Sirach - Chapter 27
Holy Bible

1 : ಅನೇಕರು ಪಾಪಕಟ್ಟಿಕೊಳ್ಳುತ್ತಾರೆ ಲಾಭ ವಿಷಯಕ್ಕೆ ಗಳಿಕೆಯಲ್ಲೇ ನಿರತರಾಗಿರುವವರು ಕಣ್ಣು ಮುಚ್ಚಿಕೊಳ್ಳುತ್ತಾರೆ.
2 : ಮೊಳೆಯು ಜಡಿಯಲಾಗುವುದು ಕಲ್ಲು ಸಂದಿಯಲ್ಲಿ ಅಂತೆಯೇ ಪಾಪವು ಸೇರಿಕೊಳ್ಳುವುದು ಮಾರುವ ಕೊಳ್ಳುವ ಮಧ್ಯದಲ್ಲಿ.
3 : ದೇವರಲ್ಲಿ ಸ್ಥಿರ ಭಯಭಕ್ತಿ ಇಲ್ಲದವನೇ, ಬೇಗನೆ ವಿನಾಶವಾಗುವುದು ನಿನ್ನ ಮನೆ.
4 : ಮಾತುಕತೆ ಕಾಳನು ಸಾಣಿಸುವಾಗ ಹಿಪ್ಪೆ ಉಳಿಯುವುದು ಜರಡಿಯಲ್ಲಿ ಮನುಷ್ಯನ ಹೊಲೆತನ ಕಂಡುಬರುವುದು ಅವನ ಆಲೋಚನೆಯಲ್ಲಿ.
5 : ಕುಂಬಾರನ ಮಡಕೆಯ ಪರೀಕ್ಷೆ ಬೆಂಕಿಯ ಆವಿಗೆಯಿಂದ ಮನುಷ್ಯನ ಪರೀಕ್ಷೆ ಅವನ ಸಂಭಾಷಣೆಯಿಂದ.
6 : ಮರದ ಫಲ ತೋರಿಸುವುದು ಅದನ್ನು ಬೆಳೆಯಿಸಿದ ಹದವನ್ನು ಮಾತು ವ್ಯಕ್ತಪಡಿಸುವುದು ಮನಸ್ಸಿನ ಆಲೋಚನೆಯನ್ನು.
7 : ಒಬ್ಬನನ್ನು ಹೊಗಳಬೇಡ ಅವನ ಸಂಭಾಷಣೆ ಯನ್ನು ಅಳೆಯುವ ಮೊದಲೇ ಏಕೆಂದರೆ ಅವನ ಸತ್ವಪರೀಕ್ಷೆ ಅಡಗಿರುವುದು ಅದರಲ್ಲೇ.
8 : ಪ್ರಾಮಾಣಿಕತೆ ನ್ಯಾಯನೀತಿಯನ್ನು ಅನುಸರಿಸಿದರೆ ನೀನು ಅದನ್ನು ಹೊಂದಿಕೊಳ್ಳುವೆ ಚಂದವಾದ ನಿಲುವಂಗಿಯಂತೆ ಅದನ್ನು ಧರಿಸಿಕೊಳ್ಳುವೆ.
9 : ಪಕ್ಷಿಗಳು ತಂಗುವುವು ಸ್ವಜಾತಿಯ ಜೊತೆಗೆ ಅದರಂತೆ ಸತ್ಯವು ಸೇರುವುದು ಸತ್ಯಶೀಲರ ಬಳಿಗೆ.
10 : ಸಿಂಹವು ಕಾದುಕೊಂಡಿರುವುದು ಬೇಟೆಗಾಗಿ ಪಾಪವು ಕಾದುಕೊಂಡಿರುವುದು ಅಧರ್ಮಿಗಳಿಗಾಗಿ.
11 : ಮೂರ್ಖನ ಮಾತುಕತೆ ಸದಾ ಜ್ಞಾನದಿಂದ ತುಂಬಿದೆ ನೀತಿವಂತರ ಸಂಭಾಷಣೆ ಆದರೆ ಮೂರ್ಖನು ಬದಲಾಗುವನು ಚಂದ್ರನಂತೆ.
12 : ತಿಳಿಗೇಡಿಗಳ ಮಧ್ಯೆ ಇರುವಾಗ ಸಮಯ ನೋಡಿಕೊಂಡು ತಪ್ಪಿಸಿಕೊ ವಿಚಾರವಂತರ ಸಹವಾಸ ನಿರಂತರವಾಗಿ ಮಾಡಿಕೊ.
13 : ಮೂರ್ಖರ ಸಂಭಾಷಣೆ ಅಸಹನೀಯ ಅವರ ಕುಚೋದ್ಯ ಪಾಪವಿಲಾಸ.
14 : ಸದಾ ಪ್ರಮಾಣಮಾಡುವವರ ಮಾತು ಮೈನವಿರೇಳಿಸುತ್ತದೆ ಅವರ ಕಚ್ಚಾಟ ಕಿವಿಯನ್ನು ಮುಚ್ಚಿಕೊಳ್ಳುವಂತೆ ಮಾಡುತ್ತದೆ.
15 : ಸೊಕ್ಕಿನವರ ಕಚ್ಚಾಟ ರಕ್ತಪಾತಕ್ಕೆ ಇಳಿಸುತ್ತದೆ ಅವರ ಬೈದಾಟ ಕೇಳಲೂ ಸಲ್ಲದಾಗಿ ಇರುತ್ತದೆ.
16 : ಗುಟ್ಟನ್ನು ರಟ್ಟಾಗಿಸುವುದು ಗುಟ್ಟನು ರಟ್ಟುಮಾಡುವವನು ನಂಬಿಕೆಯನ್ನು ಕಳೆದುಕೊಳ್ಳುವನು ಇಂಥವನು ತನ್ನ ಮನಸ್ಸಿಗೆ ಹಿಡಿಸುವಂಥ ಸ್ನೇಹಿತನನ್ನು ಕಂಡುಕೊಳ್ಳಲಾರನು.
17 : ನಿನ್ನ ಸ್ನೇಹಿತನನ್ನು ಪ್ರೀತಿಸು; ಅವನೊಂದಿಗೆ ನಂಬಿಕೆಯಿಂದ ನಡೆ ಅವನ ಗುಟ್ಟನ್ನು ಮಾತ್ರ ರಟ್ಟು ಮಾಡಿದರೆ, ನೀ ಹೋಗಲಾರೆ ಅವನ ಹಿಂದೆ;
18 : ಏಕೆಂದರೆ ಒಬ್ಬನು ತನ್ನ ವೈರಿಯನ್ನು ನಾಶಗೊಳಿಸುವಂತೆ ನೀನು ನಾಶಗೊಳಿಸಿರುವೆ ನಿನ್ನ ನೆರೆಯವನ ಗೆಳೆತನವನ್ನೇ.
19 : ಒಬ್ಬನು ತನ್ನ ಕೈಯಲ್ಲಿರುವ ಹಕ್ಕಿಯನ್ನು ಹೋಗಬಿಟ್ಟಂತೆ ನೀನು ನಿನ್ನ ಹತ್ತಿರದ ಗೆಳೆಯನನ್ನು ಹೋಗಬಿಟ್ಟಿರುವೆ; ಪುನಃ ನೀನು ಅವನನ್ನು ಸಂಪಾದಿಸಿಕೊಳ್ಳಲಾರೆ.
20 : ಇನ್ನು ನೀನವನನ್ನು ಹಿಂಬಾಲಿಸದಿರು; ನಿನ್ನಿಂದ ಬಹುದೂರ ಹೋಗಿರುವನು ಬಲೆಯಿಂದ ತಪ್ಪಿಸಿಕೊಂಡ ಜಿಂಕೆಯಂತಿರುವನು.
21 : ಗಾಯವಾಗಿದ್ದರೆ ಕಟ್ಟಬಹುದು; ಜಗಳವಾಗಿದ್ದರೆ ಒಂದಾಗಬಹುದು. ಆದರೆ ಗುಟ್ಟು ರಟ್ಟು ಮಾಡುವವನಿಗೆ ಸರಿಪಡಿಸುವ ನಿರೀಕ್ಷೆಯೇ ಇಲ್ಲದಿರಬಹುದು.
22 : ಕಪಟತನ ಕಣ್ಣು ಮಿಟುಕಿಸುವವನು ಕೆಟ್ಟದ್ದನ್ನು ಹವಣಿಸುವನು ಅವನನ್ನು ಅದರಿಂದ ದೂರಮಾಡಲಾರನು ಯಾವನು.
23 : ನಿನ್ನ ಎದುರಿನಲ್ಲಿ ಸವಿಮಾತಾಡುವನು; ನಿನ್ನ ಮಾತನು ಹೊಗಳುವನು ತರುವಾಯ ಬಾಯಿ ಬಡಿದು ನಿನ್ನ ಮಾತಲ್ಲೇ ನಿನಗೆ ಬೋನು ಒಡ್ಡುವನು.
24 : ನಾನು ಇಂಥ ಕಪಟಿಯನ್ನು ಹಗೆಮಾಡಿದಷ್ಟು ಬೇರೆ ಯಾವುದನ್ನೂ ಹಗೆಮಾಡಿಲ್ಲ ಇಂಥವನನ್ನು ದೇವರೂ ಹಗೆಮಾಡುವುದರಲ್ಲಿ ಸಂದೇಹವಿಲ್ಲ.
25 : ಮೇಲಕ್ಕೆ ಕಲ್ಲೆಸೆಯುವವನು ತಲೆಯ ಮೇಲೆಯೇ ಎಸೆದುಕೊಳ್ಳುತ್ತಾನೆ ಮೋಸದ ಹೊಡೆತ ಗಾಯಗಳನ್ನು ಉಲ್ಬಣಗೊಳಿಸಿದಂತೆ.
26 : ಗುಂಡಿಯನ್ನು ತೋಡುವವನು ತಾನೇ ಅದರಲ್ಲಿ ಬೀಳುವನು ಬಲೆಯನ್ನು ಒಡ್ಡುವವನು ತಾನೇ ಅದರಲ್ಲಿ ಸಿಕ್ಕಿಬೀಳುವನು.
27 : ಕೆಡಕು ಮಾಡುವವನ ಮೇಲೆ ಹೊರಳುವುದು ಅವನ ಕೆಡಕೆ ಅದು ತನ್ನ ಮೇಲೆ ಎಲ್ಲಿಂದ ಬಂತೆಂಬುದು ತಿಳಿಯದು ಅವನಿಗೆ.
28 : ನಿಂದೆ ಅಪಹಾಸ್ಯಗಳು ಬರುವುವು ಸೊಕ್ಕಿನವರಿಂದಲೇ ಇಂಥವರಿಗೆ ಪ್ರತೀಕಾರ ಹೊಂಚಿಕೊಂಡಿರುವುದು ಸಿಂಹದಂತೆ.
29 : ಶಿಷ್ಯನ ಪತನವನ್ನು ಕಂಡು ನಗುವವರು ತಾವೇ ಬಲೆಯಲ್ಲಿ ಸಿಕ್ಕಿಬೀಳುವರು ಇವರು ಸಾಯುವ ಮೊದಲೆ ಇವರನ್ನು ವ್ಯಥೆ ಸುಟ್ಟುಸೂರೆಗೊಳ್ಳುವುದು.
30 : ಸಿಟ್ಟು ಸಿಡುಕು ಸಿಟ್ಟುಸಿಡುಕುಗಳು ಹೇಯವಾದವುಗಳು ಅವೆರಡೂ ಇರುವುವು ಪಾಪಾತ್ಮನೊಳು.

Holydivine