Esther - Chapter 10
Holy Bible

1 : ಅರಸ ಅಹಷ್ಟೇರೋಷನು ತನ್ನ ರಾಜ್ಯಕ್ಕೆ ಸೇರಿದ ಎಲ್ಲಾ ದೇಶಗಳ ಮೇಲೂ ಸಮುದ್ರ-ದ್ವೀಪಗಳ ಮೇಲೂ ತೆರಿಗೆಯನ್ನು ವಿಧಿಸಿದನು.
2 : ಅವನ ಶಕ್ತಿಸಾಮಥ್ರ್ಯದ ಸಾಹಸಕಾರ್ಯಗಳೆಲ್ಲವು ಹಾಗೂ ಅರಸನು ಮೊರ್ದೆಕೈಯನ್ನು ಅತ್ಯುನ್ನತ ಗೌರವಾಸ್ಥಾನಕ್ಕೆ ಏರಿಸಿದ್ದನ್ನು ಕುರಿತ ಪೂರ್ಣ ವಿವರವು ಮೇದ್ಯ ಮತ್ತು ಪರ್ಷಿಯ ದೇಶಗಳ ಅರಸರ ವೃತ್ತಾಂತ ಗ್ರಂಥದಲ್ಲಿ ಬರೆಯಲಾಗಿವೆ.
3 : ಯೆಹೂದ್ಯನಾದ ಮೊರ್ದೆಕೈಯಾದರೋ ಅರಸ ಅಹಷ್ಟೇರೋಷನಿಗೆ ದ್ವಿತೀಯ ಸ್ಥಾನದವನೂ ಯೆಹೂದ್ಯರಲ್ಲಿ ಸನ್ಮಾನಿತನೂ ತನ್ನ ಬಂಧುಬಳಗದವರಲ್ಲಿ ಪ್ರೀತಿಪಾತ್ರನೂ ಸ್ವಜನರ ಹಿತಚಿಂತಕನೂ ಸ್ವಕುಲದವರೆಲ್ಲರಿಗೆ ಶಾಂತಿದೂತನೂ ಆಗಿದ್ದನು.

Holydivine