Baruch - Chapter 3
Holy Bible

1 : “ಸರ್ವಶಕ್ತ ಸರ್ವೇಶ್ವರಾ, ಇಸ್ರಯೇಲಿನ ದೇವರೇ, ಇಕ್ಕಟ್ಟಿನಲ್ಲಿ ಸಿಕ್ಕಿರುವ ನಮ್ಮ ಪ್ರಾಣವು, ನೊಂದಿರುವ ನಮ್ಮ ಮನವು ನಿಮಗೆ ಮೊರೆಯಿಡುತ್ತಿದೆ.
2 : ಸರ್ವೇಶ್ವರಾ, ನಮಗೆ ದಯೆತೋರಿ. ನೀವು ಕರುಣಾಳು ದೇವರಲ್ಲವೆ? ನಾವು ನಿಮ್ಮ ಸನ್ನಿಧಿಯಲ್ಲಿ ಪಾಪಮಾಡಿದ್ದೇವೆ, ನಮ್ಮ ಮೇಲೆ ನಿಮ್ಮ ಕೃಪಾಕಟಾಕ್ಷವಿರಲಿ.
3 : ಸದಾಕಾಲವು ಸಿಂಹಾಸನಾರೂಢರಾಗಿರುವಂಥವರು ನೀವು; ನಾವಾದರೋ ಸತ್ತು ಅಳಿದು ಹೋಗುವಂಥವರೇ
4 : ಸರ್ವಶಕ್ತ ಸರ್ವೇಶ್ವರಾ, ಇಸ್ರಯೇಲಿನ ದೇವರೇ, ಸತ್ತವರಂತೆ ಆಗಿಬಿಟ್ಟಿರುವ ಇಸ್ರಯೇಲರಾದ ನಮ್ಮ ಬಿನ್ನಹವನ್ನು ಕೇಳಿರಿ. ನಮ್ಮ ದೇವರಾದ ನಿಮ್ಮ ಮಾತನ್ನು ಆಲಿಸದೆ, ನಿಮ್ಮ ಸನ್ನಿಧಿಯಲ್ಲಿ ಪಾಪಮಾಡಿದವರ ಮಕ್ಕಳಾದ ನಮ್ಮ ಪ್ರಾರ್ಥನೆಯನ್ನು ಆಲಿಸಿರಿ. ಆ ಪಾಪಗಳ ಕಾರಣದಿಂದಲೇ ಇಂಥ ವಿಪತ್ತುಗಳು ನಮಗೆ ಅಂಟಿಕೊಂಡಿವೆ.
5 : ಈ ಕಾಲದಲ್ಲಿ ನಮ್ಮ ಪೂರ್ವಜರ ಅಪರಾಧಗಳನ್ನು ನೆನಪಿಗೆ ತಂದುಕೊಳ್ಳದೆ, ನಿಮ್ಮ ಪರಾಕ್ರಮವನ್ನೂ ನಿಮ್ಮ ನಾಮವನ್ನೂ ನೆನೆಸಿಕೊಳ್ಳಿರಿ.
6 : ನೀವೇ ನಮ್ಮ ದೇವರಾದ ಸರ್ವೇಶ್ವರ.
8 : “ಸರ್ವೇಶ್ವರಾ, ನಾವು ನಿಮ್ಮನ್ನೇ ಕೊಂಡಾಡುತ್ತೇವೆ. ನಾವು ನಿಮ್ಮ ನಾಮವನ್ನು ಕೀರ್ತಿಸಬೇಕೆಂತಲೇ ನಮ್ಮ ಹೃದಯದಲ್ಲಿ ನಿಮ್ಮ ಭಯಭಕ್ತಿಯನ್ನುಂಟು ಮಾಡಿದ್ದೀರಿ. ನಾವಿರುವ ಈ ಪರದೇಶದಲ್ಲೇ ನಿಮ್ಮನ್ನು ಕೊಂಡಾಡುವೆವು. ಏಕೆಂದರೆ, ನಿಮ್ಮ ಸನ್ನಿಧಿಯಲ್ಲಿ ಪಾಪಮಾಡಿದ ನಮ್ಮ ಪೂರ್ವಜರ ದ್ರೋಹಗಳನ್ನೆಲ್ಲ ನಮ್ಮ ಹೃದಯದಿಂದ ತೆಗೆದುಹಾಕಿದ್ದೇವೆ
8 : ನೋಡಿ, ನೀವು ನಮ್ಮನ್ನು ಚದರಿಸಿಬಿಟ್ಟಿರುವ ಈ ಪರದೇಶದಲ್ಲೇ ನಾವಿನ್ನೂ ಉಳಿದಿದ್ದೇವೆ. ನಮ್ಮ ದೇವರಾದ ಸರ್ವೇಶ್ವರಸ್ವಾಮಿಯನ್ನು ಬಿಟ್ಟು ಅಗಲಿದ ನಮ್ಮ ಪೂರ್ವಜರ ಅಪರಾಧಗಳ ನಿಮಿತ್ತ ನಾವು ದೂಷಣೆ, ಶಾಪ ಹಾಗು ದಂಡನೆಗೆ ಗುರಿ ಆಗಿದ್ದೇವೆ. ಸುಜ್ಞಾನದ ಸ್ತುತಿ: ಸುಜ್ಞಾನ ದೊರಕುವ ಮಾರ್ಗ
9 : ಇಸ್ರಯೇಲೇ, ಜೀವದಾಯಕ ಆಜ್ಞೆಗಳನ್ನು ಕೇಳು, ಸುಜ್ಞಾನವನ್ನು ಕಲಿತುಕೊ ಕಿವಿಗೊಟ್ಟು.
10 : ಇಸ್ರಯೇಲೇ, ಇದು ಸಂಭವಿಸಿದ್ದು ಹೇಗೆ? ನಿನ್ನ ಶತ್ರುಗಳ ದೇಶದೊಳಕ್ಕೆ ನೀನು ಬಂದುದು ಹೇಗೆ? ಪರದೇಶದಲ್ಲಿ ನೀನು ಮುಪ್ಪಾದುದು ಹೇಗೆ? ಸತ್ತವರಂತೆ ನೀನು ಹೊಲೆಯಾದುದು ಹೇಗೆ?
11 : ಪಾತಾಳಲೋಕ ಸೇರಿದವರಂತೆ ನೀನು ಪರಿಗಣಿತನಾದುದು ಹೇಗೆ?
12 : ಸುಜ್ಞಾನದ ಬುಗ್ಗೆಯನ್ನೇ ನೀ ಮರೆತು ಬಿಟ್ಟಿರುವೆ.
13 : ದೇವರ ಮಾರ್ಗದಲ್ಲಿ ನೀನು ನಡೆದಿದ್ದರೆ ನಿರಂತರ ಶಾಂತಿಸಮಾಧಾನದಿಂದ ವಾಸಿಸುತ್ತಿದ್ದೆ.
14 : ಸುಜ್ಞಾನವೆಲ್ಲಿದೆ, ಶಕ್ತಿಯೆಲ್ಲಿದೆ, ವಿವೇಕವೆಲ್ಲಿದೆ ಎಂಬುದನ್ನು ಕಲಿ; ಆಗ ಕಂಡುಕೊಳ್ಳುವೆ ದೀರ್ಘಾಯುಸ್ಸು ಮತ್ತು ಜೀವ ಎಲ್ಲಿವೆಯೆಂದು ದಾರಿತೋರುವ ಬೆಳಕು ಮತ್ತು ಶಾಂತಿ ಎಲ್ಲಿವೆಯೆಂದು.
15 : ಸುಜ್ಞಾನದ ನೆಲೆಯನ್ನು ಕಂಡು ಹಿಡಿದಿರುವವರಾರು? ಅದರ ನಿಧಿಗೃಹವನ್ನು ಪ್ರವೇಶಿಸಿರುವವರಾರು?
16 : ರಾಷ್ಟ್ರಗಳ ನಾಯಕರು ಎಲ್ಲಿದ್ದಾರೆ? ಜೀವಜಂತುಗಳನ್ನು ಆಳಿದವರೆಲ್ಲಿದ್ದಾರೆ?
17 : ಎಲ್ಲಿ ಆಕಾಶಪಕ್ಷಿಗಳೊಂದಿಗೆ ಆಟವಾಡಿದವರು? ಮಾನವರು ಮೆಚ್ಚುವ ಬೆಳ್ಳಿಬಂಗಾರವನ್ನು ಸಂಗ್ರಹಿಸಿದವರು? ಇವುಗಳ ಸಂಪಾದನೆಗೆ ಇತಿಮಿತಿ ಇದೆಯೆ?
18 : ಯಾರು ಬೆಳ್ಳಿಯ ಕೆಲಸದಲ್ಲೇ ನಿರತರಾಗಿ ಹಂಬಲಿಸಿದರೋ ಅವರ ಆ ಕೆಲಸದ ಗುರುತನ್ನಾದರೂ ಕಂಡು ಹಿಡಿಯಲು ಸಾಧ್ಯವೋ?
19 : ಅವರು ಕಣ್ಮರೆಯಾಗಿ ಪಾತಾಳವನ್ನು ಸೇರಿದರು ಅವರ ಸ್ಥಳವನ್ನು ಆಕ್ರಮಿಸಿಕೊಂಡಿದ್ದಾರೆ ಇತರರು.
20 : ಆ ಬಳಿಕ ಬಂದವರು ಕಣ್ಣಿಗೆ ಕಾಣಿಸಿಕೊಂಡರು ಸರದಿಯ ಪ್ರಕಾರ ಧರೆಯಲ್ಲಿ ವಾಸಿಸಿದರು. ಆದರೆ ಕಂಡುಹಿಡಿಯಲಿಲ್ಲ ಜ್ಞಾನದ ಮಾರ್ಗವನ್ನು ಅರಿಯಲಿಲ್ಲ ಅದು ಹಿಡಿಯುವ ಹಾದಿಯನ್ನು.
21 : ಅವರ ಮಕ್ಕಳಾದರೋ ಅದನ್ನು ಕಾಣದೆ ಹೋದರು. ಆ ಮಾರ್ಗದಿಂದ ಬಲುದೂರದಲ್ಲೇ ಉಳಿದರು.
22 : ಕಾನಾನಿನಲ್ಲಿ ಅದರ ವಿಷಯವನ್ನು ಕೇಳಿದವರಿಲ್ಲ ತೇಮಾನಿನಲ್ಲೂ ಅದನ್ನು ಕೇಳಿ ನೋಡಿದವರಿಲ್ಲ.
23 : ಲೌಕಿಕ ಜ್ಞಾನ ಹುಡುಕುವ ಹಾಗರಳ ಸಂತತಿಯವರು ಮಿದ್ಯಾನಿನ ಹಾಗು ತೇಮಾನಿನ ವರ್ತಕರು ಕಟ್ಟುಕತೆಗಾರರು ಮತ್ತು ತತ್ವಶಾಸ್ತ್ರಜ್ಞರು ಇವರಾರೂ ಸುಜ್ಞಾನದ ಮಾರ್ಗವನ್ನು ಕಂಡುಕೊಳ್ಳಲಿಲ್ಲ, ಅದು ಹಿಡಿಯುವ ಹಾದಿಯನ್ನು ಜ್ಞಾಪಿಸಿಕೊಳ್ಳಲಿಲ್ಲ.
24 : ಇಸ್ರಯೇಲೇ, ದೇವರ ಲೋಕ ಎಷ್ಟು ದೊಡ್ಡದು ! ಆತನ ಆಧಿಪತ್ಯ ಎಷ್ಟು ವಿಶಾಲವಾದುದು !
25 : ಹೌದು, ಅದು ದೊಡ್ಡದು, ಅಪಾರ ಅಳೆಯಲಾಗದಷ್ಟು ವಿಶಾಲ, ಗ್ರಹಿಸಲಾಗದಷ್ಟು ಉನ್ನತ.
26 : ಇದರಲ್ಲಿ ಜನಿಸಿದ್ದರು ಹಿಂದೆ ಹೆಸರಾಂತ ಮಹಾನ್ ವ್ಯಕ್ತಿಗಳು ದೇಹಾಕಾರದಲ್ಲಿ ಬಲಾಢ್ಯರು, ಯುದ್ಧದಲ್ಲಿ ನಿಪುಣರು.
27 : ಆದರೂ ದೇವರು ಅವರನ್ನು ಆಯ್ದುಕೊಳ್ಳಲಿಲ್ಲ ಸುಜ್ಞಾನದ ಮಾರ್ಗವನ್ನು ಅವರಿಗೆ ತೋರಿಸಲಿಲ್ಲ.
28 : ಸುಜ್ಞಾನವಿಲ್ಲದೆ ಅವರು ಸತ್ತುಹೋದರು ಅವಿವೇಕದಿಂದ ಅವರು ಹಾಳಾಗಿಹೋದರು.
29 : ಅದನ್ನು ಹಿಡಿಯಲು ಆಕಾಶವನ್ನು ಏರಿದವರುಂಟೆ? ಮೋಡಗಳಿಂದ ಅದನ್ನು ಕೆಳಕ್ಕೆ ಇಳಿಸಿದ್ದುಂಟೆ?
30 : ಅದನ್ನು ಕಂಡುಹಿಡಿಯಲು ಸಮುದ್ರವನ್ನು ದಾಟಿದವರುಂಟೆ? ಚೊಕ್ಕ ಬಂಗಾರವನ್ನು ಕೊಟ್ಟು ಕೊಂಡುತಂದವರುಂಟೆ?
31 : ಅದನ್ನು ಹಿಡಿಯುವ ಮಾರ್ಗವನ್ನು ಬಲ್ಲವರಿಲ್ಲ ಅದರ ಹಾದಿಯನ್ನು ಗ್ರಹಿಸಿದವರಾರೂ ಇಲ್ಲ.
32 : ಆದರೆ ಸುಜ್ಞಾನವನ್ನು ಬಲ್ಲ ಸರ್ವಜ್ಞನೊಬ್ಬನಿದ್ದಾನೆ. ಆತ ತನ್ನ ಸ್ವಂತ ಬುದ್ಧಿವಿವೇಕದಿಂದ ಅದನ್ನು ತಿಳಿದಿದ್ದಾನೆ. ಜಗತ್ತನ್ನು ಚಿರಕಾಲ ಸ್ಥಿರವಾಗಿರಿಸಿದವನು ಆತನೆ ನಾಲ್ಕು ಕಾಲಿನ ಪಶುಪ್ರಾಣಿಗಳಿಂದ ಅದನ್ನು ತುಂಬಿಸಿದವನು ಆತನೆ.
33 : ಆತ ಬೆಳಕನ್ನು ಕಳುಹಿಸುತ್ತಾನೆ – ಅದು ಬರುತ್ತದೆ ಹಿಂದಕ್ಕೆ ಕರೆದಾಗ ಭಯದಿಂದ ಹಿಂದಿರುಗುತ್ತದೆ.
34 : ತಾರೆಗಳು ನಿಯಮಿತ ಸ್ಥಳದಲ್ಲಿ ಸಂತಸದಿಂದ ಮಿನುಗುತ್ತವೆ ಆತ ಕರೆದಾಗ “ಇಗೋ ಇಲ್ಲಿದ್ದೇವೆ,” ಎಂದು ಹೇಳುತ್ತವೆ, ತಮ್ಮನ್ನು ಸೃಷ್ಟಿಸಿದಾತನ ಆನಂದಕ್ಕಾಗಿ ಅವು ಹೊಳೆಯುತ್ತವೆ.
35 : ಆತನೇ ನಮ್ಮ ದೇವರು; ಯಾರೂ ಇಲ್ಲ ಆತನಿಗೆ ಸಮಾನರು.
36 : ಜ್ಞಾನದ ಇಡೀ ಮಾರ್ಗವನ್ನು ಅರಿತಿದ್ದಾರೆ ಆ ದೇವರು. ತಮ್ಮ ದಾಸ ಯಕೋಬನಿಗೂ ತಮ್ಮ ಪ್ರಿಯ ಇಸ್ರಯೇಲರಿಗೂಹಿಂದಿರುಗುತ್ತದೆ.
37 : ಅನಂತರವೇ ಸುಜ್ಞಾನ ಧರೆಯ ಮೇಲೆ ಕಾಣಿಸಿಕೊಂಡಿತು, ಮಾನವರ ಮಧ್ಯೆ ಅದು ವಾಸಮಾಡಿತು.

Holydivine