Sirach - Chapter 36
Holy Bible

1 : ಇಸ್ರಯೇಲಿಗಾಗಿ ಪ್ರಾರ್ಥನೆ ಎಲ್ಲರ ದೇವರಾದ ಒಡೆಯಾ, ನಮ್ಮನು ಕರುಣಿಸು, ಕಟಾಕ್ಷಿಸು ಎಲ್ಲ ಜನಾಂಗಗಳಲ್ಲು ನಿನ್ನ ಭಯಭಕ್ತಿಯನು ಹುಟ್ಟಿಸು.
2 : ಇಸ್ರಯೇಲಿಗಾಗಿ ಪ್ರಾರ್ಥನೆ ಎಲ್ಲರ ದೇವರಾದ ಒಡೆಯಾ, ನಮ್ಮನು ಕರುಣಿಸು, ಕಟಾಕ್ಷಿಸು ಎಲ್ಲ ಜನಾಂಗಗಳಲ್ಲು ನಿನ್ನ ಭಯಭಕ್ತಿಯನು ಹುಟ್ಟಿಸು.
3 : ನಿನ್ನನ್ನರಿಯದ ಜನರ ಮೇಲೆ ಎತ್ತು ನಿನ್ನ ಕೈಯನು ಅವರು ಕಾಣಲಿ ನಿನ್ನ ಶಕ್ತಿಪರಾಕ್ರಮವನು.
4 : ನೀ ಪರಿಶುದ್ಧನೆಂಬುದನು ಪ್ರಕಟಿಸಿದೆ ಅವರಿಗೆ ನಮ್ಮ ಮೂಲಕ ಈಗ ನೀ ಮಹಾಮಹಿಮನೆಂಬುದನು ತೋರ್ಪಡಿಸು ನಮಗೆ ಅವರ ಮೂಲಕ.
5 : ಸರ್ವೇಶ್ವರಾ ನೀನೊಬ್ಬನೇ ಹೊರತು ಬೇರೆ ದೇವರಿಲ್ಲ ನಾವು ನಿನ್ನನು ಅರಿತುಕೊಂಡಂತೆ ಅರಿತುಕೊಳ್ಳಲಿ ಅವರೆಲ್ಲ.
6 : ಹೊಸ ಹೊಸ ಸೂಚಕಕಾರ್ಯಗಳನ್ನು ತೋರಿಸು ತರತರದ ಅದ್ಭುತಕಾರ್ಯಗಳನ್ನು ನಡೆಸು ನಿನ್ನ ಹಸ್ತದ, ನಿನ್ನ ಭುಜಬಲದ ಶಕ್ತಿಯನ್ನು ಪ್ರದರ್ಶಿಸು.
7 : ರೌದ್ರವನು ತಾಳು; ನಿನ್ನ ಕೋಪವನು ಸುರಿದುಬಿಡು ಎದುರಾಳಿಯನು ತೆಗೆದು ಹಾಕು, ವೈರಿಯನು ಅಳಿಸಿಬಿಡು.
8 : ಬೇಗನೆ ಬರಮಾಡು ಆ ಸಮಯವನು ಲಕ್ಷ್ಯಕ್ಕೆ ತೆಗೆದುಕೊ ನೀ ಮಾಡಿದ ಪ್ರಮಾಣವನು ಸಾರಿ ಹೇಳಲಿ ಜನರು ನಿನ್ನ ಮಹತ್ಕಾರ್ಯಗಳನು.
9 : ಇದರಿಂದ ತಪ್ಪಿಸಿಕೊಳ್ಳುವವನು ಬೆಂಕಿಯ ದಳ್ಳುರಿಗೆ ತುತ್ತಾಗಲಿ ನಿನ್ನ ಜನರಿಗೆ ಕೇಡು ಬಗೆವವರು ಹಾಳಾಗಿ ಹೋಗಲಿ.
10 : ನಸುಕಿಬಿಡು ನಮ್ಮ ವಿರೋಧಿಜನರ ಅಧಿಪತಿಗಳ ತಲೆಗಳನು ನಮ್ಮ ಹೊರತು ಬೇರೆ ಯಾರೂ ಇಲ್ಲ ಎಂದು ಕೊಚ್ಚಿಕೊಳ್ಳುವವರನು.
11 : ಒಟ್ಟುಗೂಡಿಸು ಯಕೋಬನ ಕುಲಗಳನ್ನೆಲ್ಲಾ ಮೊದಲಿನಂತೆ ಸ್ವಾಸ್ತ್ಯವಾಗಿ ತೆಗೆದುಕೊ ಅವರನ್ನೆಲ್ಲಾ.
12 : ಸರ್ವೇಶ್ವರಾ, ಕರುಣಿಸು ನಿನ್ನ ಹೆಸರಿನಿಂದ ಕರೆಯಲಾಗುವ ಜನರನು ಚೊಚ್ಚಲು ಮಗನಿಗೆ ಹೋಲಿಸಿದ ಇಸ್ರಯೇಲನು.
13 : ದಯೆತೋರು ನಿನ್ನ ಪವಿತ್ರಾಲಯವಿರುವ ಪಟ್ಟಣದ ಮೇಲೆ ಹೌದು, ನಿನ್ನ ವಾಸಸ್ಥಾನವಾಗಿರುವ ಜೆರುಸಲೇಮಿನ ಮೇಲೆ.
14 : ಸಿಯೋನ್ ನಗರ ತುಂಬಿರಲಿ ನಿನ್ನ ಪರಾಕ್ರಮ ಕೃತ್ಯಗಳ ಸುದ್ದಿಯಿಂದ ನಿನ್ನ ಜನರು ಬೆಳಗಲಿ ನಿನ್ನ ಮಹಿಮಾ ಪ್ರಭಾವದಿಂದ.
15 : ಆದಿಯಲ್ಲೇ ಸೃಷ್ಟಿಯಾದವರಿಗೆ ನಿನ್ನ ಕುರಿತ ಸಾಕ್ಷಿ ದೊರಕಲಿ ನಿನ್ನ ಪ್ರವಾದಿಗಳು ನುಡಿದದ್ದೆಲ್ಲ ಈಡೇರಲಿ.
16 : ನಿನ್ನನು ನಿರೀಕ್ಷಿಸಿದವರಿಗೆ ಪ್ರತಿಫಲ ದೊರಕಲಿ ಜನರು ನಿನ್ನ ಪ್ರವಾದಿಗಳಲಿ ಭರವಸೆಯಿಡಲಿ.
17 : ನಿನ್ನ ಜನರನು ಆರೋನನು ಆಶೀರ್ವದಿಸಿದಂತೆ ಸರ್ವೇಶ್ವರಾ, ನಿನಗೆ ಸೇರಲಿ ಮೊರೆಯಿಡುವವರ ಪ್ರಾರ್ಥನೆ. ಆಗ ಭೂನಿವಾಸಿಗಳೆಲ್ಲ ಅರಿಯುವರು ನೀ ಸರ್ವೇಶ್ವರನೆಂದು ನೀನೇ ಸರ್ವಯುಗಗಳ ದೇವರೆಂದು.
18 : ವ್ಯತ್ಯಾಸದ ಅರಿವು ಹೊಟ್ಟೆ ತಿನ್ನುತ್ತದೆ ಎಲ್ಲಾ ತರದ ಆಹಾರ ಪದಾರ್ಥ ಆದರೂ ಒಂದು ಪದಾರ್ಥ ಇನ್ನೊಂದಕ್ಕಿಂತ ರುಚಿಕರ.
19 : ಬೇಟೆಮಾಂಸದ ರುಚಿನೋಡಿ ತಿಳಿದುಕೊಳ್ಳುತ್ತದೆ ಬಾಯಿ ಅದರಂತೆ ಸುಳ್ಳು ಮಾತುಗಳನು ತಿಳಿದುಕೊಳ್ಳುತ್ತಾನೆ ವಿವೇಕವುಳ್ಳ ಹೃದಯಿ.
20 : ವಕ್ರ ಹೃದಯದಿಂದ ಉಂಟಾಗುವುದು ದುಃಖ ಅನುಭವಿಯಿಂದ ಅದಕ್ಕಾಗುವುದು ತಕ್ಕ ಪ್ರತೀಕಾರ.
21 : ವಧುವಿನ ಆಯ್ಕೆ ಯಾವ ಪುರುಷನನ್ನಾದರು ವರಿಸಬಹುದು ಮಹಿಳೆ ಆದರೆ ಪುರುಷನಿಗೆ ಒಬ್ಬಳು ಇನ್ನೊಬ್ಬಳಿಗಿಂತಲೂ ಚೆಲುವೆ.
22 : ಸ್ತ್ರೀ ಲಾವಣ್ಯದಿಂದ ಪುರುಷನ ಮುಖಕ್ಕೇರುವುದು ಕಾಂತಿ ಇನ್ನಾವ ಅಭಿಲಾಷೆಯಿಂದಲೂ ಅವನಿಗೆ ದೊರಕದು ತೃಪ್ತಿ.
23 : ನಯವಿನಯ ಆಕೆಯ ಬಾಯಲ್ಲಿದ್ದರೆ ಅವಳ ಗಂಡ ಶ್ರೇಷ್ಟ ಅದೃಷ್ಟವಂತನೆ!
24 : ಪತ್ನಿಯನು ಸಂಪಾದಿಸಿಕೊಂಡವನಿಗಿದೆ ಸುಖಸಂಪತ್ತಿನ ಸಾಧನ ಆಕೆ ಅವನಿಗೆ ಸರಿಬೀಳುವ ಸಹಕಾರಿ; ಸ್ತಂಭದಂತಹ ಬೆಂಬಲ.
25 : ಆವರಣವಿಲ್ಲದವನ ಆಸ್ತಿ ಹಾಳು ಹೆಂಡತಿಯಿಲ್ಲದವನ ಜೀವನ ಗೊತ್ತುಗುರಿಯಿಲ್ಲದ ಗೋಳು.
26 : ಪಟ್ಟಣದಿಂದ ಪಟ್ಟಣಕ್ಕೆ ಜಿಗಿಯುವ ಚಪಲಚೋರನನು ನಂಬುವರಾರು? ಕತ್ತಲೆಯಾದಾಗ ಕಂಡಲ್ಲಿ ತಂಗುವ ಗೂಡಿಲ್ಲದ ಮನುಷ್ಯನನ್ನು ನಂಬುವರಾರು?

Holydivine