Sirach - Chapter 32
Holy Bible

1 : ಔತಣ ಔತಣಕ್ಕೆ ಪಾರುಪತ್ಯನಾಗಿರ ಬೇಕಾದಾಗ ಉಬ್ಬಿಕೊಳ್ಳಬೇಡ ಆಮಂತ್ರಿತರಲಿ ನೀನೂ ಒಬ್ಬನೆಂದು ತಿಳಿ ಅವರೊಂದಿಗಿರುವಾಗ; ಊಟಕ್ಕೆ ಕುಳಿತುಕೊ, ಎಲ್ಲರನು ಶ್ರದ್ಧೆಯಿಂದ ಉಪಚರಿಸಿದ ಬಳಿಕ.
2 : ಕುಳಿತುಕೊ ನೀನು ವಹಿಸಿಕೊಂಡ ಕರ್ತವ್ಯ ತೀರಿದ ನಂತರ ಆಗ ನಿನಗೆ ಸಂತೋಷವಾಗುವುದು ಅತಿಥಿಗಳ ನಿಮಿತ್ತ ಕಾರ್ಯ ನೆರವೇರಿದ್ದಕ್ಕಾಗಿ ನಿನಗೆ ನೀಡುವರು ಅಭಿವಂದನ.
3 : ಹಿರಿಯನೇ, ಮಾತಾಡು; ನಿನಗದು ತರವಾದುದು ತಿಳುವಳಿಕೆಯಿಂದ ಸಮರ್ಪಕವಾಗಿ ಮಾತಾಡು ಆದರೆ ಸಂಗೀತಕ್ಕೆ ಅಡ್ಡಿಮಾಡದಿರು.
4 : ಗಾಯನ ನಡೆಯುವಾಗ ದೀರ್ಘ ಭಾಷಣ ಮಾಡಬೇಡ ಅಕಾಲದಲಿ ನಿನ್ನ ವಿದ್ವತ್ತು ತೋರಿಸಬೇಡ.
5 : ಮದ್ಯಪಾನದ ಕೂಟದಲ್ಲಿ ಸಂಗೀತ ವಾದ್ಯ ಚಿನ್ನದ ಮಧ್ಯೆ ಕೂರಿಸಿದ ಮಾಣಿಕ್ಯ.
6 : ಮದ್ಯಪಾನದೊಂದಿಗೆ ಇಂಪಾದ ಗಾಯನ ಆಹ್ಲಾದಕರ ಚಿನ್ನದಲಿ ಕೂರಿಸಿದ ಪಚ್ಚೆಯಂತೆ ಸುಂದರ.
7 : ಯುವಕನೇ, ಅಗತ್ಯವಿದ್ದಾಗ ಮಾತ್ರ ಮಾತಾಡು ಅದೂ ಕನಿಷ್ಟಪಕ್ಷ ಎರಡುಬಾರಿ, ವಿನಂತಿಸಿದಾಗ ಮಾತ್ರ ಮಾತಾಡು.
8 : ವಿಷಯಗಳು ಅನೇಕವಿದ್ದರೂ, ಸಂಗ್ರಹಿಸಿ ಹೇಳು ಸ್ವಲ್ಪದರಲಿ ವಿಷಯ ಗೊತ್ತಿದ್ದರೂ, ನೀನಿರು ಮೌನ ಪಂಡಿತನ ತರಹದಿ.
9 : ಸರಿಸಮಾನನಂತೆ ವರ್ತಿಸಬೇಡ ಹಿರಿಯರ ನಡುವೆ ಇರುವಾಗ ಹರಟಬೇಡ ಇನ್ನೊಬ್ಬರು ಮಾತಾಡುತ್ತಿರುವಾಗ.
10 : ಮಿಂಚು ಹೊಳೆಯುವುದು ಗುಡುಗಿನ ಮುಂಚೆ ಸನ್ಮಾನ ನಡೆಯುವುದು ಸಂಕೋಚವುಳ್ಳವನ ಮುಂದೆ.
11 : ಊಟದಿಂದ ಏಳು ಕೊನೆಯವನಾಗಿರದೆ, ತಕ್ಕ ಸಮಯದಲ್ಲಿ ಎದ್ದುಬಿಡು ವಿಳಂಬ ಮಾಡದೆ ಬೇಗನೆ ಮನೆಗೆ ಹೋಗಿಬಿಡು.
12 : ಅಲ್ಲಿ ಸಂತೋಷದಿಂದ ಕಾಲ ಕಳೆ; ಮನಸ್ಸಿಗೆ ಬಂದಂತೆ ಮಾಡು ಆದರೆ ಸೊಕ್ಕಿನ ಮಾತುಗಳನ್ನಾಡಿ ಪಾಪಕಟ್ಟಿಕೊಳ್ಳದಿರು.
13 : ನಿನ್ನ ಸೃಷ್ಟಿಕರ್ತನನು ಕೊಂಡಾಡು ಇವೆಲ್ಲವುಗಳಿಗಾಗಿ ತನ್ನ ಒಳ್ಳೆಯ ವಸ್ತುಗಳಿಂದ ನಿನಗೆ ಕೊಡುವನಾತ ಧಾರಾಳವಾಗಿ.
14 : ದೈವಭಯ ಸರ್ವೇಶ್ವರನಿಗೆ ಭಯಪಡುವವನು ಸುಶಿಕ್ಷಣ ಪಡೆಯುವನು ಹೊತ್ತಾರೆ ಎದ್ದು ಆತನನು ಹುಡುಕುವವನು, ದಯೆಯನು ಹೊಂದುವನು.
15 : ಧರ್ಮಶಾಸ್ತ್ರವನು ಅರಸುವವನು ಅದರಿಂದ ಭರಿತನಾಗುವನು ಕಪಟಿಯಾದರೋ ಅದರಿಂದಲೆ ಎಡವಿ ಬೀಳುವನು.
16 : ಸರ್ವೇಶ್ವರನಿಗೆ ಭಯಪಡುವವರು ನ್ಯಾಯವನು ಕಂಡುಕೊಳ್ಳುವರು ತಮ್ಮ ಸತ್ಕಾರ್ಯಗಳನು ದೀಪದಂತೆ ಬೆಳಗಿಸುವರು.
17 : ದುರಾತ್ಮನು ಗದರಿಕೆಗೆ ತಲೆ ತಪ್ಪಿಸಿಕೊಳ್ಳುವನು ತನಗೆ ಇಷ್ಟಬಂದ ತೀರ್ಮಾನವನೇ ಹುಡುಕಿಕೊಳ್ಳುವನು.
18 : ಬುದ್ಧಿವಂತನು ಇತರರ ಆಲೋಚನೆಯನು ತೃಣೀಕರಿಸನು ಪರಕೀಯನೂ ಗರ್ವಿಷ್ಠನೂ ತನ್ನಷ್ಟಕ್ಕೆ ಏನು ಮಾಡಿದರೂ ಅಂಜನು, ತಲ್ಲಣಿಸನು.
19 : ಆಲೋಚನೆಯಿಲ್ಲದೆ ಏನನ್ನೂ ಮಾಡಬೇಡ ಮಾಡಿದ ಮೇಲೆ ಮರುಗಬೇಡ.
20 : ತಿಕ್ಕಾಟದ ಹಾದಿಗೆ ಹೋಗಬೇಡ ಕಲ್ಲುದಾರಿಯಲಿ ಎಡವಬೇಡ ಸಮವಾದ ಹಾದಿಯಲಿ ಮೈಮರೆತಿರಬೇಡ.
21 : ತಿಕ್ಕಾಟದ ಹಾದಿಗೆ ಹೋಗಬೇಡ ಕಲ್ಲುದಾರಿಯಲಿ ಎಡವಬೇಡ ಸಮವಾದ ಹಾದಿಯಲಿ ಮೈಮರೆತಿರಬೇಡ.
22 : ನಿನ್ನ ಸ್ವಂತ ಮಕ್ಕಳ ವಿಷಯದಲಿ ಎಚ್ಚರಿಕೆಯಿಂದಿರು.
23 : ಪ್ರತಿಯೊಂದು ಕಾರ್ಯಸಾಧನೆಯಲ್ಲು ನಿನ್ನಲ್ಲೆ ನಂಬಿಕೆಯಿಟ್ಟು ವರ್ತಿಸು, ದೈವಾಜ್ಞೆಗಳನ್ನು ಕೈಗೊಳ್ಳುವ ರೀತಿ ಇದು.
24 : ಧರ್ಮಶಾಸ್ತ್ರದಲ್ಲಿ ನಂಬಿಕೆಯಿಡುವವನು ಆಜ್ಞೆಗಳನು ಗಮನಿಸುವನು ಸರ್ವೇಶ್ವರನಲಿ ಭರವಸೆಯಿಟ್ಟವನು ನಷ್ಟವನು ಅನುಭವಿಸನು.

Holydivine