Sirach - Chapter 9
Holy Bible

1 : ಮಹಿಳೆಯರು ಸಂಶಯಬೇಡ ನಿನ್ನ ಹೆಂಡತಿಯ ಬಗ್ಗೆ ನಿನ್ನ ವಿರುದ್ಧ ಕೆಟ್ಟಪಾಠ ಕಲಿಸಬೇಡ ಅವಳಿಗೆ.
2 : ನಿನ್ನ ಪ್ರಾಣವನ್ನು ಒಪ್ಪಿಸಬೇಡ ಸ್ತ್ರೀಯ ಕೈಗೆ ತುಳಿದುಬಿಟ್ಟಾಳು ಅವಳು ನಿನ್ನನ್ನೆ.
3 : ಹೋಗಬೇಡ ವೇಶ್ಯೆಯ ಬಳಿಗೆ ಸಿಕ್ಕಿಬಿದ್ದೀಯೆ ಅವಳ ಪಾಶದಲ್ಲೆ.
4 : ಗಾಯಕಿಯ ಸಂಗವನ್ನು ಬೆಳೆಸದಿರು ಅವಳ ಯತ್ನಗಳಿಗೆ ಸಿಕ್ಕಿಬೀಳದಿರು.
5 : ಯುವತಿಯ ಮೇಲೆ ಕಣ್ಣಿಡಬೇಡ ಅವಳ ನಿಮಿತ್ತ ತೆರಬೇಕಾದೀತು ದಂಡ.
6 : ಜಾರಸ್ತ್ರೀಯರ ಮೇಲೆ ಮನಸ್ಸಿಡಬೇಡ ಹೀಗೆ ಸೊತ್ತೆಲ್ಲವನ್ನೂ ಕಳೆದುಕೊಳ್ಳಬೇಡ.
7 : ಊರ ಬೀದಿಗಳಲಿ ನಡೆವಾಗ ಅತ್ತಿತ್ತ ದೃಷ್ಟಿ ಬೀರದಿರು ಅಲ್ಲಿನ ನಿರ್ಜನ ಸ್ಥಳಗಳಲ್ಲಿ ತಿರುಗಾಡದಿರು.
8 : ನಿನ್ನ ದೃಷ್ಟಿಯನ್ನು ಹೊರಳಿಸಿಬಿಡು ಚೆಲುವೆಯಿಂದ ಪರಸ್ತ್ರೀಯ ಮೇಲೆ ಕಣ್ಣಿಡಬೇಡ ಆಕೆಯ ಚೆಲುವಿನ ನಿಮಿತ್ತ. ಅನೇಕರು ಮೋಸಹೋಗಿರುವರು ಸ್ತ್ರೀ ಸೌಂದರ್ಯದಿಂದ ಬೆಂಕಿಯಂತೆ ಮೋಹ ಉದ್ರೇಕಗೊಳ್ಳುವುದು ಅದರಿಂದ.
9 : ಊಟಮಾಡಬೇಡ ಗಂಡನುಳ್ಳ ಗರತಿಯರೊಂದಿಗೆ ಕುಡಿದು ಮತ್ತನಾಗಬೇಡ ಅವಳೊಂದಿಗೆ. ಒಂದು ವೇಳೆ ನಿನ್ನ ಮನಸ್ಸು ಒಲಿದೀತು ಆಕೆಯ ಕಡೆಗೆ ವಿನಾಶಕ್ಕೆ ನಿನ್ನನ್ನು ಒಯ್ದೀತು ಅಂಥ ಬಯಕೆ.
10 : ಇತರರೊಂದಿಗೆ ಒಡನಾಟ ಬಿಟ್ಟುಬಿಡಬೇಡ ಹಳೆಯ ಗೆಳೆಯನನ್ನು ಅವನಿಗೆ ಸಮಾನನಲ್ಲ ಹೊಸಬನು. ಹೊಸ ಗೆಳೆಯನು ಹೊಸ ದ್ರಾಕ್ಷಾರಸವಿದ್ದಂತೆ ಅದನ್ನು ಆನಂದದಿಂದ ಕುಡಿಯುವೆ ಹಳೆಯದಾದಾಗಲೆ.
11 : ಅಸೂಯೆಪಡಬೇಡ ದುರಾಚಾರಿಯ ಏಳಿಗೆಯನ್ನು ಕಂಡು ಏನಾದೀತೆಂಬುದನ್ನು ನೀನರಿಯೆ ಅವನ ಅಂತ್ಯ ಗತಿಯು.
12 : ಸಂತೋಷಿಸಬೇಡ ದುರುಳರು ಮೆಚ್ಚುವ ವಸ್ತುಗಳಲಿ ದಂಡನೆಯಾಗದೆ ಅವರು ಸಮಾಧಿ ಸೇರರೆಂಬುದು ನೆನಪಿನಲ್ಲಿರಲಿ.
13 : ದೂರವಿರು ನಿನ್ನನ್ನು ಕೊಲ್ಲಲು ಅಧಿಕಾರವುಳ್ಳವನಿಂದ ಆಗ ಸ್ವಂತತ್ರನಾಗಿರುವೆ ಮರಣಭಯದ ಶಂಕೆಯಿಂದ; ತಪ್ಪುಮಾಡದಿರು ಅವನ ಬಳಿಯಲ್ಲಿ; ತೆಗೆದಾನು ಅವನು ನಿನ್ನ ಪ್ರಾಣವನ್ನು ತಿಳಿದುಕೋ ಬಲೆಬೀಸಿರುವಲ್ಲಿ ನೀ ಹೋಗುತ್ತಿರುವೆಯೆಂಬುದನ್ನು, ಊರ ಕೋಟೆಯ ಮೇಲೆ ನಡೆಯುತ್ತಿರುವೆಯೆಂಬುದನ್ನು.
14 : ನೆರೆಯವನನ್ನು ಅರ್ಥಮಾಡಿಕೊ ನಿನ್ನ ಶಕ್ತಿಯ ಮೇರೆಗೆ ಸಮಾಲೋಚನೆ ನಡೆಸು ಬುದ್ಧಿವಂತನೊಂದಿಗೆ.
15 : ನಿನ್ನ ಮಾತುಕತೆ ನಡೆಯಲಿ ಬುದ್ಧಿವಂತರೊಂದಿಗೆ ಮಾತನಾಡು ಮಹೋನ್ನತರ ಧರ್ಮ ಶಾಸ್ತ್ರವನ್ನು ಕುರಿತೆ.
16 : ಸಜ್ಜನರು ನಿನ್ನೊಂದಿಗೆ ಉಣ್ಣಲಿ, ಕುಡಿಯಲಿ ದೇವರ ಭಯಭಕ್ತಿಯಲ್ಲೇ ನಿನಗೆ ಹೆಚ್ಚಳವಿರಲಿ.
17 : ಕಲೆಬಲ್ಲವನ ಕೆಲಸದ ನಿಮಿತ್ತ ಕಲಾಕೃತಿ ಯನ್ನು ಹೊಗಳುತ್ತಾರೆ ಜನನಾಯಕನು ತನ್ನ ಭಾಷಣದಿಂದ ಜ್ಞಾನಿಯೆನಿಸಿಕೊಳ್ಳುತ್ತಾನೆ.
18 : ಬಾಯಿಬಡುಕನು ತನ್ನೂರಿಗೆ ಅಪಾಯಕರ ಮಾತಿನಲ್ಲಿ ದುಡುಕುವವನು ದ್ವೇಷಕರ.

Holydivine