Psalms - Chapter 21
Holy Bible

1 : ಅರಸಗೆ ಹರ್ಷವಾಯಿತು ಪ್ರಭು, ನೀ ತೋರಿದ ಪರಾಕ್ರಮಕ್ಕಾಗಿ / ಪರಮಾನಂದಗೊಂಡನವನು, ನೀನಿತ್ತ ವಿಜಯೋತ್ಸವಕ್ಕಾಗಿ //
2 : ಆತನ ಮನದಾಸೆಯನು ನೀ ಪೂರೈಸಿದೆ / ಆತನಧರ ಬಯಕೆಯನು ಅನುಗ್ರಹಿಸಿದೆ //
3 : ನೀನಾತನನು ಸ್ವಾಗತಿಸಿದೆ ಶುಭಾಶಯ ದೊಂದಿಗೆ / ಚಿನ್ನದ ಕಿರೀಟವನು ಮುಡಿಸಿದೆ ಆತನ ಶಿರಸ್ಸಿಗೆ //
4 : ಕೋರಿದನಾತನು ಜೀವಮಾನಕಾಲವನು / ನೀನಿತ್ತೆ ಯುಗಯುಗಾಂತರ ದಾಯುಷ್ಯವನು //
5 : ನಿನ್ನ ನೆರವಿಂದೇರಿತು ಆತನ ಘನತೆ / ಶೋಭೆ, ಪ್ರಭಾವಗಳ ನೀನವನಿಗಿತ್ತೆ //
6 : ಅಮರ ಭಾಗ್ಯಗಳನು ನೀನನುಗ್ರಹಿಸಿದೆ / ಶ್ರೀಸನ್ನಿಧಿಯಲಾತನನು ತೋಷಗೊಳಿಸಿದೆ //
7 : ಅರಸನಿಗಿದೆ ಭರವಸೆ ಪ್ರಭುವಿನಲಿ / ಅವನಚಲನು, ಪರಾತ್ಪರನ ಕೃಪೆಯಲಿ //
8 : ಶತ್ರುಗಳೆಲ್ಲರು ಸಿಕ್ಕಿ ಹೋಗುವರು ನಿನ್ನ ಕೈಗೆ / ಹಗೆಗಳೆಲ್ಲ ಸಿಕ್ಕಿ ಬೀಳುವರು ನಿನ್ನ ಬಲಗೈಗೆ //
9 : ಅಗ್ನಿಕುಂಡವಾಗುವರವರು ನೀ ಪ್ರತ್ಯಕ್ಷನಾದಾಗ / ಕಬಳಿಸುವುದು ಕೋಪಾಗ್ನಿ, ಭಸ್ಮವಾಗ್ವರು ಪ್ರಭು ಬಂದಾಗ //
10 : ನಿರ್ಮೂಲಮಾಡುವೆ ನೀನವರ ಸಂತಾನವನು ಧರೆಯಿಂದ / ಕುಡಿಯಿಲ್ಲದಾಗಿಸುವೆ ಅವರನು ಮಾನವರ ಮಧ್ಯದಿಂದ //
11 : ತಂತ್ರೋಪಾಯಗಳ ಕಲ್ಪಿಸಿದರೂ ನಡೆಯದು / ಕೇಡನು ನಿನಗೆ ಬಗೆದರೂ ಅದು ಕೈಗೂಡದು //
12 : ಬಾಣ ಹೂಡಿ ಅವರ ಹಣೆಗೆ ನೀ ಬಿಡುವೆ / ಬೆನ್ನು ಮಾಡಿ ಅವರೋಡುವಂತೆ ಮಾಡುವೆ //
13 : ಹೇ ಪ್ರಭು, ಪರಾಕ್ರಮ ತೋರಿ, ಪರಮಪದಗಳಿಸಿಕೊ / ಕೀರ್ತಿಸುತ ನಿನ್ನ ಸಾಮಥ್ರ್ಯವನು, ಪೊಗಳುವೆನಿದೊ /

Holydivine