Numbers - Chapter 13
Holy Bible

1 : ಸರ್ವೇಶ್ವರಸ್ವಾಮಿ ಮೋಶೆಗೆ,
2 : “ನಾನು ಇಸ್ರಯೇಲರಿಗೆ ಕೊಡಲಿರುವ ಕಾನಾನ್ ನಾಡನ್ನು ಸಂಚರಿಸಿ ನೋಡಿಬರಲು ಒಂದೊಂದು ಕುಲದಿಂದ ಒಬ್ಬೊಬ್ಬ ಮುಖ್ಯಸ್ಥನನ್ನು ಕಳಿಸು,” ಎಂದು ಆಜ್ಞಾಪಿಸಿದರು.
3 : ಸರ್ವೇಶ್ವರನ ಅಪ್ಪಣೆಯ ಮೇರೆಗೆ ಮೋಶೆ ಪಾರಾನ್ ಮರುಭೂಮಿಯಿಂದ ಇಸ್ರಯೇಲರ ಮುಖ್ಯಸ್ಥರನ್ನು ಕಳಿಸಿದನು.
4 : ಆ ಮುಖ್ಯಸ್ಥರ ಹೆಸರುಗಳು ಇವು - ರೂಬೇನ್ ಕುಲದ ಜಕ್ಕೂರನ ಮಗ ಶಮ್ಮೂವ,
5 : ಸಿಮೆಯೋನ್ ಕುಲದ ಹೋರಿಯ ಮಗನಾದ ಶಾಫಾಟ್,
6 : ಯೆಹೂದ ಕುಲದ ಯೆಫುನ್ನೆಯ ಮಗನಾದ ಕಾಲೇಬ,
7 : ಇಸ್ಸಾಕಾರ್ ಕುಲದ ಜೋಸೆಫನ ಮಗ ಇಗಾಲ್,
8 : ಎಫ್ರಯಿಮ್ ಕುಲದ ನೂನನ ಮಗ ಹೋಶೇಯ,
9 : ಬೆನ್ಯಾವಿೂನ್ ಕುಲದ ರಾಫೂವನ ಮಗ ಪಲ್ಟೀ,
10 : ಜೆಬುಲೂನ್ ಕುಲದ ಸೋದಿಯ ಮಗ ಗದ್ದೀಯೇಲ್,
11 : ಜೋಸೆಫ್ ಅಂದರೆ ಮನಸ್ಸೆ ಕುಲದ ಸೂಸೀಯ ಮಗ ಗದ್ದೀ,
12 : ದಾನ್ ಕುಲದ ಗೆಮಲ್ಲೀಯನ ಮಗ ಅವಿ್ಮೂಯೇಲ್,
13 : ಅಶೇರ್ ಕುಲದ ಮಿಕಾಯೇಲನ ಮಗ ಸೆತೂರ್,
14 : ಅದು ಅಲ್ಲಿ ಮೂರು ತಿಂಗಳು ಇತ್ತು. ಸರ್ವೇಶ್ವರ ಆ ಅವಧಿಯಲ್ಲಿ ಓಬೇದೆದೋಮನ ಕುಟುಂಬವನ್ನೂ ಅವನಿಗೆ ಇದ್ದುದೆಲ್ಲವನ್ನೂ ಆಶೀರ್ವದಿಸಿದರು.
15 : ಗಾದ್ ಕುಲದ ಮಾಕೀಯನ ಮಗ ಗೆಯೂವೇಲ್,
16 : ಆ ನಾಡನ್ನು ಸಂಚರಿಸಿ ನೋಡಿಬರುವುದಕ್ಕೆ ಮೋಶೆ ಕಳಿಸಿದ್ದ ವ್ಯಕ್ತಿಗಳ ಹೆಸರುಗಳು ಇವೇ. ಮೋಶೆ ನೂನನ ಮಗ ಹೋಶೇಯನಿಗೆ ‘ಯೆಹೋಶುವ’ ಎಂದು ಹೆಸರಿಟ್ಟನು.
17 : ಕಾನಾನ್ ನಾಡನ್ನು ಸಂಚರಿಸಿ ನೋಡಿ ಬರುವುದಕ್ಕೆ ಅವರನ್ನು ಕಳಿಸುವಾಗ ಮೋಶೆ ಹೀಗೆಂದು ಸಂಬೋಧಿಸಿದನು: “ನೀವು ನೆಗೆಬಾ ಮಾರ್ಗವಾಗಿ ಮಲೆನಾಡಿಗೆ ಹತ್ತಿಹೋಗಿರಿ.
18 : ಆ ನಾಡು ಹೇಗಿದೆ, ಅಲ್ಲಿನ ನಿವಾಸಿಗಳು ಬಲಿಷ್ಠರೋ ಬಲಹೀನರೋ, ಅವರ ಸಂಖ್ಯೆ ದೊಡ್ಡದೋ ಚಿಕ್ಕದೋ,
19 : ಅವರ ವಾಸಸ್ಥಳ ಒಳ್ಳೆಯದೋ ಕೆಟ್ಟದೋ, ಅವು ಪಾಳೆಯಗಳೋ ಕೋಟೆಗಳೋ,
20 : ಭೂಮಿ ಸಾರವತ್ತಾದುದೋ ನಿಸ್ಸಾರವಾದುದೋ, ಮರಗಿಡಗಳಿಂದ ಕೂಡಿದೆಯೋ ಬೈಲುಪ್ರದೇಶವಾಗಿದೆಯೋ ನೋಡಿ ತಿಳಿದುಕೊಳ್ಳಿ. ಅದಲ್ಲದೆ, ಆ ನಾಡಿನ ಉತ್ಪನ್ನಗಳಲ್ಲಿ ಕೆಲವನ್ನು ಪ್ರಯಾಸಪಟ್ಟು ತರಬೇಕು.” ಅದು ದ್ರಾಕ್ಷಿಯ ಪ್ರಥಮಫಲ ಕಾಲವಾಗಿತ್ತು.
21 : ಅವರು ಬೆಟ್ಟವನ್ನು ಹತ್ತಿ ಚಿನ್ ಮರುಭೂಮಿಯಿಂದ ಹಮಾತಿನ ದಾರಿಯಲ್ಲಿರುವ ರೆಹೋಬಿನವರೆಗೆ ಆ ನಾಡನ್ನು ಸಂಚರಿಸಿ ನೋಡಿದರು.
22 : ಅವರು ಬೆಟ್ಟವನ್ನು ಹತ್ತಿ ನೆಗೆಬನ್ನು ದಾಟಿ, ಹೆಬ್ರೋನಿಗೆ ಬಂದರು. ಅಲ್ಲಿ ‘ಅನಕಿಮ್’ ವಂಶಸ್ಥರಾದ ಅಹೀಮನ್, ಶೇಷೈ, ತಲ್ಮೈ ಎಂಬವರು ಇದ್ದರು. (ಹೆಬ್ರೋನ್ ಪಟ್ಟಣ ಈಜಿಪ್ಟ್ ದೇಶದಲ್ಲಿರುವ ಚೋಮ್ ಪಟ್ಟಣಕ್ಕಿಂತ ಏಳು ವರ್ಷ ಮೊದಲೇ ಕಟ್ಟಲ್ಪಟ್ಟಿತ್ತು)
23 : ಎಷ್ಕೋಲ್ ಎಂಬ ತಗ್ಗಿಗೆ ಬಂದು ಅಲ್ಲಿ ದ್ರಾಕ್ಷಿ ಹಣ್ಣಿನ ಗೊಂಚಲಿದ್ದ ಒಂದು ಕೊಂಬೆಯನ್ನು ಕೊಯ್ದರು. ಅದನ್ನು ಅಡ್ಡದಂಡಿಗೆಯಲ್ಲಿ ಇಬ್ಬರು ಹೊತ್ತು ತಂದರು. ಕೆಲವು ದಾಳಿಂಬೆ ಹಣ್ಣುಗಳನ್ನೂ ಅಂಜೂರದ ಹಣ್ಣುಗಳನ್ನೂ ತಂದರು.
24 : ಇಸ್ರಯೇಲರು ಅಲ್ಲಿಯೇ ದ್ರಾಕ್ಷಿಯ ಗೊಂಚಲನ್ನು ಕೊಯ್ದದ್ದರಿಂದ ಆ ಸ್ಥಳಕ್ಕೆ ‘ಎಷ್ಕೋಲ್’ ಎಂದು ಹೆಸರಾಯಿತು.
25 : ನಾಲ್ವತ್ತು ದಿವಸ ಆ ನಾಡನ್ನು ಸಂಚರಿಸಿ ನೋಡಿ ಆದಮೇಲೆ ಅವರು ಹಿಂದಿರುಗಿ ಬಂದರು.
26 : ಪಾರಾನ್ ಮರುಭೂಮಿಯ ಕಾದೇಶಿನಲ್ಲಿದ್ದ ಮೋಶೆ, ಆರೋನ್ ಹಾಗು ಇಸ್ರಯೇಲ್ ಜನಸಮೂಹದ ಬಳಿಗೆ ಬಂದು ಅವರಿಗೆ ಸಮಾಚಾರವನ್ನು ತಿಳಿಸಿ ಆ ನಾಡಿನ ಹಣ್ಣುಗಳನ್ನು ತೋರಿಸಿದರು.
27 : ಮೋಶೆಗೆ, “ನೀವು ನಮ್ಮನ್ನು ಕಳಿಸಿದ ನಾಡಿಗೆ ಹೋಗಿದ್ದೆವು. ಅದು ಹಾಲು-ಜೇನು ಹರಿಯುವಂಥ ನಾಡು. ಅಲ್ಲಿನ ಹಣ್ಣುಹಂಪಲುಗಳು ಇಂಥವು.
28 : ಅಂತೆಯೇ ಆ ನಾಡಿನ ನಿವಾಸಿಗಳು ಬಲಿಷ್ಠರು. ಅವರಿರುವ ಪಟ್ಟಣಗಳು ದೊಡ್ಡವು; ಅವು ಕೋಟೆ ಕೊತ್ತಲುಗಳಿಂದ ಕೂಡಿವೆ. ಅದೂ ಅಲ್ಲದೆ ಅಲ್ಲಿ ‘ಅನಕಿಮ್’ ವಂಶಸ್ಥರನ್ನು ಕಂಡೆವು.
29 : ದಕ್ಷಿಣ ಪ್ರಾಂತ್ಯದಲ್ಲಿ ಅಮಾಲೇಕ್ಯರು, ಮಲೆನಾಡಿನಲ್ಲಿ ಹಿತ್ತಿಯರು, ಯೆಬೂಸಿಯರು ಹಾಗು ಅಮೋರಿಯರು ಮತ್ತು ಸಮುದ್ರತೀರದಲ್ಲಿ ಹಾಗೂ ಜೋರ್ಡನ್ ನದಿಯ ಪರಿಸರದಲ್ಲಿ ಕಾನಾನ್ಯರು ವಾಸವಾಗಿದ್ದಾರೆ,” ಎಂದು ವರದಿ ಮಾಡಿದರು.
30 : ಆಗ ಮೋಶೆಗೆ ವಿರುದ್ಧ ಗೊಣಗುಟ್ಟುತ್ತಿದ್ದ ಅವರನ್ನು ಕಾಲೇಬನು ಸಮಾಧಾನಗೊಳಿಸುತ್ತಾ, “ನಾವು ಧೈರ್ಯದಿಂದ ಆ ಮಲೆನಾಡಿಗೆ ಹೋಗಿ ಅದನ್ನು ಸ್ವಾಧೀನ ಪಡಿಸಿಕೊಳ್ಳೋಣ. ಅದನ್ನು ಜಯಿಸಲು ನಮ್ಮಿಂದ ಸಾಧ್ಯ,” ಎಂದನು.
31 : ಆದರೆ ಅವನ ಜೊತೆಯಲ್ಲಿ ಹೋಗಿದ್ದವರು, “ಆ ಜನರು ನಮಗಿಂತ ಬಲಿಷ್ಠರು! ಅವರ ಮೇಲೆ ಜಯಸಾಧಿಸಲು ನಮಗೆ ಶಕ್ತಿ ಸಾಲದು,” ಎಂದರು.
32 : ಅದಲ್ಲದೆ ತಾವು ಸಂಚರಿಸಿ ನೋಡಿ ಬಂದ ನಾಡಿನ ವಿಷಯವಾಗಿ ಇಸ್ರಯೇಲರಿಗೆ ಅಶುಭ ಸಮಾಚಾರವನ್ನೇ ಹೇಳುವವರಾದರು. “ನಾವು ಸಂಚಾರಮಾಡಿ ನೋಡಿ ಬಂದ ನಾಡು ತನ್ನಲ್ಲಿ ವಾಸಿಸುವವರನ್ನೇ ಕಬಳಿಸುವಂತಿದೆ. ನಾವು ಅಲ್ಲಿ ನೋಡಿದ ಜನರೆಲ್ಲರು ಬಹು ಎತ್ತರವಾದ ವ್ಯಕ್ತಿಗಳು.
33 : ಅಲ್ಲಿ ‘ನೆಫೀಲಿಯರನ್ನು’ ಅಂದರೆ ನೆಫೀಲಿಯನ ವಂಶದವರಾದ ‘ಅನಕಿಮ್’ರನ್ನು ನೋಡಿದೆವು. ಅವರ ಮುಂದೆ ನಾವು ಮಿಡತೆಗಳಂತೆ ಇದ್ದೆವು. ಅವರಿಗೂ ನಾವು ಹಾಗೆಯೆ ಕಾಣಿಸಿಕೊಂಡೆವು,” ಎಂದರು.

Holydivine