಾವ ಜೀವಾತ್ಮನೂ ನಿರ್ದೋಷಿಯಲ್ಲ ನಿನ್ನ ಲೆಕ್ಕಕೆ
3 : ಮಾಡಿಹನು ನನ್ನ ಪ್ರಾಣ ನೆಲಕಚ್ಚುವಂತೆ ಬೆನ್ನಟ್ಟಿಹಾ ವೈರಿ / ದೂಡಿಹನು ಎಂದೊ ಸತ್ತ ಶವದಂತೆ ಕಾರ್ಗತ್ತಲೆಗಾ ದ್ರೋಹಿ
4 : ಸೊರಗಿಹೋಗಿದೆ ನನ್ನ ಚೈತನ್ಯ / ನಿಬ್ಬೆರಗಾಗಿದೆ ನನ್ನ ಹೃದಯ
5 : ನೆನಸಿಕೊಳ್ಳುತಿಹೆನು ಹಳೆಯ ಕಾಲವನು / ಧ್ಯಾನಿಸುತಿಹೆನು ನಿನ್ನ ಕಾರ್ಯಗಳನು / ಸ್ಮರಿಸುತಿಹೆನು ನಿನ್ನ ಕೈಕೆಲಸಗಳನು
6 : ಬೇಡುತಾ ನಿನ್ನ ಕಡೆಗೆ ಕೈಚಾಚಿದೆ / ನಿನಗಾಗಿ ನನ್ನಾತ್ಮ ತವಕಪಡುತ್ತಿದೆ
7 : ಸದುತ್ತರ ಪಾಲಿಸು ಪ್ರಭೂ, ಸೊರಗಿದೆ ಎನ್ನ ಚೇತನ / ನೀ ವಿಮುಖನಾದರೆ ನಾ ನರಕಹೊಕ್ಕವರಿಗೆ ಸಮಾನ
8 : ಬೆಳಿಗ್ಗೆ ಸ್ಮರಿಸಮಾಡು ನಿನ್ನಚಲ ಪ್ರೀತಿಯನು / ನಿನ್ನಲ್ಲಿಯೆ ಇಟ್ಟಿರುವೆನು ನನ್ನ ನಂಬಿಕೆಯನು / ತೋರಿಸು ನನಗೆ ನಾ ಹಿಡಿಯಬೇಕಾದ ಮಾರ್ಗವನು / ನಿನ್ನ ಕಡೆಗೆ ಎತ್ತಿರುವೆನು ನನ್ನ ಹೃನ್ಮನಗಳನು
9 : ಶತ್ರುಗಳಿಂದ ಪ್ರಭು ಮುಕ್ತಗೊಳಿಸೆನ್ನನು / ನಿನ್ನನೇ ಮೊರೆಹೊಕ್ಕು ನಾ ಬಂದಿರುವೆನು
10 : ನೀನೆನ್ನ ದೇವರು; ಕಲಿಸೆನಗೆ ನಡೆಯಲು ನಿನ್ನ ಚಿತ್ತದಂತೆ / ನಿನ್ನ ಶುಭಾತ್ಮ ನೆರವಾಗಲಿ ನಾ ಸಮಹಾದಿಯಲಿ ನಡೆವಂತೆ
11 : ಜೀವಿಸಮಾಡೆನ್ನನು ಪ್ರಭು, ನಿನ್ನ ನಾಮದ ನಿಮಿತ್ತ / ನಿನ್ನ ನೀತಿಗನುಸಾರ ಬಿಡಿಸೆನ್ನ ಪ್ರಾಣವನು ಆಪತ್ತಿನಿಂದ
12 : ನಿನ್ನಚಲ ಪ್ರೀತಿಯಿಂದ ಧ್ವಂಸಮಾಡು ಶತ್ರುಗಳನು / ನಶಿಸಿಹಾಕು ಪ್ರಾಣವೈರಿಗಳನು, ನಾ ನಿನ್ನ ದಾಸನು

Holydivine