Index

ಆದಿಕಾಂಡ - Chapter 15

1 ಇವುಗಳಾದ ಮೇಲೆ ಅಬ್ರಾಮನಿಗೆ ದರ್ಶನದಲ್ಲಿ ಕರ್ತನ ವಾಕ್ಯವು ಬಂದು--ಅಬ್ರಾಮನೇ, ಭಯಪಡಬೇಡ; ನಾನೇ ನಿನ್ನ ಗುರಾಣಿಯೂ ನಿನ್ನ ಅತ್ಯಧಿಕವಾದ ಬಹುಮಾನವೂ ಆಗಿದ್ದೇನೆ. 
2 ಅದಕ್ಕೆ ಅಬ್ರಾಮನು--ಕರ್ತನಾದ ದೇವರೇ, ನನಗೆ ಏನು ಕೊಟ್ಟರೇನು? ನಾನು ಮಕ್ಕಳಿಲ್ಲದವನಾಗಿದ್ದೇನೆ. ಈ ದಮಸ್ಕದವನಾದ ಎಲೀಯೆಜರನು ನನ್ನ ಮನೆಯ ಮನೆವಾರ್ತೆಯವನಾ ಗಿದ್ದಾನಲ್ಲಾ ಅಂದನು. 
3 ಅಬ್ರಾಮನು--ಇಗೋ, ನೀನು ನನಗೆ ಸಂತಾನವನ್ನು ಕೊಡಲಿಲ್ಲ; ಇಗೋ, ನನ್ನ ಮನೆಯಲ್ಲಿ ಹುಟ್ಟಿದವನು ನನಗೆ ಬಾಧ್ಯನಾಗಿ ರುವನು ಅಂದಾಗ 
4 ಇಗೋ, ಕರ್ತನ ವಾಕ್ಯವು ಅವನಿಗೆ ಉಂಟಾಗಿ--ಇವನು ನಿನಗೆ ಬಾಧ್ಯನಾಗುವ ದಿಲ್ಲ. ನಿನ್ನಿಂದ ಹುಟ್ಟಿದವನೇ ನಿನಗೆ ಬಾಧ್ಯನಾಗುವನು ಅಂದನು. 
5 ಕರ್ತನು ಅವನನ್ನು ಹೊರಗೆ ಕರಕೊಂಡು ಬಂದು--ಈಗ ನೀನು ಆಕಾಶವನ್ನು ದೃಷ್ಟಿಸಿ ನಕ್ಷತ್ರ ಗಳನ್ನು ಲೆಕ್ಕಿಸಶಕ್ತನಾದರೆ ಅವುಗಳನ್ನು ಲೆಕ್ಕಿಸು ಅಂದನು. ಆತನು ಅವನಿಗೆ--ಅದರಂತೆಯೇ ನಿನ್ನ ಸಂತತಿಯು ಆಗುವದು ಎಂದು ಅವನಿಗೆ ಹೇಳಿದನು. 
6 ಅಬ್ರಾ ಮನು ಕರ್ತನಲ್ಲಿ ನಂಬಿಕೆಯಿಟ್ಟನು. ಆತನು ಅದನ್ನು ಅವನಿಗೆ ನೀತಿ ಎಂದು ಎಣಿಸಿದನು. 
7 ಆತನು ಅವನಿಗೆ--ಈ ದೇಶವನ್ನು ಬಾಧ್ಯವಾಗಿ ನಿನಗೆ ಕೊಡುವದಕ್ಕೆ ಕಲ್ದೀಯರ ಊರ್‌ನಿಂದ ನಿನ್ನನ್ನು ಹೊರಗೆ ತಂದ ಕರ್ತನು ನಾನೇ ಎಂದು ಹೇಳಿದನು. 
8 ಅದಕ್ಕೆ ಅವನು--ದೇವರಾದ ಕರ್ತನೇ, ನಾನು ಅದನ್ನು ಬಾಧ್ಯವಾಗಿ ಹೊಂದುವೆನೆಂದು ಯಾವದ ರಿಂದ ತಿಳುಕೊಳ್ಳಲಿ ಅಂದನು. 
9 ಅದಕ್ಕೆ ಆತನು ಅಬ್ರಾಮನಿಗೆ--ಮೂರು ಮೂರು ವರುಷದ ಕಡಸು ಆಡು ಟಗರುಗಳನ್ನೂ ಒಂದು ಬೆಳವಕ್ಕಿಯನ್ನೂ ಒಂದು ಪಾರಿವಾಳದ ಮರಿಯನ್ನೂ ನನಗಾಗಿ ತೆಗೆದುಕೋ ಅಂದನು. 
10 ಅವನು ಇವುಗಳನ್ನೆಲ್ಲಾ ಆತನಿಗಾಗಿ ತೆಗೆದುಕೊಂಡು ನಡುವೆ ತುಂಡುಮಾಡಿ ಒಂದು ತುಂಡನ್ನು ಇನ್ನೊಂದರ ಎದುರಾಗಿ ಇಟ್ಟನು; ಆದರೆ ಪಕ್ಷಿಗಳನ್ನು ತುಂಡುಮಾಡಲಿಲ್ಲ. 
11 ಪಕ್ಷಿಗಳು ಆ ಶವಗಳ ಮೇಲೆ ಇಳಿದು ಬಂದಾಗ ಅಬ್ರಾಮನು ಅವುಗಳನ್ನು ಓಡಿಸಿದನು. 
12 ಸೂರ್ಯನು ಅಸ್ತಮಿಸಲಾಗಿ ಅಬ್ರಾಮನಿಗೆ ಗಾಢನಿದ್ರೆ ಹತ್ತಿತು. ಆಗ ಇಗೋ, ಭಯದ ಘೋರಾಂಧಕಾರವು ಅವನ ಮೇಲೆ ಕವಿಯಿತು. 
13 ಆಗ ಆತನು ಅಬ್ರಾಮನಿಗೆ--ನಿನ್ನ ಸಂತತಿ ಯವರು ತಮ್ಮದಲ್ಲದ ದೇಶದಲ್ಲಿ ಪರದೇಶಿಗಳಾಗಿದ್ದು ಅವರನ್ನು ಸೇವಿಸುವರು. ಅವರು ನಾನೂರು ವರುಷ ಗಳು ನಿನ್ನ ಸಂತತಿಯವರನ್ನು ಶ್ರಮೆಪಡಿಸುವರು ಎಂದು ನೀನು ಖಂಡಿತವಾಗಿಯೂ ತಿಳಿಯತಕ್ಕದ್ದು. 
14 ಅವರು ಸೇವಿಸುವ ಜನಾಂಗಕ್ಕೆ ನಾನೇ ನ್ಯಾಯ ತೀರಿಸುವೆನು; ತರುವಾಯ ಮಹಾ ಸಂಪತ್ತಿನೊಂದಿಗೆ ಅವರು ಹೊರಗೆ ಬರುವರು. 
15 ನೀನಾದರೋ ಸಮಾಧಾನದಿಂದ ನಿನ್ನ ತಂದೆಗಳ ಬಳಿಗೆ ಹೋಗುವಿ; ಬಹಳ ಮುದಿಪ್ರಾಯದವನಾಗಿ (ಮೃತಿ ಹೊಂದಿ) ಹೂಣಲ್ಪಡುವಿ. 
16 ಆದರೆ ನಾಲ್ಕನೆಯ ಸಂತಾನದಲ್ಲಿ ಅವರು ತಿರಿಗಿ ಬರುವರು; ಅಮೋರಿಯರ ದುಷ್ಟತನವು ಇನ್ನೂ ಪೂರ್ತಿಯಾಗಲಿಲ್ಲ ಎಂದು ಹೇಳಿದನು. 
17 ಸೂರ್ಯನು ಮುಳುಗಿದ ಮೇಲೆ ಕತ್ತಲಾದಾಗ ಇಗೋ, ಹೊಗೆಹಾಯುವ ಒಲೆಯೂ ಉರಿಯುವ ದೀಪವೂ ತುಂಡುಗಳ ಮಧ್ಯದಲ್ಲಿ ಹಾದುಹೋದವು. 
18 ಅದೇ ದಿನದಲ್ಲಿ ಕರ್ತನು ಅಬ್ರಾಮನ ಸಂಗಡ ಒಡಂಬಡಿಕೆ ಮಾಡಿಕೊಂಡು--ಐಗುಪ್ತದ ನದಿಯಿಂದ ಮಹಾನದಿಯಾದ ಯೂಫ್ರೇಟೀಸ್‌ ನದಿಯ ವರೆಗೆ ವಾಸಿಸುವ 
19 ಕೇನಿಯರೂ ಕೆನಿಜೀಯರೂ ಕದ್ಮೋನಿ ಯರೂ 
20 ಹಿತ್ತಿಯರೂ ಪೆರಿಜೀಯರೂ ರೆಫಾಯರೂ 
21 ಅಮೋರಿಯರೂ ಕಾನಾನ್ಯರೂ ಗಿರ್ಗಾಷಿಯರೂ ಯೆಬೂಸಿಯರೂ ವಾಸವಾಗಿರುವ ದೇಶವನ್ನು ನಾನು ನಿನ್ನ ಸಂತತಿಗೆ ಕೊಟ್ಟಿದ್ದೇನೆ ಅಂದನು.