Sirach - Chapter 49
Holy Bible

1 : ಯೋಷೀಯ ನಮಗಿದೆ ಯೋಷೀಯನ ಸ್ಮರಣೆ ಗಂಧಿಗರು ಮಿಶ್ರಮಾಡಿದ ಬುಕ್ಕಿಟ್ಟಿನಂತೆ, ಅವನ ಸವಿನೆನಪಿದೆ ಪ್ರತಿಯೊಬ್ಬರ ಬಾಯಲ್ಲಿ ಮಧುರವಾದ ಜೇನಿನಂತೆ ಮಧುಪಾನ ಕೂಟದಲ್ಲಿನ ಗಾಯನದಂತೆ.
2 : ಜನರ ಪರಿವರ್ತನೆಯ ವಿಷಯದಲ್ಲಿ ಯಥಾರ್ಥವಾಗಿದ್ದನು ಪಾಪದ ಅಸಹ್ಯಕೃತ್ಯಗಳನು ತೆಗೆದುಹಾಕಿದನು.
3 : ತನ್ನ ಹೃದಯವನ್ನು ದೇವರ ಸತ್‍ಸಂಬಂಧದಲ್ಲಿ ಇಟ್ಟುಕೊಂಡನು ದುರ್ಜನರ ದಿನಗಳಲ್ಲಿ ಸದ್ಧರ್ಮವನ್ನು ಬಲಪಡಿಸಿದನು.
4 : ಯೆರೆಮೀಯ ದಾವೀದ, ಹಿಜ್ಕೀಯ, ಯೋಷೀಯ ಇವರನ್ನುಳಿದು, ಇತರರೆಲ್ಲ ತಪ್ಪಿತಸ್ಥರು ಮಹೋನ್ನತನ ಧರ್ಮಶಾಸ್ತ್ರವನ್ನು ಮೀರಿ ನಡೆದರು ಜುದೇಯದ ಅರಸರು ಕಣ್ಮರೆಯಾಗಿ ಹೋದರು.
5 : ಕಾರಣ, ವರ್ಗಾಯಿಸಿದರು ತಮ್ಮ ಅಧಿಕಾರವನ್ನು ಬೇರೆಯವರಿಗೆ ತಮ್ಮ ಗೌರವವನ್ನು ಹೊರಜನಾಂಗದವರಿಗೆ.
6 : ಬೆಂಕಿಯಿಕ್ಕಿದರವರು ಮಹಾ ಪವಿತ್ರಾಲಯವಿದ್ದ ಶ್ರೀ ನಗರಕ್ಕೆ ಹಾಳುಮಾಡಿದರು ಅದರ ಹಾದಿಬೀದಿಗಳನ್ನು, ಯೆರೆಮೀಯನು ವಚನಿಸಿದಂತೆ.
7 : ಕೇಡನ್ನು ಬಯಸಿದರು ಆ ಯೆರೆಮೀಯನಿಗೆ ಕಿತ್ತು ನಾಶಮಾಡುವುದಕ್ಕೆ, ಕೆಡವುದಕ್ಕೆ, ಕಟ್ಟುವುದಕ್ಕೆ, ಗರ್ಭದಿಂದಲೆ ಪ್ರತಿಷ್ಠೆ ಹೊಂದಿದ್ದ ಆ ಪ್ರವಾದಿಗೆ.
8 : ಯೆಜೆಕಿಯೇಲ್ ಸರ್ವೇಶ್ವರನ ಮಹಿಮೆಯನ್ನು ದರ್ಶಿಸಿದವನೇ ಯೆಜೆಕಿಯೇಲನು ಕೆರೂಬಿಯರ ರಥದ ಮೇಲೆ ಬೆಳಗಿದಾ ಮಹಿಮೆಯನ್ನಾತ ಕಂಡನು.
9 : ಬಾರಿ ಮಳೆಸುರಿಸಿ ಬಾಧೆಯಿತ್ತನು ಶತ್ರುಗಳಿಗೆ ಒಳಿತನ್ನು ಮಾಡಲು ಮರೆಯಲಿಲ್ಲ ಸನ್ಮಾರ್ಗದಲ್ಲಿದ್ದವರಿಗೆ.
10 : ಹನ್ನೆರಡು ಪ್ರವಾದಿಗಳು ಹನ್ನೆರಡು ಪ್ರವಾದಿಗಳ ಎಲುಬುಗಳು ಮರಳಿ ಚಿಗುರಲಿ ತಾವಿರುವಲ್ಲೆ ಕಾರಣ, ಇಸ್ರಯೇಲರನ್ನು ಸಂತೈಸಿ, ಶ್ರದ್ಧೆ ನಿರೀಕ್ಷೆಯಿಂದ ದುಡಿದು, ಅವರಿಗಿತ್ತರು ಬಿಡುಗಡೆ.
11 : ಜೆರುಬ್ಬಾಬೆಲ ಮತ್ತು ಯೆಷೂವ ಜೆರುಬ್ಬಾಬೆಲನನ್ನು ನಾವು ಹೊಗಳುವುದಾದರು ಹೇಗೆ? ಅವನು ಬಲಗೈಯ ಮುದ್ರೆಯುಂಗುರದಂತಿದ್ದನವನಲ್ಲವೆ?
12 : ಯೋಚಾದಾಕನ ಮಗ ಯೆಷೂವನೂ ಇದ್ದನು ಇವನಂತೆಯೆ. ತಮ್ಮ ದಿನಗಳಲ್ಲಿ ದೇವಮಂದಿರವನ್ನು ಪುನಃ ಕಟ್ಟಿದವರು ಇವರೇ. ಸರ್ವೇಶ್ವರನಿಗೆ ಮೀಸಲಾದ ಆಲಯವನ್ನು ಇವರು ನಿರ್ಮಿಸಿದರು ಮಾತ್ರವಲ್ಲ, ಅದನ್ನು ಶಾಶ್ವತ ಮಹಿಮೆಗಾಗಿ ಸಿದ್ಧಗೊಳಿಸಿದರು.
13 : ನೆಹೆಮಿಯ ಅದರಂತೆಯೇ ಹಿರಿದಾದುದು ನೆಹೆಮಿಯನ ಕೀರ್ತಿಯು ಬಿದ್ದುಹೋದ ಗೋಡೆಗಳನ್ನು ಸರಿಯಾಗಿ ಎಬ್ಬಿಸಿದವನು ಇವನು ಕದಗಳನ್ನೂ ಅಗುಳಿಗಳನ್ನೂ ಮಾಡಿಸಿದನು ನಮ್ಮ ಮನೆಗಳನ್ನು ಮರಳಿ ಕಟ್ಟಿಸಿದನು.
14 : ಹಿನ್ನೋಟ ಹನೋಕನಂಥ ಮನುಷ್ಯನೇ ಸೃಷ್ಟಿಯಾಗಲಿಲ್ಲ ಬುವಿಯ ಮೇಲೆ ಏಕೆಂದರೆ ಒಯ್ಯಲ್ಪಟ್ಟನವನು ಬುವಿಯ ಮೇಲಕ್ಕೆ.
15 : ಅಂತೆಯೇ ಜೋಸೆಫನಂಥ ಮನುಷ್ಯ ಹುಟ್ಟಲಿಲ್ಲ ಆಗಿದ್ದನವನು ತನ್ನ ಸಹೋದರರಿಗೆ ನಾಯಕ, ಜನಾಂಗಕೆ ಆಧಾರ; ಅವನ ಎಲುಬುಗಳಿಗೂ ದೊರಕಿತು ಮಹಾ ಗೌರವ!
16 : ಶೇಮನೂ ಸೇತನೂ ಮಹಿಮಾನ್ವಿತರು ಎಲ್ಲ ಮಾನವರೊಳು ಆದಾಮನೇ ಶ್ರೇಷ್ಠನು ಸೃಷ್ಟಿಯಲ್ಲುಂಟಾದ ಎಲ್ಲ ಜೀವಿಗಳೊಳು.

Holydivine