Sirach - Chapter 25
Holy Bible

1 : ಸ್ತುತ್ಯಾರ್ಹ ವ್ಯಕ್ತಿಗಳು ಮೂರು ವಿಷಯಗಳಲ್ಲಿ ನಾನು ಗೌರವಾನ್ವಿತಳಾದೆ, ದೇವರ ಹಾಗು ಮಾನವರ ಮುಂದೆ ಕೀರ್ತಿವಂತಳಾದೆ: ಸೋದರರ ಐಕ್ಯಮತ್ಯ, ನೆರೆಯವರ ಸ್ನೇಹ, ಗಂಡಹೆಂಡಿರ ಸಾಮರಸ್ಯ ಇವೇ.
2 : ಮೂರು ವಿಧದ ಜನರನ್ನು ನನ್ನ ಮನಸ್ಸು ಹೇಸುತ್ತದೆ ಅವರ ಬಾಳು ನನಗೆ ಜಿಗುಪ್ಸೆ ಉಂಟುಮಾಡುತ್ತದೆ: ಜಂಬದ ಬಡವ, ಸುಳ್ಳಾಡುವ ಸಿರಿವಂತ, ಬುದ್ಧಿಗೆಟ್ಟ ಮಂದಿ ವ್ಯಭಿಚಾರ – ಇವರೇ.
3 : ವೃದ್ಧಾಪ್ಯರು ಯೌವನದಲ್ಲಿ ನೀನು ಏನನ್ನೂ ಕೂಡಿಸಿಟ್ಟು ಕೊಳ್ಳದಿದ್ದರೆ ಮುಪ್ಪಿನ ಕಾಲದಲ್ಲಿ ಹೇಗೆ ಪಡೆದುಕೊಳ್ಳುವೆ?
4 : ಆಹಾ ! ನ್ಯಾಯತೀರಿಸುವುದು ನರೆಗೂದಲಿಗೆ ಎಷ್ಟು ರಮ್ಯ ! ಬುದ್ಧಿಹೇಳುವುದು ಹಿರಿಯರಿಗೆ ಎಷ್ಟು ಚಂದ !
5 : ವೃದ್ಧರಿಗೆ ಜ್ಞಾನ ಎಷ್ಟು ಸೊಗಸು ! ಮರ್ಯಾದಸ್ಥರಿಗೆ ಆಲೋಚನೆ, ಬುದ್ಧಿವಾದಗಳು ಎಷ್ಟು ಇಂಪು !
6 : ಅನುಭವವೇ ಮುದುಕರಿಗೆ ಮುಕುಟ ದೇವರ ಭಯವೇ ಅವರಿಗೆ ಗೌರವ.
7 : ಧನ್ಯರು ಒಂಬತ್ತು ವ್ಯಕ್ತಿಗಳು ಧನ್ಯರೆಂಬುದು ನನ್ನ ಮನದಾಲೋಚನೆ ಅಂಥ ಹತ್ತನೆಯವನು ಯಾರೆಂದು ನನ್ನ ನಾಲಿಗೆ ನುಡಿಯಲಿದೆ: ಅವರುಗಳು ಯಾರೆಂದರೆ: ತನ್ನ ಮಕ್ಕಳ ವಿಷಯದಲಿ ಹೆಮ್ಮೆಪಡುವ ಮನುಜನು ವೈರಿಯ ಪತನ ನೋಡುವವರೆಗೆ ಬಾಳುವ ನರನು.
8 : ಧನ್ಯನು ! ಗುಣವತಿಯಾದ ಸತಿಯೊಡನೆ ಮನೆ ನಡೆಸುವವನು ಎತ್ತನ್ನು ಕತ್ತೆಯೊಂದಿಗೆ ನೊಗಕ್ಕೆ ಕಟ್ಟಿ ಹೊಲ ಉಳದವನು. ಅಂತೆಯೇ ಧನ್ಯನು ನಾಲಿಗೆಯಿಂದ ಪಾಪಕಟ್ಟಿಕೊಳ್ಳದವನು ಮತ್ತು ಅಯೋಗ್ಯನ ಸೇವೆ ಮಾಡದವನು.
9 : ಧನ್ಯನು ! ನಿಜವಾದ ಗೆಳೆಯನನ್ನು ಕಂಡುಕೊಂಡವನು ಶ್ರದ್ಧೆಯುಳ್ಳ ಶ್ರೋತೃಗಳನ್ನು ಪಡೆದು ಇರುವವನು.
10 : ಆಹಾ! ಜ್ಞಾನವನ್ನು ಕಂಡುಕೊಂಡವನು ಎಷ್ಟೋ ಘನವಂತ ಆದರೆ ಸರ್ವೇಶ್ವರನಲ್ಲಿ ಭಯಭಕ್ತಿ ಉಳ್ಳವನಿಗಿಂತ ಮೇಲಾದವನಿಲ್ಲ.
11 : ದೇವರಲ್ಲಿ ಭಯಭಕ್ತಿ ಎಲ್ಲ ವಿಷಯಗಳಿಗಿಂತಲೂ ಶ್ರೇಷ್ಠ ಅದರಲ್ಲಿ ಸ್ಥಿರವಾಗಿ ನಿಲ್ಲುವವರನ್ನು ಯಾರಿಗೆ ಹೋಲಿಸಲು ಸಾಧ್ಯ?
12 : ದೇವಭಯವೇ ದೇವಪ್ರೀತಿಯ ಮೊದಲ ಹೆಜ್ಜೆ ಆತನ ಭಕ್ತನಾಗಿರಲು ವಿಶ್ವಾಸವೇ ಮೊದಲ ಪವಟಿಗೆ.
13 : ಕೆಟ್ಟ ಹಾಗು ಒಳ್ಳೆಯ ಮಹಿಳೆಯರು ನನಗೆ ಬೇಕಾದ ನೋವು ಕೊಡು; ಹೃದಯ ವೇದನೆ ಮಾತ್ರ ಬೇಡ ಬೇಕಾದ ಕೀಟಲೆ ಕೊಡು; ಹೆಣ್ಣಿನ ಕೀಟಲೆ ಮಾತ್ರ ಬೇಡ.
14 : ಬೇಕಾದ ದುಃಖ ಬರಲಿ; ನನ್ನ ಹಗೆಗಳಿಂದ ಮಾತ್ರ ಬೇಡ ಬೇಕಾದ ಪ್ರತೀಕಾರವಿರಲಿ; ನನ್ನ ವೈರಿಗಳ ಪ್ರತೀಕಾರ ಬೇಡ.
15 : ಸರ್ಪದ ವಿಷಕ್ಕಿಂತ ಮಿಗಿಲಾದ ವಿಷವಿಲ್ಲ ವೈರಿಯ ರೋಷವನ್ನು ಮೀರಿದ ರೋಷವಿಲ್ಲ.
16 : ದುಷ್ಟಳ ಜೊತೆಯಲ್ಲಿ ಬಾಳುವುದಕ್ಕಿಂತ ಸರ್ಪಗಳೊಂದಿಗೆ ಬಾಳುವುದು ಸುಲಭ.
17 : ಸ್ತ್ರೀಯ ದುಷ್ಟತನ ಬದಲಾಯಿಸುತ್ತದೆ ಅವಳ ರೂಪವನ್ನು ಕರಡಿಯಂತೆ ಕಪ್ಪು ಮಾಡುವುದು ಅವಳ ಮುಖವನ್ನು.
18 : ಅವಳ ಗಂಡನು ತನ್ನವರೊಂದಿಗೆ ಊಟಕ್ಕೆ ಕೂತಿರುವಾಗ ನಿಟ್ಟುಸಿರಿಡುವನು ಅವರ ಮಾತು ಕೇಳುವಾಗ.
19 : ಸ್ತ್ರೀಯ ದುಷ್ಟತನದ ಮುಂದೆ ಉಳಿದ ದುಷ್ಟತನ ಅಲ್ಪವೇ ಸರಿ; ಅವಳಿಗೂ ಬರಲಿ ಪಾಪಿಷ್ಠನ ಗತಿ.
20 : ಮರಳಿನ ದಿಣ್ಣೆ ಏರುವುದು ಮುದಿಕಾಲುಗಳಿಗೆ ಹೇಗೋ ಹಾಗೆ ವಾಚಾಳಿ ಹೆಂಡತಿಯ ಸಂಘ ಸಾಧು ಮನುಷ್ಯನಿಗೆ.
21 : ಮರುಳಾಗಬೇಡ ಸ್ತ್ರೀಯ ಬೆಡಗಿಗೆ ಬಯಕೆಬೇಡ ಆಕೆಯ ಚೆಲುವಿಕೆಗೆ.
22 : ಗಂಡನಿಗೆ ಹೆಂಡತಿ ದುಡಿದು ಹಾಕಿದರೆ ದಕ್ಕುವುದು ಸಿಡುಕು, ಸೊಕ್ಕು, ಅವಮಾನ ಅವನಿಗೆ.
23 : ದುಷ್ಟ ಹೆಂಡತಿ ಎದೆಗುಂದಿಸುವಳು, ವ್ಯಥೆ ಕೊಡುವಳು, ಮನನೋಯಿಸುವಳು; ಜೋಲುಗೈಯಂತೆ, ನಡುಗುವ ಮೊಣ ಕಾಲಿನಂತೆ, ಗಂಡನಿಗೆ ಸುಖಕೊಡಳು.
24 : ಪಾಪವು ಆರಂಭವಾದುದು ಸ್ತ್ರೀಯಿಂದ ನಾವೆಲ್ಲ ಸಾಯುವುದು ಆಕೆಯ ದೆಸೆಯಿಂದ.
25 : ನೀರಿಗೆ ಹಾದಿ ಕೊಡಬೇಡ ದುಷ್ಟಳಿಗೆ ಅಧಿಕಾರ ಕೊಡಬೇಡ.
26 : ನಿನ್ನಿಷ್ಟದಂತೆ ಅವಳು ನಡೆಯದಿದ್ದರೆ ಅವಳ ಸಹವಾಸ ಬೇಡ ನಿನಗೆ.

Holydivine