Numbers - Chapter 26
Holy Bible

1 : ಆ ದೊಡ್ಡರೋಗ ನಿಂತ ಮೇಲೆ ಸರ್ವೇಶ್ವರಸ್ವಾಮಿ ಮೋಶೆಗೆ ಮತ್ತು ಆರೋನನ ಮಗ ಎಲ್ಲಾಜಾರನಿಗೆ:
2 : “ನೀವು ಇಸ್ರಯೇಲ ಸಮಾಜದವರಲ್ಲಿ ಇಪ್ಪತ್ತು ವರ್ಷ ಮತ್ತು ಮೇಲ್ಪಟ್ಟ ವಯಸ್ಸುಳ್ಳವರನ್ನು ಅಂದರೆ ಸೈನಿಕಸೇವೆಗೆ ಅರ್ಹರಾದವರನ್ನು ಗೋತ್ರ ಗೋತ್ರಗಳ ಪ್ರಕಾರ ಜನಗಣತಿ ಮಾಡಿ,” ಎಂದು ಹೇಳಿದರು.
3 : ಅಂತೆಯೇ ಮೋಶೆ ಮತ್ತು ಮಹಾಯಾಜಕ ಎಲ್ಲಾಜಾರನು ಜೋರ್ಡನ್ ನದಿಯ ತೀರದಲ್ಲಿ ಜೆರಿಕೋ ಪಟ್ಟಣದ ಹತ್ತಿರ ಮೋವಾಬ್ಯರ ಮೈದಾನದಲ್ಲಿ ಜನಗಣತಿ ಮಾಡಿದರು.
4 : ಸರ್ವೇಶ್ವರ ಮೋಶೆಗೂ ಈಜಿಪ್ಟಿನಿಂದ ಬಂದಿದ್ದ ಇಸ್ರಯೇಲರಿಗೂ ಆಜ್ಞಾಪಿಸಿದ್ದಂತೆ ಇಪ್ಪತ್ತು ವರ್ಷ ಮತ್ತು ಮೇಲ್ಪಟ್ಟ ವಯಸ್ಸಿನ ಇಸ್ರಯೇಲರನ್ನು ಲೆಕ್ಕಿಸಿದರು: ಅದರ ವಿವರ ಇದು.
5 : ಯಕೋಬನ ಜೇಷ್ಟ ಪುತ್ರನಾದ ರೂಬೇನನ ವಂಶಸ್ಥರು ಇವರು: ಹನೋಕನಿಂದ ಹನೋಕ್ಯರು, ಪಲ್ಲೂವಿನಿಂದ ಪಲ್ಲೂವಿನವರು,
6 : ಹೆಚ್ರೋನನಿಂದ ಹೆಚ್ರೋನ್ಯರು ಹಾಗು ಕವರ್ಿೂಯನಿಂದ ಕವರ್ಿೂಯರು.
7 : ರುಬೇನ್ಯರಾದ ಇವರಲ್ಲಿ ಲೆಕ್ಕಿತರಾದವರ ಸಂಖ್ಯೆ 43,730.
8 : ಪಲ್ಲೂವಿನ ಮಗ ಎಲೀಯಾಬ್;
9 : ಎಲೀಯಾಬನ ಮಕ್ಕಳು ಇವರು - ನೆಮೂವೇಲ್, ದಾತಾನ್ ಮತ್ತು ಅಬೀರಾಮ್. ಕೋರಹನ ಪಂಗಡದವರು ಸರ್ವೇಶ್ವರನಿಗೆ ವಿರುದ್ಧ ವಾದಿಸಿದ ಕಾಲದಲ್ಲಿ ಅವರೊಂದಿಗೆ ಸೇರಿಕೊಂಡು ಮೋಶೆ ಮತ್ತು ಆರೋನರಿಗೆ ವಿರುದ್ಧ ಪ್ರತಿಭಟಿಸಿದ ಆಲೋಚನಾ ಕರ್ತರು ದಾತಾನ್ ಮತ್ತು ಅಬೀರಾಮ್.
10 : ಇವರನ್ನು ಹಾಗು ಕೋರಹನನ್ನು ಭೂಮಿ ಬಾಯ್ದೆರೆದು ನುಂಗಿಬಿಟ್ಟಿತು. ಆ ಪಂಗಡದವರಲ್ಲಿ ಬೇರೆ ಇನ್ನೂರೈವತ್ತು ಮಂದಿಯನ್ನು ಬೆಂಕಿ ಸುಟ್ಟು ಹಾಕಿತು. ಹೀಗೆ ಇಸ್ರಯೇಲರಿಗೆ ಎಚ್ಚರಿಕೆ ಉಂಟಾಗುವಂತೆ ಮಾಡಿತು.
11 : ಆ ಪಂಗಡದವರೆಲ್ಲರು ಸತ್ತರು. ಆದರೆ ಕೋರಹನ ಮಕ್ಕಳು ಆ ಕಾಲದಲ್ಲಿ ಸಾಯಲಿಲ್ಲ.
12 : ಸಿಮೆಯೋನ್ ಕುಲದ ಕುಟುಂಬಗಳು ಇವು: ನೆಮೂವೇಲನಿಂದ ನೆಮೂವೇಲ್ಯರು, ಯಾವಿೂನನಿಂದ ಯಾವಿೂನ್ಯರು, ಯಾಕೀನನಿಂದ ಯಾಕೀನ್ಯರು,
13 : ಜೆರಹನಿಂದ ಜೆರಹಿಯರು, ಸೌಲನಿಂದ ಸೌಲ್ಯರು ಎಂಬ ವಂಶಸ್ಥರು.
14 : ಸಿಮೆಯೋನ್ ಕುಲದವರಾದ ಇವರಲ್ಲಿ ಲೆಕ್ಕಿತರಾದವರ ಸಂಖ್ಯೆ 22,200.
15 : ಗಾದ್ ಕುಲದ ಕುಟುಂಬಗಳು ಇವು: ಚೆಫೋನನಿಂದ ಚೆಫೋನ್ಯರು, ಹಗ್ಗೀಯನಿಂದ ಹಗ್ಗೀಯರು, ಶೂನೀಯನಿಂದ ಶೂನೀಯರು,
16 : ಒಜ್ನೀಯನಿಂದ ಒಜ್ನೀಯರು, ಏರೀಯನಿಂದ ಏರೀಯರು,
17 : ಆರೋದನಿಂದ ಆರೋದ್ಯರು, ಅರೇಲೀಯನಿಂದ ಅರೇಲಿಯರು ಎಂಬ ವಂಶಸ್ಥರು.
18 : ಗಾದ್ ಕುಲದವರಾದ ಇವರಲ್ಲಿ ಲೆಕ್ಕಿತರಾದವರ ಸಂಖ್ಯೆ: 40,500.
19 : ಯೆಹೂದನ ಮಕ್ಕಳಲ್ಲಿ ಏರ್, ಓನಾನ್ಯರು ಕಾನಾನ ನಾಡಿನಲ್ಲಿ ಸತ್ತರು.
20 : ಯೆಹೂದ ಕುಲದಲ್ಲಿ ಉಳಿದ ಕುಟುಂಬಗಳು ಇವು - ಶೆಲಹನಿಂದ ಶೇಲಾನ್ಯರು, ಪೆರೆಚನಿಂದ ಪೆರೆಚ್ಯರು, ಹಾಗು ಜೆರಹನಿಂದ ಜೆರಹಿಯರು.
21 : ಪೆರೆಚನಿಂದ ಬೆಳೆದ ಕುಟುಂಬಗಳು - ಹೆಚ್ರೋನನಿಂದ ಹೆಚ್ರೋನ್ಯರು ಮತ್ತು ಹಾಮೂಲನಿಂದ ಹಾಮೂಲ್ಯರು ಎಂಬ ವಂಶಸ್ಥರು.
22 : ಯೆಹೂದ ಕುಲದವರಾದ ಇವರಲ್ಲಿ ಲೆಕ್ಕಿತರಾದವರ ಸಂಖ್ಯೆ : 76,500.
23 : ಇಸ್ಸಾಕಾರ್ ಕುಲದ ಕುಟುಂಬಗಳು ಯಾವುವೆಂದರೆ - ತೋಲನಿಂದ ತೋಲಾಯರು, ಪುವ್ವನನಿಂದ ಪೂನ್ಯರು,
24 : ಯಾಶೂಬನಿಂದ ಯಾಶೂಬ್ಯರು ಮತ್ತು ಶಿಮ್ರೋನನಿಂದ ಶಿಮ್ರೋನ್ಯರು ಎಂಬ ವಂಶಸ್ಥರು.
25 : ಇಸ್ಸಾಕಾರ್ ಕುಲದವರಾದ ಇವರಲ್ಲಿ ಲೆಕ್ಕಿತರಾದವರ ಸಂಖ್ಯೆ: 64,300.
26 : ಜೆಬುಲೂನ್ ಕುಲದ ಕುಟುಂಬಗಳು ಇವು - ಸೆರೆದನಿಂದ ಸೆರೆದ್ಯರು, ಏಲೋನನಿಂದ ಏಲೋನ್ಯರು ಮತ್ತು ಯಹಲೇಲನಿಂದ ಯಹಲೇಲ್ಯರು.
27 : ಜೆಬುಲೂನ್ ಕುಲದವರಾದ ಇವರಲ್ಲಿ ಲೆಕ್ಕಿತರಾದವರ ಸಂಖ್ಯೆ: 60,500.
28 : ಜೋಸೆಫನ ಮಕ್ಕಳು ಮನಸ್ಸೆ ಮತ್ತು ಎಫ್ರಯಿಮ್.
29 : ಮನಸ್ಸೆ ಕುಲದ ಕುಟುಂಬಗಳು ಯಾವುವೆಂದರೆ - ಮಾಕೀರನಿಂದ ಮಾಕೀರ್ಯರು ಮತ್ತು ಮಾಕೀರನ ಮಗ ಗಿಲ್ಯಾದನಿಂದ ಗಿಲ್ಯಾದ್ಯರು ಎಂಬ ವಂಶಸ್ಥರು.
30 : ಗಿಲ್ಯಾದನ ವಂಶದವರು ಇವರು: ಈಯೆಜೆರನಿಂದ ಈಯೆಜೆರ್ಯರು, ಹೇಲಿಕನಿಂದ ಹೇಲಿಕ್ಯರು,
31 : ಅಸ್ರೀಯೇಲನಿಂದ ಅಸ್ರೀಯೇಲ್ಯರು, ಶೆಕೆಮನಿಂದ ಶೆಕೆಮ್ಯರು
32 : ಶೆವಿೂದಾಯನಿಂದ ಶೆವಿೂದಾಯರು ಮತ್ತು ಹೇಫೆರನಿಂದ ಹೇಫೆರ್ಯರು ಎಂಬ ವಂಶಸ್ಥರು.
33 : ಹೇಫೆಕನ ಮಗ ಚಲ್ಪಹಾದನಿಗೆ ಹೆಣ್ಣು ಮಕ್ಕಳು ಹುಟ್ಟಿದರೇ ಹೊರತು ಗಂಡು ಮಕ್ಕಳು ಹುಟ್ಟಲಿಲ್ಲ. ಅವನ ಹೆಣ್ಣು ಮಕ್ಕಳ ಹೆಸರು ಮಹ್ಲಾ, ನೋವಾ, ಹೊಗ್ಲಾ, ಮಿಲ್ಕಾ ಮತ್ತು ತಿರ್ಚಾ.
34 : ಮನಸ್ಸೆ ಕುಲದವರಲ್ಲಿ ಲೆಕ್ಕಿತರಾದವರ ಸಂಖ್ಯೆ: 52,700.
35 : ಎಫ್ರಯಿಮ್ ಕುಲದ ಕುಟುಂಬಗಳು ಇವು - ಶೂತೆಲಹನಿಂದ ಶೂತೆಲಹ್ಯರು, ಬೆಕೆರನಿಂದ ಬೆಕೆರ್ಯರು, ತಹನನಿಂದ ತಹನಿಯರು.
36 : ಶೂತೆಲಹನ ಮಗ ಏರಾನನಿಂದ ಏರಾನ್ಯರು ಎಂಬ ವಂಶಸ್ಥರು. ಎಫ್ರಯಿಮ್ ಕುಲದವರಾದ
37 : ಇವರಲ್ಲಿ ಲೆಕ್ಕಿತರಾದವರ ಸಂಖ್ಯೆ: 32,500. ಇದೇ ಜೋಸೆಫ್ ವಂಶದ ಕುಟುಂಬಗಳ ವಿವರ.
38 : ಬೆನ್ಯಾವಿೂನ್ ಕುಲದ ಕುಟುಂಬಗಳ ಹೆಸರು ಹೀಗಿದೆ - ಬೆಲಗನಿಂದ ಬೆಲಗ್ಯರು, ಅಷ್ಬೇಲನಿಂದ ಅಷ್ಬೇಲ್ಯರು, ಅಹೀರಾಮನಿಂದ ಅಹೀರಾಮ್ಯರು
39 : ಶೂಫಾಮನಿಂದ ಶೂಫಾಮ್ಯರು, ಹೂಫಾಮನಿಂದ ಹೂಫಾಮ್ಯರು ಎಂಬ ವಂಶಸ್ಥರು.
40 : ಬೆಲಗನಿಗೆ ಅರ್ದ್ ಮತ್ತು ನಾಮಾನ್ ಎಂಬ ಇಬ್ಬರು ಮಕ್ಕಳಿದ್ದರು. ಅರ್ದನಿಂದ ಅದ್ರ್ಯರು ಮತ್ತು ನಾಮಾನನಿಂದ ನಾಮಾನ್ಯರು ಎಂಬ ವಂಶಸ್ಥರಾದರು.
41 : ಬೆನ್ಯಾಮಿನ್ ಕುಲದವರಾದ ಇವರಲ್ಲಿ ಲೆಕ್ಕಿತರಾದವರ ಸಂಖ್ಯೆ : 45,600.
42 : ದಾನ್ ಕುಲದ ಕುಟುಂಬಗಳು ಇವು: ಶೂಹಾಮನಿಂದ ಶೂಹಾಮ್ಯರು ಎಂಬ ವಂಶಸ್ಥರಾದರು.
43 : ದಾನ್ ಕುಲದವರಲ್ಲಿ ಲೆಕ್ಕಿತರಾದವರ ಸಂಖ್ಯೆ: 64,400.
44 : ಆಶೇರ್ ಕುಲದ ಕುಟುಂಬಗಳ ಹೆಸರು ಇವು: ಇಮ್ಮಾಹನಿಂದ ಇಮ್ಮಾಹ್ಯರು, ಇಷ್ವೀಯ ನಿಂದ ಇಷ್ವೀಯರು ಮತ್ತು ಬೆರೀಯನಿಂದ ಬೆರೀಯ ವಂಶಸ್ಥರು.
45 : ಬೆರೀಯನ ಮಕ್ಕಳಿಂದ ಉಂಟಾದ ಕುಟುಂಬಗಳು ಇವು - ಹೇಬೆರನಿಂದ ಹೇಬೆರ್ಯರು ಮತ್ತು ಮಲ್ಕಿಯೇಲನಿಂದ ಮಲ್ಕಿಯೇಲ್ಯರು.
46 : ಆಶೇರನಿಗೆ ಸೆರಹಳೆಂಬ ಮಗಳು ಸಹ ಇದ್ದಳು.
47 : ಆಶೇರ್ ಕುಲದವರಾದ ಇವರಲ್ಲಿ ಲೆಕ್ಕಿತರಾದವರ ಸಂಖ್ಯೆ : 53,400.
48 : ನಫ್ತಾಲಿ ಕುಲದ ಕುಟುಂಬಗಳು ಯಾವುವೆಂದರೆ - ಯಹಚೇಲನಿಂದ ಯಹಚೇಲ್ಯರು, ಗೂನೀಯನಿಂದ ಗೂನೀಯರು,
49 : ಯೇಚೆರನಿಂದ ಯೇಚೆರ್ಯರು ಮತ್ತು ಶಿಲ್ಲೇಮನಿಂದ ಶಿಲ್ಲೇಮ್ಯರು,
50 : ನಫ್ತಾಲಿ ಕುಲದವರಾದ ಇವರಲ್ಲಿ ಲೆಕ್ಕಿತರಾದವರ ಸಂಖ್ಯೆ : 45,400.
51 : ಇಸ್ರಯೇಲರಲ್ಲಿ ಲೆಕ್ಕಿತರಾದವರ ಒಟ್ಟು ಸಂಖ್ಯೆ : 601,730.
52 : ಸರ್ವೇಶ್ವರಸ್ವಾಮಿ ಮೋಶೆಗೆ,
53 : “ಈ ಕುಲಗಳಿಗೆ ಅವರವರ ಸಂಖ್ಯೆಯ ಪ್ರಕಾರ ಆ ನಾಡನ್ನು ಸ್ವಂತ ನಾಡಾಗಿ ಹಂಚಿಕೊಡು.
54 : ಹೆಚ್ಚು ಮಂದಿಯುಳ್ಳ ಕುಲಕ್ಕೆ ಹೆಚ್ಚಾಗಿಯೂ ಕಡಿಮೆಯಾದ ಕುಲಕ್ಕೆ ಕಡಿಮೆಯಾಗಿಯೂ ಕೊಡು. ಲೆಕ್ಕಿಸಿದ ಸಂಖ್ಯೆಯ ಪ್ರಕಾರವೇ ಪ್ರತಿ ಒಂದು ಕುಲಕ್ಕೆ ಭೂಮಿಯನ್ನು ಸೊತ್ತಾಗಿಕೊಡು.
55 : ಪ್ರತಿಯೊಂದು ಕುಲದ ಮೂಲಪುರುಷನ ಹೆಸರನ್ನು ಬರೆದು ಚೀಟು ಹಾಕಿ ಆಯಾ ಕುಲಕ್ಕೆ ಸೊತ್ತನ್ನು ಗೊತ್ತುಮಾಡು.
56 : ಹೆಚ್ಚು ಮಂದಿಯುಳ್ಳ ಕುಲಕ್ಕಾಗಲಿ, ಕಡಿಮೆ ಮಂದಿಯುಳ್ಳ ಕುಲಕ್ಕಾಗಲಿ ಚೀಟು ಬಂದ ಪ್ರಕಾರವೇ ಸೊತ್ತನ್ನು ಗೊತ್ತು ಮಾಡು.
57 : ಲೇವಿಯರಲ್ಲಿ ಎಣಿಕೆಯಾದ ಕುಟುಂಬಗಳು ಇವು: ಗೇರ್ಷೋನನಿಂದ ಗೇರ್ಷೋನ್ಯರು, ಕೆಹಾತನಿಂದ ಕೆಹಾತ್ಯರು ಮತ್ತು ಮೆರಾರೀಯನಿಂದ ಮೆರಾರೀಯರು, ಎಂಬ ವಂಶಸ್ಥರು.
58 : ಲೇವಿ ಕುಲದವರ ಕುಟುಂಬಗಳು ಯಾವುವೆಂದರೆ - ಲಿಬ್ನೀ, ಹೆಬ್ರೋನ್, ಮಹ್ಲೀಯ, ಮೂಷೀಯ ಮತ್ತು ಕೋರಹಿಯ ಎಂಬ ಕುಟುಂಬಗಳು.
59 : ಕೆಹಾತನು ಅಮ್ರಾಮನನ್ನು ಪಡೆದನು. ಅಮ್ರಾಮನ ಹೆಂಡತಿ ಈಜಿಪ್ಟ್ ದೇಶದಲ್ಲಿ ಲೇವಿಯಿಂದ ಹುಟ್ಟಿದ ಯೋಕೆಬೆದ ಎಂಬವಳು. ಈಕೆಯಲ್ಲಿ ಅಮ್ರಾಮನಿಂದ ಆರೋನ, ಮೋಶೆ ಮತ್ತು ಅವರ ಅಕ್ಕ ಮಿರ್ಯಾಮಳೂ ಹುಟ್ಟಿದರು.
60 : ಆರೋನನಿಂದ ನಾದಾಬ್, ಅಬೀಹೂ, ಎಲ್ಲಾಜಾರ್, ಈತಾಮಾರ್ ಎಂಬವರು ಹುಟ್ಟಿದರು.
61 : ನಾದಾಬ್ ಮತ್ತು ಅಬೀಹೂ ಎಂಬ ಇಬ್ಬರು ಸರ್ವೇಶ್ವರನ ಸನ್ನಿಧಿಯಲ್ಲಿ ಬಹಿಷ್ಕøತ ಅಗ್ನಿಯಿಂದ ಧೂಪಾರತಿ ಎತ್ತಿದುದರಿಂದ ಸತ್ತು ಹೋದರು.
62 : ಬೇರೆ ಇಸ್ರಯೇಲರಿಗೆ ಸೊತ್ತು ದೊರಕಿದಂತೆ ಲೇವಿಯರಿಗೆ ದೊರಕದೆ ಹೋದುದರಿಂದ ಅವರು ಇಸ್ರಯೇಲರ ಸಮೇತ ಎಣಿಕೆ ಆಗಲಿಲ್ಲ. ಲೇವಿಯರಲ್ಲಿ ಒಂದು ತಿಂಗಳು ಮತ್ತು ಮೇಲ್ಪಟ್ಟ ವಯಸ್ಸಿನ ಗಂಡಸರನ್ನು ಲೆಕ್ಕ ಹಾಕಿದಾಗ ಅವರ ಸಂಖ್ಯೆ : 23,000 ಇತ್ತು.
63 : ಜೋರ್ಡನ್ ನದಿ ತೀರದಲ್ಲಿ, ಜೆರಿಕೋ ಪಟ್ಟಣದ ಹತ್ತಿರವಿದ್ದ ಮೋವಾಬ್ಯರ ಮೈದಾನದಲ್ಲಿ ಮೋಶೆ ಮತ್ತು ಯಾಜಕ ಎಲ್ಲಾಜಾರನು ಇಸ್ರಯೇಲರ ಜನಗಣತಿ ಮಾಡಿದಾಗ ಇದ್ದ ಜನಸಂಖ್ಯೆ ಇದು.
64 : ಮೋಶೆ ಮತ್ತು ಯಾಜಕ ಆರೋನನು ಸೀನಾಯಿ ಮರುಭೂಮಿಯಲ್ಲಿ ಇಸ್ರಯೇಲರ ಜನಗಣತಿ ಮಾಡಿದಾಗ ಎಣಿಕೆಯಾದವರಲ್ಲಿ ಒಬ್ಬರಾದರೂ ಇವರಲ್ಲಿರಲಿಲ್ಲ.
65 : ಏಕೆಂದರೆ ನಿಶ್ಚಯವಾಗಿ ಅವರು ಮರುಭೂಮಿಯಲ್ಲೇ ಸಾಯುವರೆಂದು ಸರ್ವೇಶ್ವರಸ್ವಾಮಿ ಹೇಳಿದ್ದರು. ಆದ್ದರಿಂದ ಯೆಫುನ್ನೆಯ ಮಗ ಕಾಲೇಬ್ ಮತ್ತು ನೂನನ ಮಗ ಯೆಹೋಶುವ ಇವರಿಬ್ಬರನ್ನು ಬಿಟ್ಟರೆ ಅವರಲ್ಲಿ ಯಾರೂ ಉಳಿಯಲಿಲ್ಲ.

Holydivine