Numbers - Chapter 29
Holy Bible

1 : ‘ಏಳನೆಯ ತಿಂಗಳಿನ ಮೊದಲನೆಯ ದಿನ ನೀವು ಯಾವ ದುಡಿಮೆಯನ್ನೂ ಮಾಡದೆ ದೇವಾರಾಧನೆಗಾಗಿ ಸಭೆ ಸೇರಬೇಕು. ಅದು ನಿಮಗೆ ಕೊಂಬೂದುವ ದಿನ.
2 : ಅಂದು ನೀವು ಸರ್ವೇಶ್ವರನಿಗೇ ಸುಗಂಧಕರವಾದ ದಹನಬಲಿಗಾಗಿ ಕಳಂಕರಹಿತವಾದ ಒಂದು ಹೋರಿ, ಒಂದು ಟಗರು ಮತ್ತು ವರ್ಷದ ಏಳು ಕುರಿಗಳನ್ನು ಹಾಗು
3 : ಧಾನ್ಯನೈವೇದ್ಯಕ್ಕಾಗಿ ಆ ಒಂದು ಹೋರಿಗೆ ಒಂಬತ್ತು ಸೇರು
4 : ಟಗರಿಗೆ ಆರು ಸೇರು, ಒಂದೊಂದು ಕುರಿಗೆ ಮೂರು ಸೇರು ಹೀಗೆ ಎಣ್ಣೆಬೆರೆಸಿದ ಗೋದಿಹಿಟ್ಟನ್ನು ಮತ್ತು
5 : ಪಾಪಪರಿಹಾರಕಬಲಿಗಾಗಿ ಒಂದು ಹೋತವನ್ನು ಸಮರ್ಪಿಸಬೇಕು.
6 : ಅಮಾವಾಸ್ಯೆಯಲ್ಲೂ ಪ್ರತಿದಿನವೂ ಸಲ್ಲಿಸುವ ದಹನಬಲಿಗಳ ಹಾಗು ಅವುಗಳಿಗೆ ಸಂಬಂಧಿಸಿದ ಧಾನ್ಯ - ಪಾನ ನೈವೇದ್ಯಗಳ ಜೊತೆಗೆ ಮೇಲೆ ಹೇಳಿದ ಬಲಿಗಳನ್ನು ಕೂಡ ಸಮರ್ಪಿಸಬೇಕು. ಅವು ಸರ್ವೇಶ್ವರನಿಗೆ ಸುಗಂಧಕರವಾದ ದಹನಬಲಿಯಾಗಿರುವುವು.
7 : ‘ಉಪವಾಸ ಆಚರಣೆಯ ಏಳನೆಯ ತಿಂಗಳಿನ ಹತ್ತನೆಯ ದಿನ ನೀವು ಯಾವ ದುಡಿಮೆ ಯನ್ನು ಮಾಡದೆ ದೇವಾರಾಧನೆಗಾಗಿ ಸಭೆ ಕೂಡಬೇಕು.
8 : ಸರ್ವೇಶ್ವರನಿಗೆ ಸುಗಂಧಕರವಾದ ದಹನಬಲಿಗಾಗಿ ಕಳಂಕರಹಿತವಾದ ಒಂದು ಹೋರಿ, ಒಂದು ಟಗರು, ವರ್ಷದ ಏಳು ಕುರಿ ಇವುಗಳನ್ನು ಹಾಗು
9 : ಧಾನ್ಯನೈವೇದ್ಯಕ್ಕಾಗಿ ಹೋರಿಗೆ ಒಂಬತ್ತು ಸೇರು,
10 : ಟಗರಿಗೆ ಆರು ಸೇರು, ಕುರಿಯೊಂದಕ್ಕೆ ಮೂರು ಸೇರು ಈ ಮೇರೆಗೆ ಎಣ್ಣೆ ಬೆರೆಸಿದ ಗೋದಿಹಿಟ್ಟನ್ನು ಮತ್ತು
11 : ಪಾಪಪರಿಹಾರಕಬಲಿಗಾಗಿ ಒಂದು ಹೋತವನ್ನು ತಂದು ಸಮರ್ಪಿಸಬೇಕು. ಆ ದಿನಕ್ಕೆ ನೇಮಕವಾದ ಪಾಪಪರಿಹಾರಕಬಲಿ, ದೈನಿಕ ದಹನಬಲಿ ಇದರ ಧಾನ್ಯ - ಪಾನ ದ್ರವ್ಯ ನೈವೇದ್ಯ ಇವುಗಳ ಸಮೇತ ಮೇಲೆ ಹೇಳಿದ ಬಲಿಗಳನ್ನು ಕೂಡ ಸಮರ್ಪಿಸಬೇಕು.
12 : ಏಳನೆಯ ತಿಂಗಳಿನ ಹದಿನೈದನೆಯ ದಿನ ದೇವಾರಾಧನೆಗಾಗಿ ಸಭೆ ಕೂಡಬೇಕು. ನೀವು ಆ ದಿನದಂದು ಯಾವ ದುಡಿಮೆಯನ್ನೂ ಮಾಡಕೂಡದು. ಆ ದಿನ ಮೊದಲುಗೊಂಡು ಏಳು ದಿನದವರೆಗೆ ಸರ್ವೇಶ್ವರನಿಗೆ ಹಬ್ಬವನ್ನು ಆಚರಿಸಬೇಕು.
13 : ಆ ದಿನದಲ್ಲಿ ದೈನಿಕ ದಹನ ಬಲಿಯನ್ನೂ ಅದಕ್ಕೆ ಸಂಬಂಧಿಸಿದ ಧಾನ್ಯ - ಪಾನ ನೈವೇದ್ಯಗಳನ್ನೂ ಅರ್ಪಿಸಬೇಕು. ಅವುಗಳ ಸುಗಂಧಕರವಾದ ದಹನಬಲಿಗಾಗಿ ಕಳಂಕರಹಿತ ಆದ ಹದಿಮೂರು ಹೋರಿಗಳನ್ನು, ಎರಡು ಟಗರುಗಳನ್ನು, ವರ್ಷದ ಹದಿನಾಲ್ಕು ಕುರಿಗಳನ್ನು ಸಮರ್ಪಿಸಬೇಕು.
14 : ಧಾನ್ಯನೈವೇದ್ಯಕ್ಕಾಗಿ ಪ್ರತಿ ಒಂದು ಹೋರಿಗೆ ಒಂಬತ್ತು ಸೇರು,
15 : ಟಗರಿಗೆ ಆರು ಸೇರು, ಹಾಗು ಕುರಿಗೆ ಮೂರು ಸೇರು ಹೀಗೆ ಎಣ್ಣೆಬೆರೆಸಿದ ಗೋದಿಹಿಟ್ಟನ್ನು ಒಪ್ಪಿಸಬೇಕು;
16 : ಅಂತೆಯೇ ಪಾಪಪರಿಹಾರಕಬಲಿಗಾಗಿ ಒಂದು ಹೋತವನ್ನು ತಂದು ಸಮರ್ಪಿಸಬೇಕು.
17 : ಆ ಹಬ್ಬದ ಎರಡನೆಯ ದಿನದಲ್ಲಿ ದೈನಿಕ ದಹನ ಬಲಿಯನ್ನೂ ಅದಕ್ಕೆ ಸಂಬಂಧಿಸಿದ ಧಾನ್ಯ ಹಾಗು ಪಾನಾರ್ಪಣೆಗಳ ಜೊತೆಗೆ ಕಳಂಕರಹಿತವಾದ ಹನ್ನೆರಡು ಹೋರಿ, ಎರಡು ಟಗರು, ವರ್ಷದ ಹದಿನಾಲ್ಕು ಕುರಿಗಳು ಇವುಗಳನ್ನು ಸಮರ್ಪಿಸಬೇಕು.
18 : ಆ ಪ್ರಾಣಿಗಳಲ್ಲಿ ಪ್ರತಿಯೊಂದಕ್ಕೆ ಸಂಬಂಧಿಸಿದ ಪ್ರಕಾರ ಧಾನ್ಯ ಹಾಗು ಪಾನಗಳನ್ನು ಒಪ್ಪಿಸಬೇಕು.
19 : ಪಾಪಪರಿಹಾರಕ ಬಲಿಗಾಗಿ ಒಂದು ಹೋತವನ್ನು ಕೂಡ ಅರ್ಪಿಸಬೇಕು.
20 : ‘ಮೂರನೆಯ ದಿನ, ದೈನಿಕ ದಹನಬಲಿಯನ್ನು, ಅದಕ್ಕೆ ಸಂಬಂಧಿಸಿದ ಧಾನ್ಯ-ಪಾನ ದ್ರವ್ಯಗಳ ಜೊತೆಗೆ ಕಳಂಕರಹಿತವಾದ ಹನ್ನೊಂದು ಹೋರಿ, ಎರಡು ಟಗರು ಹಾಗು ವರ್ಷದ ಹದಿನಾಲ್ಕು ಕುರಿ ಇವುಗಳನ್ನು ಸಮರ್ಪಿಸಬೇಕು.
20 : ನೈವೇದ್ಯಕ್ಕಾಗಿ ಆ ಪ್ರಾಣಿಗಳಲ್ಲಿ ಪ್ರತಿಯೊಂದಕ್ಕೆ ನೇಮಕವಾದ ಪ್ರಕಾರ ಧಾನ್ಯ ಹಾಗು ಪಾನಾರ್ಪಣೆಗಳನ್ನು ಒಪ್ಪಿಸಬೇಕು.
21 : ನೈವೇದ್ಯಕ್ಕಾಗಿ ಆ ಪ್ರಾಣಿಗಳಲ್ಲಿ ಪ್ರತಿಯೊಂದಕ್ಕೆ ಸಂಬಂಧಿಸಿದ ಧಾನ್ಯಪಾನಗಳನ್ನು ಒಪ್ಪಿಸಬೇಕು;
22 : ಅಂತೆಯೇ ಪಾಪಪರಿಹಾರಕ ಬಲಿಗಾಗಿ ಒಂದು ಹೋತವನ್ನೂ ಅರ್ಪಿಸಬೇಕು.
23 : ‘ನಾಲ್ಕನೆಯ ದಿನ, ದೈನಿಕ ದಹನಬಲಿಯನ್ನೂ ಅದಕ್ಕೆ ಸಂಬಂಧವಾದ ಧಾನ್ಯ ಹಾಗು ಪಾನಾರ್ಪಣೆಗಳ ಜೊತೆ ಕಳಂಕರಹಿತವಾದ ಹತ್ತು ಹೋರಿ, ಎರಡು ಟಗರು, ವರ್ಷದ ಹದಿನಾಲ್ಕು ಕುರಿಗಳು, ಇವುಗಳನ್ನು ಸಮರ್ಪಿಸಬೇಕು.
24 : ನೈವೇದ್ಯಕ್ಕಾಗಿ ಪ್ರಾಣಿಗಳಲ್ಲಿ ಪ್ರತಿಯೊಂದಕ್ಕೆ ಸಂಬಂಧವಾದ ಧಾನ್ಯ ಹಾಗು ಪಾನದ್ರವ್ಯಗಳನ್ನು ಒಪ್ಪಿಸಬೇಕು;
25 : ಪಾಪಪರಿಹಾರಕಬಲಿಗಾಗಿ ಒಂದು ಹೋತವನ್ನೂ ಅರ್ಪಿಸಬೇಕು.
26 : ‘ಐದನೆಯ ದಿನ, ದೈನಿಕ ದಹನಬಲಿಯನ್ನು, ಅದಕ್ಕೆ ಸಂಬಂಧಿಸಿದ ಧಾನ್ಯ ಹಾಗು ಪಾನಾರ್ಪಣೆಗಳ ಜೊತೆಗೆ ಕಳಂಕರಹಿತವಾದ ಒಂಬತ್ತು ಹೋರಿ, ಎರಡು ಟಗರು, ವರ್ಷದ ಹದಿನಾಲ್ಕು ಕುರಿಗಳನ್ನು ಅರ್ಪಿಸಬೇಕು;
27 : ನೈವೇದ್ಯಕ್ಕಾಗಿ ಈ ಪ್ರಾಣಿಗಳಲ್ಲಿ ಪ್ರತಿಯೊಂದಕ್ಕೆ ಸಂಬಂಧವಾದ ಧಾನ್ಯ ಹಾಗು ಪಾನದ್ರವ್ಯಗಳನ್ನು ಒಪ್ಪಿಸಬೇಕು.
28 : ಪಾಪಪರಿಹಾರಕಬಲಿಗಾಗಿ ಒಂದು ಹೋತವನ್ನು ಸಮರ್ಪಿಸಬೇಕು.
29 : ‘ಆರನೆಯ ದಿನ, ದೈನಿಕ ದಹನಬಲಿಯನ್ನೂ ಅದಕ್ಕೆ ಸಂಬಂಧಿಸಿದ ಧಾನ್ಯ ಹಾಗು ಪಾನಾರ್ಪಣೆಗಳ ಜೊತೆಗೆ ಕಳಂಕರಹಿತವಾದ ಎಂಟು ಹೋರಿ, ಎರಡು ಟಗರು, ವರ್ಷದ ಹದಿನಾಲ್ಕು ಕುರಿಗಳನ್ನೂ ಸಮರ್ಪಿಸಬೇಕು.
31 : ಪಾಪಪರಿಹಾರಕಬಲಿಗಾಗಿ ಒಂದು ಹೋತವನ್ನು ಅರ್ಪಿಸಬೇಕು.
32 : ‘ಏಳನೆಯ ದಿನ, ದೈನಿಕ ದಹನಬಲಿಯನ್ನೂ ಅದಕ್ಕೆ ಸಂಬಂಧಿಸಿದ ಧಾನ್ಯ ಹಾಗು ಪಾನಾರ್ಪಣೆಗಳ ಜೊತೆಗೆ ಕಳಂಕರಹಿತವಾದ ಏಳು ಹೋರಿ, ಎರಡು ಟಗರು, ವರ್ಷದ ಹದಿನಾಲ್ಕು ಕುರಿಗಳನ್ನು ಸಮರ್ಪಿಸಬೇಕು.
33 : ನೈವೇದ್ಯಕ್ಕಾಗಿ ಈ ಪ್ರಾಣಿಗಳಲ್ಲಿ ಪ್ರತಿಯೊಂದಕ್ಕೆ ನೇಮಕವಾದ ಪ್ರಕಾರ ಧಾನ್ಯ ಹಾಗು ಪಾನಾರ್ಪಣೆಗಳನ್ನು ಒಪ್ಪಿಸಬೇಕು.
34 : ಪಾಪಪರಿಹಾರಕಬಲಿಗಾಗಿ ಒಂದು ಹೋತವನ್ನೂ ಅರ್ಪಿಸಬೇಕು.
35 : ‘ಎಂಟನೆಯ ದಿನ, ದೇವಾರಾಧನೆಗೆ ಸಭೆ ಕೂಡಬೇಕು. ಅಂದು ಯಾವ ದುಡಿಮೆಯನ್ನೂ ಮಾಡಕೂಡದು.
36 : ದೈನಿಕ ದಹನಬಲಿಯನ್ನೂ ಅದಕ್ಕೆ ಸಂಬಂಧಿಸಿದ ಧಾನ್ಯ ಹಾಗು ಪಾನಾರ್ಪಣೆಗಳನ್ನೂ ಅರ್ಪಿಸಬೇಕು. ಅವುಗಳ ಜೊತೆಗೆ ಸರ್ವೇಶ್ವರನಿಗೆ ಸುಗಂಧಕರ ದಹನಬಲಿಗಾಗಿ ಕಳಂಕರಹಿತವಾದ ಒಂದು ಹೋರಿ, ಒಂದು ಟಗರು, ವರ್ಷದ ಏಳು ಕುರಿಗಳನ್ನು ಸಮರ್ಪಿಸಬೇಕು.
37 : ನೈವೇದ್ಯಕ್ಕಾಗಿ ಈ ಪ್ರಾಣಿಗಳಲ್ಲಿ ಪ್ರತಿ ಒಂದಕ್ಕೆ ನೇಮಕವಾದ ಪ್ರಕಾರ ಧಾನ್ಯ ಹಾಗು ಪಾನಾರ್ಪಣೆಗಳನ್ನು ಒಪ್ಪಿಸಬೇಕು.
38 : ಪಾಪಪರಿಹಾರಕಬಲಿಗಾಗಿ ಒಂದು ಹೋತವನ್ನೂ ಸಮರ್ಪಿಸಬೇಕು.
39 : ‘ನೀವು ಕಾಣಿಕೆಯಾಗಿ ಆಗಲಿ, ಹರಕೆಯನ್ನು ತೀರಿಸುವುದಕ್ಕಾಗಿ ಆಗಲಿ ಮಾಡುವ ದಹನಬಲಿ, ಧಾನ್ಯನೈವೇದ್ಯ, ಪಾನಾರ್ಪಣೆ, ಸಮಾಧಾನಬಲಿ ಇವುಗಳು ಮಾತ್ರವಲ್ಲದೆ ಹಬ್ಬದ ದಿನಗಳಲ್ಲಿ ಮೇಲೆ ಸೂಚಿಸಿರುವ ಬಲಿಗಳನ್ನು ಹೆಚ್ಚಾಗಿ ಮಾಡಬೇಕು’.”
40 : ಸರ್ವೇಶ್ವರಸ್ವಾಮಿ ಕೊಟ್ಟ ಈ ಎಲ್ಲ ಆಜ್ಞೆಗಳನ್ನು ಮೋಶೆ ಇಸ್ರಯೇಲರಿಗೆ ತಿಳಿಸಿದನು.

Holydivine