Romans - Chapter 9
1 : ನನ್ನ ಜನರಾದ ಯೆಹೂದ್ಯರ ವಿಷಯವಾಗಿ ನನಗೆ ಅತೀವ ದುಃಖವೂ ನಿರಂತರ ಮನೋವೇದನೆಯೂ ಉಂಟಾಗುತ್ತಿದೆ.
2 : ಇದು ಸುಳ್ಳಲ್ಲ, ಕ್ರಿಸ್ತಯೇಸುವಿನಲ್ಲಿ ಸತ್ಯವಾಗಿಯೇ ಹೇಳುತ್ತಿದ್ದೇನೆ. ಪವಿತ್ರಾತ್ಮಾಧೀನವಾಗಿರುವ ನನ್ನ ಮನಸ್ಸೇ ಇದಕ್ಕೆ ಸಾಕ್ಷಿಯಾಗಿದೆ.
3 : ಸ್ವದೇಶಿಯರೂ ರಕ್ತಸಂಬಂಧಿಕರೂ ಆದ ನನ್ನ ಸಹೋದರರ ಪರವಾಗಿ ನಾನು ಕ್ರಿಸ್ತಯೇಸುವಿನಿಂದ ಬಹಿಷ್ಕøತನಾಗಿ ಶಾಪಗ್ರಸ್ತನಾಗಲು ಸಹ ಸಿದ್ಧನಿದ್ದೇನೆ.
4 : ಅವರೇ ಇಸ್ರಯೇಲರು. ದೇವರೇ ಇವರನ್ನು ಮಕ್ಕಳನ್ನಾಗಿ ಆರಿಸಿಕೊಂಡರು; ಇವರಿಗೆ ತಮ್ಮ ಮಹಿಮೆಯನ್ನು ವ್ಯಕ್ತಪಡಿಸಿದರು; ಇವರೊಡನೆ ಒಡಂಬಡಿಕೆಯನ್ನು ಮಾಡಿಕೊಂಡರು; ಇವರಿಗೆ ಧರ್ಮಶಾಸ್ತ್ರವನ್ನೂ ಸಭಾರಾಧನೆಯನ್ನೂ ವಾಗ್ದಾನಗಳನ್ನೂ ದಯಪಾಲಿಸಿದರು.
5 : ಸಹ ಇವರಿಗೆ ಸೇರಿದವರೇ. ಶಾರೀರಿಕವಾಗಿ ಕ್ರಿಸ್ತಯೇಸುವೂ ಇವರ ವಂಶದಲ್ಲಿ ಹುಟ್ಟಿದವರೇ. ಸಕಲಕ್ಕೂ ಒಡೆಯರಾದ ದೇವರಿಗೆ ನಿರಂತರ ಸ್ತುತಿಸ್ತೋತ್ರ ಸಲ್ಲಲಿ, ಆಮೆನ್.
6 : ದೇವರ ವಾಗ್ದಾನ ವಿಫಲವಾಯಿತೆಂದು ನಾನು ಹೇಳುತ್ತಿಲ್ಲ. ಇಸ್ರಯೇಲ್ ವಂಶದಲ್ಲಿ ಹುಟ್ಟಿದವರೆಲ್ಲರೂ ನಿಜವಾದ ಇಸ್ರಯೇಲರಲ್ಲ.
7 : ಅಂತೆಯೇ ಅಬ್ರಹಾಮನ ಸಂತತಿಯಲ್ಲಿ ಹುಟ್ಟಿದ ಮಾತ್ರಕ್ಕೆ ಎಲ್ಲರೂ ಅಬ್ರಹಾಮನ ಮಕ್ಕಳಾಗುವುದಿಲ್ಲ. “ಇಸಾಕನಿಂದ ಹುಟ್ಟುವವರು ನಿನ್ನ ಸಂತತಿ ಎನಿಸಿಕೊಳ್ಳುವರು,” ಎಂದು ದೇವರು ಅಬ್ರಹಾಮನಿಗೆ ನುಡಿದರು.
8 : ಈ ಮಾತಿನ ಅರ್ಥವೇನೆಂದರೆ; ಶರೀರ ಸಂಬಂಧದಿಂದ ಹುಟ್ಟಿದವರೆಲ್ಲರೂ ದೇವರ ಮಕ್ಕಳಾಗುವುದಿಲ್ಲ; ದೈವವಾಗ್ದಾನದ ಪರಿಣಾಮವಾಗಿ ಹುಟ್ಟಿದವರೇ ನಿಜವಾಗಿಯೂ ಅಬ್ರಹಾಮನ ಸಂತತಿ ಎನಿಸಿಕೊಳ್ಳುವರು.
9 : ಆ ವಾಗ್ದಾನ ಹೀಗಿತ್ತು: “ನಿಯಮಿತ ಕಾಲದಲ್ಲಿ ನಾನು ಮರಳಿ ಬರುವೆನು. ಆಗ ಸಾರಳಿಗೆ ಒಬ್ಬ ಮಗನಿರುವನು.”
10 : ಅಷ್ಟು ಮಾತ್ರವಲ್ಲ, ನಮ್ಮ ಮೂಲಪಿತ ಇಸಾಕನಿಂದ ರೆಬೆಕ್ಕಳಿಗೆ ಅವಳಿಜವಳಿ ಮಕ್ಕಳಾದರು.
11 : ಅವರು ಹುಟ್ಟುವುದಕ್ಕೆ ಮುಂಚೆಯೇ, ಒಳ್ಳೆಯದನ್ನಾಗಲಿ ಕೆಟ್ಟದ್ದನ್ನಾಗಲಿ ಮಾಡುವುದಕ್ಕೆ ಮೊದಲೇ, “ಹಿರಿಯವನು ಕಿರಿಯವನಿಗೆ ಸೇವೆ ಮಾಡುವನು,” ಎಂದು ಆಕೆಗೆ ಹೇಳಲಾಗಿತ್ತು.
12 : ಇದರಿಂದ ದೇವರು ತಮಗಿಷ್ಟ ಬಂದವರನ್ನು ಆರಿಸಿಕೊಳ್ಳುತ್ತಾರೆಂಬ ಸಂಕಲ್ಪವು ಸ್ಥಿರಗೊಂಡಿತು. ಈ ಸಂಕಲ್ಪ ಮಾನವನು ಸಾಧಿಸುವ ಸತ್ಕಾರ್ಯಗಳ ಮೇಲೆ ಅಲ್ಲ, ಕರೆನೀಡುವ ದೇವರ ಚಿತ್ತದ ಮೇಲೆ ನೆಲೆಗೊಂಡಿದೆ.
13 : ಅಂತೆಯೇ, “ನಾನು ಯಕೋಬನನ್ನು ಪ್ರೀತಿಸಿದೆನು, ಏಸಾವನನ್ನು ದ್ವೇಷಿಸಿದೆನು,” ಎಂದು ಪವಿತ್ರಗ್ರಂಥದಲ್ಲಿ ಲಿಖಿತವಾಗಿದೆ.
14 : ಹೀಗಿರಲಾಗಿ, ನಾವು ಏನೆಂದು ಹೇಳೋಣ? ದೇವರಲ್ಲಿ ಅನ್ಯಾಯವಿದೆಯೆಂದು ಹೇಳೋಣವೇ? ಎಂದಿಗೂ ಅಲ್ಲ.
15 ಏಕೆಂದರೆ ದೇವರೇ ಮೋಶೆಗೆ ಈ ರೀತಿ ಹೇಳಿದ್ದಾರೆ: “ಯಾರ ಮೇಲೆ ದಯೆತೋರಲು ನನಗೆ ಇಷ್ಟವಿದೆಯೋ ಅವರ ಮೇಲೆ ದಯೆತೋರುವೆನು ಯಾರ ಮೇಲೆ ಕನಿಕರತೋರಲು ನನಗೆ ಮನಸ್ಸಿದೆಯೋ ಅವರ ಮೇಲೆ ಕನಿಕರ ತೋರುವೆನು.”
16 : ದೇವರ ದಯೆ ದೊರಕುವುದು ಮಾನವನ ಇಚ್ಛೆಯಿಂದಲ್ಲ, ಅವನ ಪ್ರಯತ್ನದಿಂದಲೂ ಅಲ್ಲ. ಅದು ದೊರಕುವುದು ದೇವರ ಕರುಣೆಯಿಂದಲೇ.
17 : ಪವಿತ್ರ ಗ್ರಂಥದಲ್ಲಿ ಫರೋಹನಿಗೆ ಹೀಗೆಂದು ಹೇಳಲಾಗಿದೆ: “ನಾನು ನಿನ್ನಲ್ಲಿ ನನ್ನ ಶಕ್ತಿಯನ್ನು ಪ್ರದರ್ಶಿಸುವ ಸಲುವಾಗಿ ಹಾಗು ಜಗತ್ತಿನಲ್ಲೆಲ್ಲಾ ನನ್ನ ಹೆಸರನ್ನು ಪ್ರಖ್ಯಾತಪಡಿಸಿಕೊಳ್ಳುವ ಸಲುವಾಗಿ ನಿನ್ನನ್ನು ಉನ್ನತಸ್ಥಾನಕ್ಕೆ ಏರಿಸಿದೆನು.”
18 : ದೇವರ ಇಚ್ಛೆಗೆ ಅನುಗುಣವಾಗಿ ಮಾನವರಿಗೆ ಕರುಣೆಯೂ ಲಭಿಸುತ್ತದೆ, ಕಾಠಿಣ್ಯವೂ ಲಭಿಸುತ್ತದೆ.
19 : “ಹಾಗಾದರೆ ದೇವರು ಹೇಗೆ ತಾನೆ ಮಾನವನನ್ನು ಅಪರಾಧಿ ಎಂದು ನಿರ್ಣಯಿಸಬಲ್ಲರು? ಅವರ ಚಿತ್ತವನ್ನು ವಿರೋಧಿಸಲು ಯಾರಿಗೆ ಸಾಧ್ಯ” ಎಂದು ನಿಮ್ಮಲ್ಲಿ ಒಬ್ಬನು ಕೇಳಬಹುದು.
20 : ಹುಲು ಮಾನವಾ, ದೇವರೊಡನೆ ವಾದಿಸಲು ನೀನಾರು? ಮಡಿಕೆಯು ತನ್ನನ್ನು ಮಾಡಿದವನನ್ನು ನೋಡಿ, “ನನ್ನನ್ನು ಹೀಗೇಕೆ ಮಾಡಿದೆ” ಎಂದು ಕೇಳುವುದುಂಟೇ?
21 : ಒಂದೇ ಮಣ್ಣಿನ ಮುದ್ದೆಯಿಂದ ಎರಡು ಕುಡಿಕೆಗಳನ್ನು, ಅಂದರೆ ಒಂದನ್ನು ವಿಶೇಷ ಬಳಕೆಗೂ ಇನ್ನೊಂದನ್ನು ಸಾಮಾನ್ಯ ಬಳಕೆಗೂ ಮಾಡುವ ಅಧಿಕಾರ ಕುಂಬಾರನಿಗೆ ಇಲ್ಲವೆ?
22 : ದೇವರ ವಿಷಯದಲ್ಲೂ ಅಂತೆಯೇ. ದೇವರು ತಮ್ಮ ಕೋಪಾಗ್ನಿಯನ್ನು ಪ್ರದರ್ಶಿಸಿ, ತಮ್ಮ ಶಕ್ತಿಯನ್ನು ಪ್ರಕಟಿಸಲು ಬಯಸಿದರು. ಹಾಗೆಮಾಡದೆ ವಿಕೋಪಕ್ಕೂ ವಿನಾಶಕ್ಕೂ ಮಾಡಲಾಗಿದ್ದ ಕುಡಿಕೆಯನ್ನು ಹೋಲುವವರನ್ನು ಅತ್ಯಂತ ಸಹನೆಯಿಂದ ಸೈರಿಸಿಕೊಂಡರಾದರೆ, ಯಾರು ಏನನ್ನು ತಾನೇ ಹೇಳಲಾದೀತು?
23 : ಈ ಮೂಲಕ ತಮ್ಮ ಕರುಣೆಯನ್ನು ಹೊಂದಲು ಅವರು ಮೊದಲೇ ತಯಾರಿಸಿದ್ದ ಕುಡಿಕೆಯನ್ನು ಹೋಲುವವರಿಗೆ ದೇವರು ತಮ್ಮ ಮಹಿಮಾತಿಶಯವನ್ನು ತೋರ್ಪಡಿಸಲು ಇಚ್ಛಿಸಿದರು.
24 : ಯೆಹೂದ್ಯ ಜನಾಂಗದಿಂದ ಮಾತ್ರವಲ್ಲ, ಇತರ ಜನಾಂಗದಿಂದಲೂ ಕರೆಯಲಾಗಿರುವ ನಾವೇ ಈ ಕರುಣೆಯ ಕುಡಿಕೆಗಳು.
25 : ಹೋಶೇಯನ ಗ್ರಂಥದಲ್ಲಿ ದೇವರೇ ಹೀಗೆ ಹೇಳಿದ್ದಾರೆ: “ನನ್ನ ಜನರಲ್ಲದವರನ್ನು ನನ್ನ ಜನರೆಂದು ಕರೆಯುವೆನು. ನನಗೆ ಪ್ರಿಯವಲ್ಲದ ನಾಡನ್ನು ನನ್ನ ಪ್ರಿಯತಮೆ ಎಂದು ಕರೆಯುವೆನು.
26 : ‘ನೀವು ನನ್ನ ಜನರಲ್ಲ’ ಎಂದು ಯಾವ ಸ್ಥಳದಲ್ಲಿ ಬರೆಯಲಾಗಿತ್ತೋ ಅದೇ ಸ್ಥಳದಲ್ಲಿ ‘ಅವರನ್ನು ಜೀವಂತ ದೇವರ ಮಕ್ಕಳು’ ಎಂದು ಕರೆಯಲಾಗುವುದು.’
27 : ಇಸ್ರಯೇಲಿನ ಬಗ್ಗೆ ಯೆಶಾಯನು ಹೀಗೆಂದು ಘೋಷಿಸಿದ್ದಾನೆ: “ಶೀಘ್ರದಲ್ಲೇ ಸರ್ವೇಶ್ವರ ವಿಶ್ವದ ಲೆಕ್ಕಾಚಾರವನ್ನು ಪೂರ್ತಿಯಾಗಿ ತೆಗೆದುಕೊಳ್ಳುವರು.
28 : ಇಸ್ರಯೇಲಿನ ಜನರು ಸಮುದ್ರ ತೀರದ ಮರಳಿನಷ್ಟು ಅಸಂಖ್ಯಾತರಾಗಿದ್ದರೂ ಅವರಲ್ಲಿ ಕೆಲವರೇ ಜೀವೋದ್ಧಾರವನ್ನು ಹೊಂದುವರು.”
29 : ಅದೇ ಅಭಿಪ್ರಾಯದಿಂದ ಯೆಶಾಯನು ಮತ್ತೊಂದು ವಚನದಲ್ಲಿ - “ಸರ್ವಶಕ್ತ ಸರ್ವೇಶ್ವರ ನಮ್ಮ ಸಂತತಿಯಲ್ಲಿ ಕೆಲವರನ್ನಾದರೂ ಉಳಿಸದೆ ಹೋಗಿದ್ದರೆ, ಸೊದೋಮಿನ ಗತಿಯೇ ನಮಗಾಗುತ್ತಿತ್ತು. ಗೊಮೋರದ ದುರ್ಗತಿಯೇ ನಮ್ಮದಾಗುತ್ತಿತ್ತು,” ಎಂದು ಹೇಳಿದ್ದಾನೆ.
30 ಇಸ್ರಯೇಲರಾದರೋ ದೇವರೊಡನೆ ಸತ್ಸಂಬಂಧವನ್ನು ದೊರಕಿಸುವ ಧರ್ಮವನ್ನು ಅರಸುತ್ತಿದ್ದರೂ ಅದನ್ನು ಕಂಡುಹಿಡಿದಿಲ್ಲ.
31 ಇದಕ್ಕೆ ಕಾರಣವಾದರೂ ಏನು? ಅವರು ಸತ್ಕಾರ್ಯಗಳನ್ನು ಆಧಾರವಾಗಿಟ್ಟುಕೊಂಡರೇ ಹೊರತು ವಿಶ್ವಾಸವನ್ನಲ್ಲ.
32 ಆದ್ದರಿಂದಲೇ ಅವರು ಎಡವುಕಲ್ಲನ್ನು ಎಡವಿಬಿದ್ದರು.
33 ಪವಿತ್ರಗ್ರಂಥದಲ್ಲಿ ಹೀಗೆಂದು ಲಿಖಿತವಾಗಿದೆ: “ಇಗೋ, ಎಡವಿ ನೆಲಕ್ಕುರುಳುವಂತೆ ಮಾಡುವ ಕಲ್ಲನ್ನೂ ಮುಗ್ಗರಿಸಿ ಬೀಳುವಂತೆ ಮಾಡುವ ಬಂಡೆಯನ್ನೂ