Numbers - Chapter 27
Holy Bible

1 : ಜೋಸೆಫನ ಕುಮಾರ ಮನಸ್ಸೆಯ ವಂಶಕ್ಕೆ ಸೇರಿದವನು ಚಲ್ಪಹಾದ ಎಂಬವನು. ಇವನು ಮಾಕೀರನ ಮರಿಮಗ, ಗಿಲ್ಯಾದನ ಮೊಮ್ಮಗ ಹಾಗು ಹೇಫರನ ಮಗ. ಈ ಚಲ್ಪಹಾದನಿಗೆ ಮಹ್ಲಾ, ನೋವಾ, ಹೊಗ್ಲಾ, ಮಿಲ್ಕಾ ಮತ್ತು ತಿರ್ಚಾ ಎಂಬ ಹೆಣ್ಣು ಮಕ್ಕಳಿದ್ದರು.
2 : ಇವರು ದೇವದರ್ಶನದ ಗುಡಾರದ ಬಾಗಿಲಿನ ಬಳಿಯಿದ್ದ ಮೋಶೆ, ಮಹಾಯಾಜಕ ಎಲ್ಲಾಜಾರ್, ಕುಲಾಧಿಪತಿಗಳು ಹಾಗು ಸರ್ವಸಮೂಹದವರ ಮುಂದೆ ಬಂದು ತಮ್ಮ ಒಂದು ವಿಜ್ಞಾಪನೆಯನ್ನು ಮುಂದಿಟ್ಟರು:
3 : “ನಮ್ಮ ತಂದೆ ಮರುಭೂಮಿಯಲ್ಲಿ ಸತ್ತುಹೋದರು. ಅವರು ಕೋರಹನ ಜತೆ ಸೇರಿ ಸರ್ವೇಶ್ವರನಿಗೆ ವಿರುದ್ಧ ಪ್ರತಿಭಟಿಸಿದವರಲ್ಲ. ಅವರು ಸತ್ತದ್ದು ತಮ್ಮ ಸ್ವಂತ ಪಾಪದ ನಿಮಿತ್ತ. ಅವರಿಗೆ ಗಂಡುಮಕ್ಕಳಿರಲಿಲ್ಲ.
4 : ನಮ್ಮ ತಂದೆಗೆ ಗಂಡುಮಗನಿಲ್ಲದ ಮಾತ್ರಕ್ಕೆ ಅವರ ಹೆಸರನ್ನು ಕುಲದಿಂದ ತೆಗೆದುಹಾಕುವುದು ನ್ಯಾಯವೇ? ನಮ್ಮ ತಂದೆಯ ಸ್ವಂತದವರಲ್ಲಿ ನಮಗೂ ಸೊತ್ತನ್ನು ಕೊಡಿ,” ಎಂದು ಕೇಳಿಕೊಂಡರು.
5 : ಮೋಶೆ ಅವರ ವಿಜ್ಞಾಪನೆಯನ್ನು ಸರ್ವೇಶ್ವರನ ಸಮ್ಮುಖದಲ್ಲಿ ವಿಚಾರಿಸಿದನು. ಅವರು ಆತನಿಗೆ ಹೀಗೆಂದು ವಿಧಿಸಿದರು:
6 : “ಚಲ್ಪಹಾದನ ಹೆಣ್ಣುಮಕ್ಕಳು ಹೇಳುವುದು ನ್ಯಾಯವಾಗಿದೆ.
7 : ಅವರ ತಂದೆಯ ಸ್ವಂತದವರಲ್ಲಿ ಅವರಿಗೂ ಸೊತ್ತನ್ನು ಕೊಡು. ತಂದೆಯ ಸೊತ್ತು ಅವರಿಗೆ ಸೇರಲಿ.
8 : ಇದಲ್ಲದೆ ಇಸ್ರಯೇಲರಿಗೆ ನೀನು ಹೀಗೆಂದು ಆಜ್ಞಾಪಿಸು: ಯಾವನಾದರು ಮಗನಿಲ್ಲದೆ ಸತ್ತರೆ ಅವನ ಸೊತ್ತು ಅವನ ಮಗಳಿಗೆ ಸೇರಬೇಕು.
9 : ಮಗಳು ಇಲ್ಲದ ಪಕ್ಷಕ್ಕೆ ಅವನ ಸೊತ್ತು ಅವನ ಅಣ್ಣತಮ್ಮಂದಿರಿಗೆ ಸೇರಬೇಕು.
10 : ಅಣ್ಣತಮ್ಮಂದಿರಿಲ್ಲದ ಪಕ್ಷಕ್ಕೆ ತಂದೆಯ ಅಣ್ಣತಮ್ಮಂದಿರಿಗೆ ಸೇರಬೇಕು.
11 : ಇವರೂ ಇಲ್ಲದಿದ್ದರೆ ಕುಲದವರಲ್ಲಿ ಸವಿೂಪ ಬಂಧುವಿಗೆ ಸೇರಬೇಕು; ಇವನೇ ಅದನ್ನು ಅನುಭೋಗಿಸಲಿ. ಸರ್ವೇಶ್ವರನಾದ ನಾನು ನಿನಗೆ ಅಪ್ಪಣೆಮಾಡಿದ ಈ ತೀರ್ಮಾನವು ಇಸ್ರಯೇಲರಿಗೆ ನ್ಯಾಯವಿಧಿಯಾಗಿರಲಿ.”
12 : ಸರ್ವೇಶ್ವರ ಮೋಶೆಗೆ ಹೀಗೆಂದರು: “ನೀನು ಈ ಅಬಾರೀಮ್ ಬೆಟ್ಟವನ್ನು ಹತ್ತಿ ಇಸ್ರಯೇಲರಿಗೆ ನಾನು ವಾಗ್ದಾನ ಮಾಡಿದ ನಾಡನ್ನು ನೋಡು.
13 : ನೋಡಿದ ಮೇಲೆ ನಿನ್ನ ಅಣ್ಣ ಆರೋನನು ಮರಣ ಹೊಂದಿ ಪಿತೃಗಳ ಬಳಿಗೆ ಸೇರಿದಂತೆ ನೀನು ಕೂಡ ಸೇರಬೇಕು.
14 : ಚಿನ್ ಮರುಭೂಮಿಯಲ್ಲಿ ಇಸ್ರಯೇಲ್ ಸಮಾಜದವರು ನನ್ನೊಡನೆ ವಿವಾದಿಸಿದರು. ಆಗ ನೀವಿಬ್ಬರೂ ನನ್ನ ಗೌರವವನ್ನು ಅವರ ಮುಂದೆ ಕಾಪಾಡದೆ ಹೋದಿರಿ; ನನ್ನ ಆಜ್ಞೆಯನ್ನು ಉಲ್ಲಂಘಿಸಿದಿರಿ. ಆದ್ದರಿಂದ ನೀವು ಆ ನಾಡನ್ನು ಸೇರಬಾರದು.” ಚಿನ್ ಮರುಭೂಮಿಯಲ್ಲಿನ ಕಾದೇಶಿನಲ್ಲಿರುವ ಮೆರಿಬಾ ಜಲಾಶಯದ ಬಳಿ ನಡೆದ ಘಟನೆಯನ್ನು ಸೂಚಿಸುತ್ತಾ ಇದನ್ನು ನುಡಿದರು.
15 : ಗಾದ್ ಕುಲದ ಕುಟುಂಬಗಳು ಇವು: ಚೆಫೋನನಿಂದ ಚೆಫೋನ್ಯರು, ಹಗ್ಗೀಯನಿಂದ ಹಗ್ಗೀಯರು, ಶೂನೀಯನಿಂದ ಶೂನೀಯರು,
16 : “ಸರ್ವೇಶ್ವರಾ, ಎಲ್ಲ ಪ್ರಾಣಿಗಳಿಗೆ ಜೀವದಾತ ದೇವರೇ, ನಿಮ್ಮವರಾದ ಈ ಸಮಾಜದವರು ಕುರುಬನಿಲ್ಲದ ಕುರಿಗಳಾಗಬಾರದು.
17 : ಆದುದರಿಂದ ಅವರ ಕೆಲಸಕಾರ್ಯಗಳನ್ನು ನಿರ್ವಹಿಸುವುದಕ್ಕೂ ಅವರನ್ನು ಮುನ್ನಡೆಸುವುದಕ್ಕೂ ಹಿಂದಕ್ಕೆ ಕರೆದುತರುವುದಕ್ಕೂ ಒಬ್ಬ ನಾಯಕನನ್ನು ನೇಮಿಸಿ,” ಎಂದು ಮನವಿಮಾಡಿಕೊಂಡನು.
18 : ಅದಕ್ಕೆ ಸರ್ವೇಶ್ವರ, “ನೂನನ ಮಗ ಯೆಹೋಶುವನು ಆತ್ಮ ವರಸಂಪನ್ನನು.
19 : ಅವನನ್ನು ಮಹಾಯಾಜಕನಾದ ಎಲ್ಲಾಜಾರನ ಮುಂದೆ ಹಾಗು ಸಮಾಜದವರೆಲ್ಲರ ಮುಂದೆ ನಿಲ್ಲಿಸು; ಅವನ ಮೇಲೆ ಹಸ್ತನಿಕ್ಷೇಪಮಾಡಿ ಅವರ ಸಮ್ಮುಖದಲ್ಲೆ ಅಧಿಕಾರ ವಹಿಸಿಕೊಡು.
20 : ಸಮಾಜದವರೆಲ್ಲರು ಅವನಿಗೆ ವಿಧೇಯರಾಗಿ ಇರುವಂತೆ ನಿನಗಿರುವ ಗೌರವವನ್ನು ಅವನಿಗೆ ಕೊಡು.
21 : ದೈವೇಚ್ಛೆಯನ್ನು ತಿಳಿದುಕೊಳ್ಳಲು ಅವನು ಮಹಾಯಾಜಕ ಎಲ್ಲಾಜಾರನ ಹತ್ತಿರ ಬರಬೇಕು. ಎಲ್ಲಾಜಾರನು ಸರ್ವೇಶ್ವರನ ಸನ್ನಿಧಿಯಲ್ಲಿ ‘ಊರಿಮ್’ ಎಂಬ ವಸ್ತುವಿನ ಮೂಲಕ ಅವನ ಪರವಾಗಿ ವಿಚಾರಿಸುವನು. ಯೆಹೋಶುವನು ಮತ್ತು ಇಸ್ರಯೇಲ್ ಸಮಾಜದವರೆಲ್ಲರು ಅವನ ಮಾತಿನಂತೆ ಹೊರಡಬೇಕು ಹಾಗು ಹಿಂದಿರುಗಬೇಕು,” ಎಂದು ಆಜ್ಞಾಪಿಸಿದರು.
22 : ಸರ್ವೇಶ್ವರನ ಅಪ್ಪಣೆಯ ಮೇರೆಗೆ ಮೋಶೆ ಯೆಹೋಶುವನನ್ನು ಮಹಾಯಾಜಕ ಎಲ್ಲಾಜಾರನ ಮತ್ತು ಸಮಾಜದವರೆಲ್ಲರ ಮುಂದೆ ನಿಲ್ಲಿಸಿ
23 : ಅವನ ಮೇಲೆ ಹಸ್ತನಿಕ್ಷೇಪ ಮಾಡಿ ಅವನಿಗೆ ಅಧಿಕಾರವನ್ನು ವಹಿಸಿಕೊಟ್ಟನು.

Holydivine